1996ರಲ್ಲಿ ಬಿಡುಗಡೆಯಾಗಿದ್ದ ಹಾಲಿವುಡ್ 'ಶಿಲೋಹ್' ಚಿತ್ರದಲ್ಲಿ ಮಾರ್ಟಿ ಪ್ರೆಸ್ಟೋನ್ ಪಾತ್ರಧಾರಿ ಬ್ಲೇಕ್ ಹೆರಾನ್ ಮೃತದೇಹ ಪತ್ತೆಯಾಗಿದೆ.
35 ವರ್ಷದ ಬ್ಲೇಕ್ ಹೆರಾನ್ ಶಿಲೋಹ್ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದ್ದರು. ಇದಾದ ಬಳಿಕ ಹೆರಾನ್ ಯಾವುದೇ ಚಿತ್ರದಲ್ಲಿ ಅಭಿನಯಿಸಿರಲಿಲ್ಲ.
ಲಾಸ್ ಏಂಜಲೀಸ್ ನಲ್ಲಿನ ಅವರ ಮನೆಯಲ್ಲಿ ಬ್ಲೇಕ್ ಹೆರಾನ್ ಅವರ ಮೃತದೇಹ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹೆರಾನ್ ಗೆಳತಿ ಶುಕ್ರವಾರ ಬೆಳಗ್ಗೆ ಆತನ ಮನೆಗೆ ತೆರಳಿದಾಗ ಹೆರಾನ್ ಮೃತಪಟ್ಟಿರುವ ವಿಷಯ ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ ಹೆರಾನ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೆರಾಯಿನ್ ವ್ಯಸನಕ್ಕೆ ತುತ್ತಾಗಿದ್ದ ಹೆರಾನ್ ಇತ್ತೀಚೆಗಷ್ಟೇ ಪುನರ್ವಸತಿ ಕೇಂದ್ರದಿಂದ ಹೊರಬಂದಿದ್ದರು.