ಜಯರಾಮ್ ಕಾರ್ತಿಕ್, ಅನುಪಮ್ ಗೌಡ, ಸಿಹಿಕಹಿ ಚಂದ್ರು, ಜಯ ಶ್ರೀನಿವಾಸನ್
ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ.
ಬೆಂಗಳೂರು ಹೊರವಲದ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯ ಬಿಗ್ ಬಾಸ್ ಮನೆಗೆ ಈ ಬಾರಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಪ್ರವೇಶ ಪಡೆದಿದ್ದಾರೆ.
ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಪಡೆದವರು: ಜಯ ಶ್ರೀನಿವಾಸನ್ (ಸಂಖ್ಯಾ ಜ್ಯೋತಿಷಿ), ಮೇಘಾ, ದಯಾಳ್ ಪದ್ಮನಾಭ (ನಿರ್ದೇಶಕ) ಸಿಹಿ ಕಹಿ ಚಂದ್ರು (ಹಿರಿಯ ನಟ), ಶ್ರುತಿ, ಅನುಪಮಾ ಗೌಡ (ನಟಿ), ರಿಯಾಜ್ ಭಾಷಾ, ನಿವೇದಿತಾ ಗೌಡ, ಸಮೀರ್ ಆಚಾರ್ಯ (ಜ್ಯೋತಿಷಿ), ಕಾರ್ತಿಕ್ ಜಯರಾಮ್ (ನಟ), ಆಶಿತಾ ಚಂದ್ರಪ್ಪ, ದೀವಾಕರ್ (ಸೆಲ್ಸ್‌ಮನ್ ), ತೇಜಸ್ವಿನಿ ಪ್ರಕಾಶ್ (ನಟಿ), ಚಂದನ್ ಶೆಟ್ಟಿ (ಹಾಡುಗಾರ), ಸುಮಾ (ಮ್ಯಾಜಿಸಿಯನ್), ಜಗನ್ (ನಟ). ಬಿಗ್ ಬಾಸ್ ಮನೆಗೆ ತೆರಳಿದ್ದಾರೆ.
ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಎಲ್ಲ ಸ್ಪರ್ಧಿಗಳಿಗೆ ಶುಭ ಕೋರಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರತಿ ರಾತ್ರಿ 8 ಗಂಟೆಗೆ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗಲಿದೆ.