ಗೌರಿ ಶಿಖರ್ ಮತ್ತು ರಂಜನಿ ರಾಘವನ್
ಬೆಂಗಳೂರು: ಗೌರಿಶಿಖರ್ ಅಭಿನಯದ ರಾಜಹಂಸ ಸಿನಿಮಾ ಶುಕ್ರವಾರ ತೆರೆ ಕಾಣುತ್ತಿದೆ.
ಜೋಕಾಲಿ ಸಿನಿಮಾದೊಂದಿಗೆ ತಮ್ಮ ವೃತ್ತಿ ಆರಂಭಿಸಿರುವ ಗೌರಿ ಶಂಕರ್, ಗೌರಿಶಿಖರ್ ಎಂದೇ ಪ್ರಸಿದ್ಧಿಯಾಗಿದ್ದಾರೆ, ರಾಜಹಂಸ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಪಾಸಿಟಿವ್ ರೆಸ್ಪಾನ್ಸ್ ಬಂದಿದೆ. ನನ್ನ ಆತ್ಮ ವಿಶ್ವಾಸ ಹೆಚ್ಚಿದೆ.
ರಾಜಹಂಸ ಟ್ರೇಲರ್ ಅನ್ನು ಈಗಾಗಲೇ 3 ಲಕ್ಷ ಮಂದಿ ವೀಕ್ಷಿಸಿದ್ದಾರೆ, ಇದರರ್ಥ ನಾನು ಮತ್ತು ನನ್ನ ತಂಡ ಯುದ್ದದಲ್ಲಿ ಅರ್ಧ ಗೆದ್ದಂತೆ ಎಂದು ಹೇಳಿದ್ದಾರೆ, ಟ್ರೇಲರ್ ವೀಕ್ಷಿಸಿದ ಜನ ಸಿನಿಮಾ ನೋಡಲು ಕೂಡ ಇದೇ ರೀತಿಯ ಆಸಕ್ತಿ ತೋರುವ ಭರವಸೆ ವ್ಯಕ್ತ ಪಡಿಸಿದ್ದಾರೆ.
ತಮ್ಮ ಸ್ನೇಹಿತ ಸಹಾಯದೊಂದಿಗೆ ಗೌರಿ ಶಿಖರ್ ಸಿನಿಮಾ ನಿರ್ಮಿಸಿ ನಾಯಕನಾಗಿ ಅಭಿನಯಿಸಿದ್ದಾರೆ. ರಾಜಹಂಸ ಕಮರ್ಷಿಯಲ್ ಸಿನಿಮಾ, ಜೊತೆಗೆ ಪ್ರಣಯ, ಪ್ರೀತಿ, ಸಾಹಸ ದೃಶ್ಯಗಳಿಂದ ಕೂಡಿದ ಕೌಟುಂಬಿಕ ಚಿತ್ರವಾಗಿದೆ. ರಾಜಹಂಸ ಸಿನಿಮಾ 100 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದ್ದು, ಪುಟ್ಟಗೌರಿ ಮದುವೆ ಧಾರವಾಹಿಯ ರಂಜನಿ ರಾಘವನ್ ಗೌರಿಶಿಖರ್ ಗೆ ನಾಯಕಿಯಾಗಿ ನಟಿಸಿದ್ದಾರೆ.