ಯಶ್ ಮತ್ತು ರಾಕ್ ಲೈನ್ ವೆಂಕಟೇಶ್ 
ಸಿನಿಮಾ ಸುದ್ದಿ

ರಾಕ್ ಲೈನ್- ರಾಕಿಂಗ್ ಸ್ಟಾರ್ ಜೋಡಿಯಲ್ಲಿ ಹೊಸ ಸಿನಿಮಾ: ಅರ್ಜುನ ರೆಡ್ಡಿ ರಿಮೇಕ್ ನಲ್ಲಿ ಯಶ್?

ತೆಲುಗಿನ ಪ್ರಸಿದ್ದ ಸಿನಿಮಾ ಅರ್ಜುನ ರೆಡ್ಡಿ ಕನ್ನಡಕ್ಕೆ ರಿಮೇಕ್ ಆಗಲಿದೆ, ವಿಜಯ ಸಾಯ್ ದೇವರಕೊಂಡ ಅಭಿನಯದ ಅರ್ಜುನ ರೆಡ್ಡಿ ಕನ್ನಡ ರಿಮೇಕ್...

ಬೆಂಗಳೂರು: ತೆಲುಗಿನ ಪ್ರಸಿದ್ದ ಸಿನಿಮಾ ಅರ್ಜುನ ರೆಡ್ಡಿ ಕನ್ನಡಕ್ಕೆ ರಿಮೇಕ್ ಆಗಲಿದೆ, ವಿಜಯ ಸಾಯ್ ದೇವರಕೊಂಡ ಅಭಿನಯದ ಅರ್ಜುನ ರೆಡ್ಡಿ ಕನ್ನಡ ರಿಮೇಕ್ ರೈಟ್ಸ್ ಅನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಖರೀದಿಸಿದ್ದಾರೆ.ಆದರೆ ಎಷ್ಟು ಕೋಟಿಗೆ ಖರೀದಿಯಾಗಿದೆ ಎಂಬುದರ ಬಗ್ಗೆ ಮಾತ್ರ ಮಾಹಿತಿಯಿಲ್ಲ.
ತಮಿಳಿನ ರಿಮೇಕ್ ರೈಟ್ಸ್ ಧನುಶ್ ಪಾಲಾಗಿದೆ.  ವಿಜಯ್ ಸಾಯ್ ದೇವರಕೊಂಡ ಅಭಿನಯದ ಪಾತ್ರವನ್ನು ಕನ್ನಡದಲ್ಲಿ ಅಷ್ಟೇ ರಫ್ ಅಂಡ್ ಭಾವನಾತ್ಮಕವಾಗಿ ಯಾರು ನಟಿಸಲಿದ್ದಾರೆ ಎಂಬುದನ್ನು ಮಾತ್ರ ನಿರ್ಮಾಪಕರು ಬಹಿರಂಗ ಪಡಿಸಿಲ್ಲ. 
ಕನ್ನಡದಲ್ಲಿ ಯಾರು ಪಾತ್ರಕ್ಕೆ ಯಾರು ಸೂಕ್ತ ನಾಯಕ ಎಂಬ ಪ್ರಶ್ನೆಗೆ ಎಲ್ಲರ ಬೆರಳು ತೋರುತ್ತಿರುವುದು ರಾಕಿಂಗ್ ಸ್ಟಾರ್ ಯಶ್ ಕಡೆಗೆ. ಅರ್ಜುನ್ ರೆಡ್ಡಿ ಕಥೆಯನ್ನು ಬಹಳವಾಗಿ ಮೆಚ್ಚಿರುವ ರಾಕ್ ಲೈನ್ ವೆಂಕಟೇಶ್,  ಆ ಪಾತ್ರಕ್ಕೆ  ಯಶ್ ರಿಂದ ಮಾತ್ರ ನ್ಯಾಯ ಒದಗಿಸಲು ಸಾಧ್ಯ ಎಂಗು ನಂಬಿದ್ದಾರೆ. ಹೀಗಾಗಿ ಅರ್ಜುನ್ ರೆಡ್ಡಿ ಪಾತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂದು ಇಂಡಸ್ಟ್ರಿ ಮೂಲಗಳು ತಿಳಿಸಿವೆ.
ಆಧುನಿಕ ದೇವದಾಸ್ ಕಥೆ ಚಿತ್ರದಲ್ಲಿದೆ,  ಮೂಳೆ ತಜ್ಞರೊಬ್ಬನ ಪ್ರೇಮ  ವೈಫಲ್ಯದ ಕಥೆ ಇದಾಗಿದೆ,  ಕಥೆಗೆ ರಫ್ ಅಂಡ್ ಟಫ್ ವ್ಯಕ್ತಿತ್ವದ ಅವಶ್ಯಕತೆಯಿದ್ದು, ಅದಕ್ಕೆ ಯಶ್ ಸೂಕ್ತ ಎಂಬುದು ಎಲ್ಲರ ಅಭಿಪ್ರಾಯ.
ಸದ್ಯ ಕೆಜಿಎಫ್ ಸಿನಿಮಾದಲ್ಲಿ ಯಶ್ ನಿರತರಾಗಿದ್ದಾರೆ, ಆ  ನಂತರ ನಿರ್ದೇಶಕ ಹರ್ಷ ಅವರ ರಾಣಾ ಸಿನಿಮಾಗೂ ಸಹಿ ಮಾಡಿದ್ದಾರೆ, ಹೀಗಾಗಿ ಯಾವ ಶೂಟಿಂಗ್ ನಲ್ಲಿ ಮೊದಲು ಭಾಗವಹಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 
ಸದ್ಯ ರಾಕ್ ಲೈನ್ ವೆಂಕಟೇಶ್, ಮೋಹನ್ ಲಾಲ್ ಅಭಿನಯನ ಮಲಯಾಳಂ ನ ವಿಲ್ಲನ್ ಸಿನಿಮಾ ರಿಲೀಸ್ ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.ಜೊತೆಗೆ ಕನ್ನಡದ ವಿಐಪಿ ಸಿನಿಮಾ ಬಿಡುಗಡೆಗೂ ಸಿದ್ಧತೆ ನಡೆಸಿದ್ದಾರೆ. ಅದಾದ ನಂತರ ಪ್ರಿಯಾ ನಿರ್ದೇಶನದ  ನಿರುಪ್ ಭಂಡಾರಿ ರಾಧಿಕಾ ಪಂಡಿತ್ ಅಭಿನಯದ ಮತ್ತೊಂದು ಸಿನಿಮಾಗಾಗಿ ವೆಂಕಟೇಶ್ ಸಿದ್ಧತೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹದಲ್ಲಿ 8 ಮಂದಿ ಸಾವು; 105 ಭಾರತೀಯರು ನಾಪತ್ತೆ: ಬಿಹಾರದಲ್ಲಿ ಕಟ್ಟೆಚ್ಚರ!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

ದೇಶಾದ್ಯಂತ H1N1 ಪ್ರಕರಣಗಳ ಏರಿಕೆ: ಸೋಂಕಿನ ಲಕ್ಷಣಗಳು, ಸಾರ್ವಜನಿಕರು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, IMA ಸಲಹೆ ಏನು?

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

'ಟಾಕ್ಸಿಕ್' ಸಿನಿಮಾ ವಿರುದ್ಧ ಸುಳ್ಳು ಮಾಹಿತಿ ಪ್ರಕಟಿಸದಂತೆ ಕೋರ್ಟ್ ತಡೆಯಾಜ್ಞೆ!