ಬೆಂಗಳೂರು: ಮಾಸ್ಟರ್ ಪೀಸ್ ಮತ್ತು ಮಿ. ಅಂಡ್ ಮಿಸಸ್ ರಾಮಾಚಾರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಸ್ಯಾಂಡಲ್ ವುಡ್ ಹಾಟ್ ಫೇವರಿಟ್ ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ 2 ಭಾಗವಾಗಿ ತೆರೆಕಾಣಲಿದೆ.
ಮ್ಯಾಗ್ನಮ್ ಒಪಸ್ ನಿರ್ಮಾಣದ ಸಿನಿಮಾದಲ್ಲಿ ಯಶ್ 70 ಹಾಗೂ 80 ರ ದಶಕದ ಡಾನ್ ಪಾತ್ರದಲ್ಲಿ ಯಶ್ ನಟಿಸುತ್ತಿದ್ದಾರೆ, ಕಳೆದ ಕೆಲವು ತಿಂಗಳಿಂದ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಹೊಂಬಾಳೆ ಪಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಂಗದೂರ್ ನಿರ್ಮಾಣದ ಕೆಜಿಎಫ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ.
ಕರ್ನಾಟಕದಿಂದ ತಯಾರಾಗುತ್ತಿರುವ ಬಹು ವೆಚ್ಚದಾಯಕ ಸಿನಿಮಾ ಇದಾಗಿದೆ, ಕೆಜಿಎಫ್ ಸಿನಿಮಾದ ಇತ್ತೀಚಿನ ಸುದ್ದಿಯೆಂದರೇ, ಸಿನಿಮಾವನ್ನು ವಿಭಿನ್ನವಾಗಿ ಹೊರತರಲು ಸಿನಿಮಾತಂಡ ಯೋಜನೆ ರೂಪಿಸುತ್ತಿದೆ. ಐದು ಭಾಷೆಗಳಲ್ಲಿ ಎರಡು ಭಾಗವಾಗಿ ಸಿನಿಮಾ ರಿಲೀಸ್ ಮಾಡಲು ಯೋಜಿಸಲಾಗುತ್ತಿದೆ.
ಈ ವಿಷಯ ಕಳೆದ ಕೆಲವು ತಿಂಗಳಿನಿಂದ ಕೇಳಿ ಬರುತ್ತಿದೆ, ಉತ್ತಮ ಕಥೆ, ಹಾಗೂ ಅದ್ದೂರಿ ವೆಚ್ಚದಲ್ಲಿ ಸಿನಿಮಾ ತಯಾರಾಗುತ್ತಿರುವ ಕಾರಣ ನಿರ್ದೇಶಕರು ಕೆಜಿಎಫ್ ಸಿನಿಮಾವನ್ನು ಎರಡು ಭಾಗಗಳಾಗಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎಂಗು ಮೂಲಗಳು ತಿಳಿಸಿವೆ,
ರಕ್ತ ಚರಿತ್ರ, ಗ್ಯಾಂಗ್ ಆಪ್ ವಸ್ಸೇಯ್ಪೂರ್ ಹಾಗೂ ಇತ್ತೀಚಿನ ಬಾಹುಬಲಿ ಸಿನಿಮಾದಂತೆ ಕೆಜಿಎಫ್ ಸಿನಿಮಾ 2 ಭಾಗವಾಗಿ ರಿಲೀಸ್ ಆಗಲಿದೆ,
5 ಭಾಷೆಗಳಲ್ಲಿ ತಯಾರಾಗುತ್ತಿರುವ ಕೆಜಿಎಫ್ ಸಿನಿಮಾದ ಆಡಿಯೋಗೆ ಈಗಾಗಲೇ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ. ಸ್ಯಾಟಲೈಟ್ ಮತ್ತು ಹಂಚಿಕೆ ಹಕ್ಕುಗಳನ್ನು ದಕ್ಷಿಣ ಭಾರತದ ಭಾಷೆಗಳು ಮತ್ತು ಹಿಂದಿಗೆ ಈಗಾಗಲೇ ನೀಡಲಾಗಿದೆ. ಸಿನಿಮಾದ ಆಡಿಯೋ ಹಕ್ಕುಗಳಿಗೆ ಹಿಂದೆಂದೂ ಇರದ ಬೇಡಿಕೆ ಬಂದಿದೆ. ಸಿನಿಮಾ ವ್ಯಾಪಾರಿಗಳು ಕೆಜಿಎಫ್ ಮತ್ತೊಂದು ಬಾಹುಬಲಿಯಂತಾಗುವ ಭರವಸೆಯಲ್ಲಿದ್ದಾರೆ.
ಬಾಹುಬಲಿ ರೇಂಜ್ ನಲ್ಲಿ ಈ ಸಿನಿಮಾ ಕೂಡ ಉತ್ತಮ ಆದಾಯತರಲಿದೆ ಎಂದು ನಂಬಿರುವ ಕೆಲವೊಂದು ದೊಡ್ಡ ದೊಡ್ಡ ಕಂಪನಿಗಳು ಕೆಜಿಎಫ್ ಹಿಂದೆ ಬಿದ್ದಿವೆ. ಜನಪ್ರಿಯ ನಟನಾಗಿರುವ ಯಶ್ ಅವರಿಗೆ ಉತ್ತರ ಭಾರತದಲ್ಲೂ ಕೂಡ ಫೇಮಸ್ ಆಗಿ ಬಹು ದೊಡ್ಡ ಅಭಿಮಾನಿ ಬಳಗವೇ ಇದೆ. ಯಶ್ ಅವರ ಹಲವು ಸಿನಿಮಾಗಳು ಬೋಜ್ ಪುರಿ ಮತ್ತು ಹಿಂದಿಗೆ ಡಬ್ ಆಗಿವೆ. ಅವರ ಸ್ಟಾರಾ ಪವರ್ ಕೆಜಿಎಫ್ ಗೆ ವರದಾನವಾಗಲಿದೆ.
ಉಗ್ರಂ ಮೂಲಕ ಹೆಸರುವಾಸಿಯಾಗಿರುವ ಪ್ರಶಾಂತ್ ನೀಲ್ ಮತ್ತೆ ತಮ್ಮ ಪ್ರತಿಭೆ ಒರೆ ಹಚ್ಚಲು ಮುಂದಾಗಿದ್ದಾರೆ. ಯಶ್ ರಾಕಿ ಎಂಬ ಪಾತ್ರದಲ್ಲಿ ನಟಿಸಿದ್ದು, ಶ್ರೀನಿಧಿ ಶೆಟ್ಟಿ ಯಶ್ ಗೆ ನಾಯಕಿಯಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos