ಸಿನಿಮಾ ಸುದ್ದಿ

'9 ವರ್ಷದ ಹಿಂದೆ ಚೌಕ ಸಿನಿಮಾ ರಿಲೀಸ್ ಆಗಿದಿದ್ದರೆ ರಜತ ಮಹೋತ್ಸವ ಆಚರಿಸುತ್ತಿತ್ತು'

Shilpa D
ಬೆಂಗಳೂರು: ತರುಣ್ ಸುಧೀರ್  ನಿರ್ದೇಶನದ ಚೌಕ ಸಿನಿಮಾ ಕಳೆದ ಫೆಬ್ರವರಿಯಲ್ಲಿ ರಿಲೀಸ್ ಆಗಿ 125 ದಿನಗಳ ಪ್ರದರ್ಶನ ಕಂಡಿದೆ. 2017ರಲ್ಲಿ ರಿಲೀಸ್ ಆದ ಚಿತ್ರಗಳಲ್ಲಿ ಅತಿ ಹೆಚ್ಚು ಪ್ರಶಂಸೆ ಪಡೆದ ಸಿನಿಮಾವಾಗಿದೆ. 
ಇತ್ತೀಚೆಗೆ ನಿರ್ಮಾಪಕ ಯೋಗಿ ದ್ವಾರಕೀಶ್ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ನಟ ದರ್ಶನ್ ಸೇರಿದಂತೆ ಎಲ್ಲಾ  ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿದ್ದರು.
ಸಿನಿಮಾದ ಸಂಭ್ರಮಾಚರಣೆ ಕಾರ್ಯಕ್ರಮ ವಿಳಂಬವಾಗಿದ್ದನ್ನು ನಿರ್ದೇಶಕ ತರುಣ್ ಸುಧೀರ್ ಒಪ್ಪಿಕೊಂಡರು.ಇಡೀ ಚಿತ್ರತಂಡ ದರ್ಶನ್ ಅವರಿಗಾಗಿ ಕಾಯುತ್ತಿತ್ತು, ದರ್ಶನ್ ಶೂಟಿಂಗ್ ನಲ್ಲಿ ಬ್ಯುಸಿಯಿದ್ದ ಕಾರಣ ಕಾರ್ಯಕ್ರಮ ಆಯೋಜಿಸುವುದು ತಡವಾಯಿತು, ದರ್ಶನ್ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಾವೇ ಖುದ್ದಾಗಿ ನಿಂತು ಎಲ್ಲಾ ತಂತ್ರಜ್ಞರಿಗೂ ಪ್ರಶಸ್ತಿ ಫಲಕ ನೀಡಿದರು ಎಂದು ತರುಣ್ ಸುಧೀರ್ ಹೇಳಿದ್ದಾರೆ.
ಈಗ ಏಕೆ 125 ದಿನದ ಪ್ರದರ್ಶನದ ಸಂಭ್ರಮಾಚರಣೆ ಎಂಬ ಪ್ರಶ್ನೆಗೆ ಉತ್ತರಿಸಿದ ತರುಣ್ ಸುಧೀರ್, ಚೌಕ ಸಿನಿಮಾ 9 ವರ್ಷಗಳ ಹಿಂದೆ ರೀಲಿಸ್ ಆಗಿದ್ದರೇ ಅದು ಸಿಲ್ವರ್ ಜ್ಯುಬಿಲಿ ಸಿನಿಮಾ ಎಂದು ಪರಿಗಣಿಸಲಾಗುತ್ತಿತ್ತು, ಸಿನಿಮಾಗೆ ಉತ್ತಮ ಪ್ರಚಾರ ನೀಡಲಿಲ್ಲ, ತನ್ನ ಸಾಮರ್ಥ್ಯದಿಂದಲೇ ಬೆಂಗಳೂರು ಮತ್ತು ಮೈಸೂರಿನ ಹಲವು ಮಲ್ಟಿಫ್ಲೆಕ್ಸ್ ಗಳಲ್ಲಿ ಚೌಕ ಸಿನಿಮಾ ಪ್ರದರ್ಶನ ಕಂಡಿದೆ ಎಂದು ಹೇಳಿದ್ದಾರೆ.
ಇನ್ನೂ ತರುಣ್ ಎರಡನೇ ಸಿನಿಮಾ ನಿರ್ದೇಶನ ಮಾಡಲಿದ್ದು, ದರ್ಶನ್ ಅದರಲ್ಲಿ ನಾಯಕರಾಗಿಲಿದ್ದಾರೆ. ಈ ಮೊದಲು ರಿಮೇಕ್ ಸಿನಿಮಾ ಮಾಡುವುದಾಗಿ ವರದಿಯಾಗಿತ್ತು, ಆದರೆ ಇದಕ್ಕೆ ಸ್ಪಷ್ಟೀಕರಣ ನೀಡಿದ ತರುಣ್, ದರ್ಶನ್ ಗಾಗಿ ನೈಜಕಥೆ ಬರೆಯುತ್ತಿದ್ದು, ಅದಕ್ಕಾಗಿಯೇ ನಿಧಾನವಾಗುತ್ತಿದೆ ಎಂದು ತಿಳಿಸಿದ್ದಾರೆ. 
ಎರಡನೇ ಸಿನಿಮಾ ನಿರ್ದೇಶನ ಮಾಡುತ್ತಿರುವ ನನಗೆ ಮೊದಲನೇ ಸಿನಿಮಾದಷ್ಟೇ ಎರಡನೇ ಚಿತ್ರ ಕೂಡ ಮಹತ್ವವಾದದ್ದು, ಏಕಂದರೆ ಮೊದಲ ಸಿನಿಮಾ ಆಕಸ್ಮಿಕವಾಗಿ ಹಿಟ್ ಆಯಿತು ಎಂದು ಜನ ಅಂದುಕೊಳ್ಳುತ್ತಾರೆ. ಆಕಸ್ಮಿಕವಾಗಿ ಸಿಗುವ ಹಿಟ್ ನನಗೆ ಬೇಡ ಎಂದು ಸ್ಪಷ್ಟ ಪಡಿಸಿದ್ದಾರೆ.
ಚೌಕ ರಿಲೀಸ್ ಗು ಮುನ್ನವೇ ನಾನು ಮತ್ತೊಂದು ಸಿನಿಮಾ ನಿರ್ದೇಶಿಸಬೇಕೆಂದು ದರ್ಶನ್ ಬಯಸಿದ್ದರು, ಜೊತೆಗೆ ವೀರಂ ಸಿನಿಮಾ ರಿಮೇಕ್ ಮಾಡುವಂತೆ ಹೇಳಿದ್ದರು, ಅದಕ್ಕೆ ನಾನು ಒಪ್ಪಿದ್ದೇ,  ಆದರೆ ಚೌಕ ಬಿಡುಗಡೆಯಾದ ನಂತರ ನನ್ನ ಸಾಮರ್ಥ್ಯ ನೋಡಿ ದರ್ಶನ್ ಒರಿಜಿನಲ್ ವಿಷಯ ಇಟ್ಟುಕೊಂಡು ಕಥೆ ಬರೆಯುವಂತೆ ಹೇಳಿದರು. ನನಗೆ ಸ್ಕ್ರಿಪ್ಟ್ ಬರೆಯಲು ತಿಳಿಸಿದರು,  ನಾನು ಒಂದು ಸಾಲಿನ ಕಥೆ ಹೇಳಿದ ಕೂಡಲೇ ಒಪ್ಪಿಕೊಂಡು ಆಶೀರ್ವಾದ ಮಾಡಿದರು ಎಂದು ತರುಣ್ ತಿಳಿಸಿದ್ದಾರೆ, ನಾನು ರಿಮೇಕ್ ವಿರೋಧಿಯಲ್ಲ, ನನ್ನ ಸಹೋದರ ನಂದ ಕಿಶೋರ್ ಕೆಲವು ರಿಮೇಕ್ ಸಿನಿಮಾ ಮಾಡಿದ್ದು ನಾನು ಕೂಡ ಕೆಲವೊಂದರಲ್ಲಿ ಕೆಲಸ ಮಾಡಿದ್ದೇನೆ, ನಾನು ನನ್ನ ಎರಡಮೇ ಸಿನಿಮಾವನ್ನು ರಿಮೇಕ್ ಮಾಡುವುದಿಲ್ಲ, ಉತ್ತಮ ಕಥೆಯೊಂದಿಗೆ ಬರುತ್ತೇನೆ ಎಂದು ಹೇಳಿದ್ದಾರೆ.
SCROLL FOR NEXT