ದರ್ಶನ್ 51ನೇ ಚಿತ್ರಕ್ಕೆ ಪೊನ್ ಕುಮಾರ್ ನಿರ್ದೇಶನ
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 50ನೇ ಸಿನಿಮಾ ಕುರುಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ತಾರಕ್ ಸಿನಿಮಾ ಬಿಡುಗಡೆಗಾಗಿಯೂ ಕಾಯುತ್ತಿದ್ದಾರೆ, ...
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 50ನೇ ಸಿನಿಮಾ ಕುರುಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ತಾರಕ್ ಸಿನಿಮಾ ಬಿಡುಗಡೆಗಾಗಿಯೂ ಕಾಯುತ್ತಿದ್ದಾರೆ, ಪ್ರಕಾಶ್ ಜಯರಾಮ್ ನಿರ್ದೇಶನದ ತಾರಕ್ ಸಿನಿಮಾ ವಿಜಯ ದಶಮಿ ಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ದರ್ಶನ್ 51ನೇ ಸಿನಿಮಾ ಕುರಿತು ಮಾತುಗಳು ಕೇಳಿ ಬರುತ್ತಿವೆ.
ಸದ್ಯ ದರ್ಶನ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ನಿರ್ಮಾಪಕರು ದರ್ಶನ್ ಕರೆಗಾಗಿ ಕಾಯುತ್ತಿದ್ದಾರೆ, ಕುರುಕ್ಷೇತ್ರ ನಂತರ, ಶೈಲಜಾ ನಾಗ್ ಮತ್ತು ಬಿ ಸುರೇಶ್ ನಿರ್ಮಾಣದ 51ನೇ ಸಿನಿಮಾದಲ್ಲಿ ದರ್ಶನ್ ನಟಿಸಲಿದ್ದು, ಪೊನ್ ಕುಮಾರ್ ನಿರ್ದೇಶಿಸಲಿದ್ದಾರೆ.
ವಿಷ್ಣು ವರ್ಧನ, ಚಾರುಲತಾ, ಗೌಡ್ರು ಹೋಟೆಲ್ ಸಿನಿಮಾಗಳನ್ನು ಪೊನ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.
ದರ್ಶನ್ 51 ಸಿನಿಮಾದ ಕಥೆ ಏನಿರಬಹುದು ಎಂದು ಈಗಾಗಲೇ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ನಿರ್ಮಾಪಕಿ ಶೈಲಜಾ ನಾಗ್ ಮಾತ್ರ ಕಥೆಯ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿಲ್ಲ, ಇದೊಂದು ಪ್ರೀತಿ, ಸಾಹಸ ಪ್ರಧಾನಕಥೆಯುಳ್ಳ ಸಿನಿಮಾವಾಗಿದೆ ಎಂದು ಮಾತ್ರ ತಿಳಿಸಿದ್ದಾರೆ.
ಇನ್ನೂ ಈ ಸಿನಿಮಾದಲ್ಲಿ ವಿ. ಹರಿಕೃಷ್ಣ ಸಹ ನಟಿಸುತ್ತಿದ್ದಾರೆ, ಮೊದಲನೇ ಬಾರಿ, ಚಿತ್ರಕಥೆ ಮತ್ತು ಸಂಭಾಷಣೆ ಜೊತೆಗೆ ಮಾಡುತ್ತಿರುವುದಾಗಿ ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.