ಸಿನಿಮಾ ಸುದ್ದಿ

ಚಲನಚಿತ್ರ ಪ್ರಮಾಣೀಕರಣ ಪ್ರಕ್ರಿಯೆ ಸಂಸ್ಕರಿಸಲು ಸಿಬಿಎಫ್ ಸಿ ನಿರ್ಧಾರ: ಪ್ರಸೂನ್ ಜೋಶಿ

Sumana Upadhyaya
ಮುಂಬೈ: ಚಲನಚಿತ್ರ ಪ್ರಮಾಣೀಕರಣ ಪ್ರಕ್ರಿಯೆಯನ್ನು ಸಂಸ್ಕರಿಸಲು ಉದ್ಯಮವನ್ನು ಸುಲಭಗೊಳಿಸಲು ಕೇಂದ್ರೀಯ ಚಲನಚಿತ್ರ ಮಂಡಳಿ(ಸಿಬಿಎಫ್ ಸಿ) ನಿರ್ಧರಿಸಿದೆ.
ಸಿಬಿಎಫ್ ಸಿಯ ಮುಖ್ಯಸ್ಥರಾಗಿ ಪ್ರಸೂನ್ ಜೋಶಿ ಅವರು ನೇಮಕಗೊಂಡ ತಿಂಗಳ ನಂತರ ನಡೆದ ಮಂಡಳಿಯ ಮೊದಲ ಸಭೆಯಲ್ಲಿ ನಿನ್ನೆ ಈ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯ ನಂತರ ಹೇಳಿಕೆ ಬಿಡುಗಡೆ ಮಾಡಿದ ಪ್ರಸೂನ್ ಜೋಶಿ, ಪರಸ್ಪರ ಗೌರವ ಮತ್ತು ಸಹಯೋಗವನ್ನು ತರಲು ಚಲನಚಿತ್ರ ಪ್ರಮಾಣೀಕರಣವನ್ನು ಸಂಸ್ಕರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬದಲಾಗುತ್ತಿರುವ ಸಿನಿಮಾ ಪ್ರಪಂಚದೆಡೆಗೆ ನಮ್ಮ ಸಂವೇದನೆಗಳನ್ನು ಸ್ಥಿರವಾಗಿ ಕಾಪಾಡುವುದು ಮುಖ್ಯವಾಗಿರುತ್ತದೆ. ಸಿನಿಮಾ ಉದ್ಯಮದಲ್ಲಿ ಭಾಗಿಯಾಗಿರುವವರ ಪ್ರಯೋಜನಕ್ಕೆ ಕೂಡ ಮತ್ತಷ್ಟು ಸುವ್ಯವಸ್ಥಿತಗೊಳಿಸಲಾಗುತ್ತಿದೆ. ಸಿನಿಮಾಕ್ಕೆ ನೀಡುವ ಪ್ರಮಾಣೀಕರಣ ಪ್ರಕ್ರಿಯೆಯನ್ನು ಸಂಸ್ಕರಿಸಲು ಮತ್ತು ಸರಳಗೊಳಿಸುವ ಕುರಿತು ಸಿನಿಮಾ ಉದ್ಯಮಿಗಳ ಜೊತೆ ಸಂವಾದವನ್ನು ಸದ್ಯದಲ್ಲಿಯೇ ನಡೆಸಲಾಗುವುದು ಎಂದು ಪ್ರಸೂನ್ ಜೋಶಿ ತಿಳಿಸಿದ್ದಾರೆ.
ಸಿಬಿಎಫ್ ಸಿಯ ಪುನರ್ರಚಿತ ತಂಡವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಆಗಸ್ಟ್ 11ರಂದು ಘೋಷಿಸಿತ್ತು. ಅಂದೇ ಪಹ್ಲಾಜ್ ನಿಹಲಾನಿಯವರ ಬದಲಿಗೆ ಪ್ರಸೂನ್ ಜೋಶಿ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
SCROLL FOR NEXT