ಗಿಡ ನೆಟ್ಟು ಪರಿಸರ ಪ್ರೇಮಿ ದೀಪಾವಳಿ ಆಚರಿಸಿದ ನಟರಾಜ್, ಧರ್ಮಣ್ಣ
ಕಡೂರು: ಇತ್ತೀಚಿನ ದಿನಗಳಲ್ಲಿ ಹೊಸತನಕ್ಕೆ ಸುದ್ದಿಯಾಗುತ್ತಿರುವ ರಾಮಾ ರಾಮಾ ರೇ ಚಿತ್ರದ ನಟರಾಜ್ ಹಾಗೂ ಧರ್ಮಣ್ಣ ಚಿತ್ರರಂಗದ ಹೊರತಾಗಿ ಸಾಮಾಜಿಕ ಕೆಲಸಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಈ ನಟ ದ್ವಯರು ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.
ಪರಿಸರ ಸ್ನೇಹಿ ದೀಪಾವಳಿಯನ್ನಾಚರಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ನಟರಾಜ್, ಧರ್ಮಣ್ಣ, ಖಳನಾಯಕನಾಗಿ ಬೆಳಕಿಗೆ ಬರುತ್ತಿರುವ ಚೇತನ್ ಹಾಗೂ ಜೇನುಗೂಡು ಯುವಕಸಂಘದ ಯುವಕರು ಕಡೂರಿನಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ದೀಪಾವಳಿಯಂದು ಪರಿಸರದಲ್ಲಿ ಗಿಡನೆಡುವ ಮೂಲಕ ಸಾಕಾರಗೊಳಿಸಿದ್ದಾರೆ.
ಪರಿಸರ ಪ್ರೇಮಿ ಬೇವು, ನೇರಲೆ, ಹೊಂಗೆ ಮರಗಳನ್ನು ನೆಟ್ಟಿರುವುದು ಜೇನುಗೂಡು ಯುವಕಸಂಘದ ಯುವಕರು ಆಚರಿಸಿರುವ ದೀಪಾವಳಿಯ ವಿಶೇಷ. 15 ಜನರ ತಂಡ ದಾಸರಹಳ್ಳಿ ಸುತ್ತಮುತ್ತಲು ಗಿಡ ನೆಟ್ಟಿದ್ದಾರೆ. ನಮ್ಮ ಯುವಕರ ತಂಡ ಪ್ರತೀವರ್ಷ ಹೀಗೆ ಒಬ್ಬರೇ ಹೋಗಿ ಗಿಡನೆಟ್ಟು ಬರುತ್ತಿದ್ದು ಇಂದು ಅವರ ಜೊತೆ ಒಂದು ತಂಡವೇ ಸಹಕರಿಸುತ್ತಿರುವುದು ನಮ್ಮ ಉದ್ದೇಶಕ್ಕೆ ನೂರು ಆನೆ ಬಲ ಬಂದಿದೆ ಅನ್ನುತ್ತಾರೆ ನಟರಾಜ್.