ಜಗ್ಗೇಶ್ 
ಸಿನಿಮಾ ಸುದ್ದಿ

'8ಎಂಎಂ' ನಲ್ಲಿ ನೆಗೆಟಿವ್ ರೋಲ್ ಗೆ ರಜನೀಕಾಂತ್ ಸ್ಫೂರ್ತಿ: ಜಗ್ಗೇಶ್

ನವರಸ ನಾಯಕ ಜಗ್ಗೇಶ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದರ ಮೊದಲ ಪೋಸ್ಟರ್ ಅನ್ನು ತಮ್ಮ ಟ್ವಿಟ್ಟರ್ ನಲ್ಲಿ...

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದರ ಮೊದಲ ಪೋಸ್ಟರ್ ಅನ್ನು ತಮ್ಮ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.
ಹರಿಕೃಷ್ಣ ನಿರ್ದೇಶನದ 8 ಎಂಎಂ ಎಂಬ ಶೀರ್ಷಿಕೆಯುಳ್ಳ ಸಿನಿಮಾದಲ್ಲಿ ಜಗ್ಗೇಶ್ ಸೀರಿಯಲ್ ಕಿಲ್ಲರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜಗ್ಗೇಶ್ ಗೆ ಪ್ರಸಿದ್ದ ಮೇಕಪ್ ಮ್ಯಾನ್ ಮಾದೇಗೌಡ ಹೊಸ ಲುಕ್ ನೀಡಿದ್ದಾರೆ. ಇದರ ಎಲ್ಲಾ ಕ್ರೆಡಿಟ್ ಕಳೆದ 35ವರ್ಷಗಳಿಂದ ಮೇಕಪ್ ಮಾಡುತ್ತಿರುವ ಮಾದೇಗೌಡ ಅವರಿಗೆ ಸಲ್ಲಿಸಿದ್ದಾರೆ.
ನಾನು ರಾಘವೇಂದ್ರ ಸ್ವಾಮಿಗಳ ಆರಾಧಕ.,ಅವರು ನನಗೆ ಹರಸಿದ್ದಾರೆ, ಒಬ್ಬ ನಟನಾದವನಿಗೆ ಇದು ತೀರಾ ಅಗತ್ಯವಾದ ವಿಷಯ ಎಂದು ಜಗ್ಗೇಶ್ ಹೇಳಿದ್ದಾರೆ.
8 ಎಂಎಂ ಬುಲೆಟ್ ಗಾತ್ರವನ್ನು ಸಿನಿಮಾಗೆ ಹೆಸರಿಡಲಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಕುಟುಂಬ ಹಾಗೂ ಸ್ನೇಹಿತರಿಂದ ನಿರಾಶೆಗೊಂಡು ತಪ್ಪು ದಾರಿ ಹಿಡಿಯುತ್ತಾನೆ, ನಂತರ ಸರಣಿಕೊಲೆಗಾರನಾಗುತ್ತಾನೆ. ಹಣ ಎಂಬುದು ಈ ಥ್ರಿಲ್ಲರ್ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಜಗ್ಗೇಶ್ ತಿಳಿಸಿದ್ದಾರೆ.
ಈ ಪಾತ್ರ ಮಾಡಲು ನನ್ನ ಸ್ನೇಹಿತ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಸ್ಫೂರ್ತಿ ಎಂದು ಹೇಳಿದ್ದಾರೆ. ಒಂದು ನಿಗದಿತ ವಯಸ್ಸು ಮತ್ತು ಅಪಾರ ಅನುಭವದ ನಂತರ ಮಾಮೂಲಿ ಪಾತ್ರಗಳಿಂದ ಹೊರಬರಬೇಕು ಎಂದು ನನಗನಿಸಿತು, ಹೀಗಾಗಿ ನಾನು ಈ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ ಎಂದು ಜಗ್ಗೇಶ್ ಹೇಳಿದ್ದಾರೆ.
ಈ ಚಿತ್ರದ ಪಾತ್ರಕ್ಕಾಗಿ ತಮ್ಮ ವ್ಯಕ್ತಿತ್ವ ಬದಲಾಯಿಸಿಕೊಳ್ಳಲು ಸುಮಾರು 8 ಸಿನಿಮಾಗಳ ಆಫರ್ ನಿರಾಕರಿಸಿದೆ,  ಒಂದೇ ರೀತಿಯ ಪಾತ್ರಗಳಲ್ಲಿ ಅಭಿನಯಸಿ ನನಗೆ ಸಾಕಾಗಿದೆ.ಈಗ ನನಗೆ ಒಂದು ಸ್ಥಾನ ಸಿಕ್ಕಿದೆ, ಹಾಗಾಗಿ ನನಗೆ ಬೇಕೆನಿಸುವ ಪಾತ್ರ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಸೆಪ್ಟಂಬರ್ 22 ರಂದು 8ಎಂಎಂ ಸಿನಿಮಾಗೆ ಅದ್ಧೂರಿ ಮೂಹೂರ್ತ ನಡೆಯಲಿದೆ, ರಾಕಿಂಗ್ ಸ್ಟಾರ್ ಯಶ್ ಕ್ಲಾಪ್ ಮಾಡಲಿದ್ದು, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕ್ಯಾಮೆರಾ ಗೆ ಚಾಲನೆ ನೀಡಲಿದ್ದಾರೆ. ಮುನಿರತ್ನ  ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT