ಕಾಲಿವುಡ್ ನಟ ವಿಜಯ್ ನಟನೆಯ ಬಹುನಿರೀಕ್ಷಿತ ಚಿತ್ರ ಮೆರ್ಸಲ್ ಬುಧವಾರ ಬಿಡುಗಡೆಯಾಗಿದ್ದು, ತ್ರಿಪಾತ್ರದಲ್ಲಿ ನಟ ವಿಜಯ್ ಅಭಿನಯಿಸಿದ್ದಾರೆ.
ವಿಜಯ್ ನಟನೆಯ ಮೆರ್ಸಲ್ ಚಿತ್ರಕ್ಕೆ ತಮಿಳುನಾಡು ಬಿಜೆಪಿ ಅಧ್ಯಕ್ಷ ತಮಿಳ್ಸಾಯಿ ಸೌಂದರ್ ರಾಜನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ರಾಜಕೀಯದ ಬಗ್ಗೆ ನೇರವಾಗಿ ಎಲ್ಲೂ ಮಾತನಾಡದೇ ಇದ್ದರೂ ಇತ್ತೀಚೆಗಷ್ಟೇ ಜಾರಿಯಾದ ಜಿಎಸ್ ಟಿ, ಡಿಜಿಟಲ್ ಇಂಡಿಯಾದ ಬಗ್ಗೆ ಪ್ರಸ್ತಾಪವಿದ್ದು, ತಮಿಳುನಾಡು ಬಿಜೆಪಿ ಮೆರ್ಸಲ್ ನಲ್ಲಿರುವ ಜಿಎಸ್ ಟಿ ಹಾಗೂ ಡಿಜಿಟಲ್ ಇಂಡಿಯಾ ಕುರಿತ ಸಂಭಾಷಣೆಗೆ ಕತ್ತರಿ ಹಾಕಬೇಕೆಂದು ಪಟ್ಟು ಹಿಡಿದಿದೆ.
ಡಿಜಿಟಲ್ ಇಂಡಿಯಾ ಹಾಗೂ ಜಿಎಸ್ ಟಿ ಸಂಭಾಷಣೆಗೆ ಕತ್ತರಿಪ್ರಯೋಗ ಮಾಡದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.