ರಚಿತಾ ರಾಮ್ 
ಸಿನಿಮಾ ಸುದ್ದಿ

ಗುಳಿಕೆನ್ನೆಯೆ ನನಗೆ ಅದೃಷ್ಟ: ಡಿಂಪಲ್ ಕ್ವೀನ್ ರಚಿತಾ ರಾಮ್

ವೃತ್ತಿ ಜೀವನದ ಆರಂಭದಿಂದಲೂ ಸ್ಟಾರ್ ನಟರುಗಳ ಜೊತೆ ಅಭಿನಯಿಸಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ - ಧ್ರುವ ಸರ್ಜಾ ನಟನೆಯ ...

ಬೆಂಗಳೂರು: ವೃತ್ತಿ ಜೀವನದ ಆರಂಭದಿಂದಲೂ ಸ್ಟಾರ್ ನಟರುಗಳ ಜೊತೆ ಅಭಿನಯಿಸಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ - ಧ್ರುವ ಸರ್ಜಾ ನಟನೆಯ ಭರ್ಜರಿ ಶೀಘ್ರವೇ ತೆರೆ ಕಾಣಲಿದೆ.
ಭರ್ಜರಿ ನಿರ್ದೇಶಕ ಚೇತನ್ ಕುಮಾರ್ ಎರಡು ವರ್ಷಗಳ ಹಿಂದೆ ತಮ್ಮ ಮುಂದಿನ ಚಿತ್ರಕ್ಕೆ ರಚಿತಾ ನಾಯಕಿ ಎಂದು ನಿರ್ಧರಿಸಿದ್ದರು. ಏಕೆಂದರೆ ಆಕೆಯ ಗುಳಿಕೆನ್ನೆ ನೋಡಿ ಧ್ರುವ ಸರ್ಜಾಗೆ ಆಕೆ ಫರ್ಪೆಕ್ಟ್ ನಾಯಕಿ ಎಂದು ತೀರ್ಮಾನಿಸಿದ್ದರು. ಭರ್ಜರಿ ಸಿನಿಮಾದ ಬಗ್ಗೆ ರಚಿತಾ ರಾಮ್ ಸಿಟಿ ಎಕ್ಸ್ ಪ್ರೆಸ್ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾದ ಹಿರಿಯ ನಟರುಗಳ ಜೊತೆ ಅಭಿನಯಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ, ಭರ್ಜರಿಯಲ್ಲಿ ಚೇತನ್ ನನಗೆ ಉತ್ತಮ ಕಥೆ ನೀಡುತ್ತಾರೆ ಎಂಬ ನಂಬಿಕೆಯಿತ್ತು. ಅದ್ಧೂರಿ ಮತ್ತು ಬಹದ್ದೂರ್ ಸಿನಿಮಾಗಳಲ್ಲಿ ನಟಿಸಿರುವ ಧ್ರುವ ಸರ್ಜಾ ಕೂಡ ಸಿನಿಮಾ ತಂಡಕ್ಕೆ ಎನರ್ಜಿಯಾಗಿದ್ದರು. ಇದು ನನಗೆ ಸಹಾಯವಾಯಿತು ಎಂದು ಹೇಳಿದ್ದಾರೆ.
ಆರಂಭದಲ್ಲಿ ಭರ್ಜರಿ ಸೆಟ್ ನಲ್ಲಿ ಭಾರೀ ಗದ್ದಲವಿತ್ತು, ಕ್ರಮೇಣವಾಗಿ ನಾನು ಅದಕ್ಕೆ ಹೊಂದಿಕೊಂಡೆ,  ಯಾವುದೂ ಕೂಡ ನನಗೆ ಸಮಸ್ಯೆಯಾಗಲಿಲ್ಲ, ಎಲ್ಲರಿಂದಲೂ ನನಗೆ ಆತ್ಮ ವಿಶ್ವಾಸ ದೊರೆಯಿತು. ಸಿನಿಮಾ ಆರಂಭವಾಗಿ 20 ತಿಂಗಳು ಕಳೆದರೂ ಸಿನಿಮಾ ಬಗ್ಗೆ ರಚಿತಾ ಇದುವರೆಗೂ ಒಂದೇ ಒಂದು ದೂರು ಹೇಳಿಲ್ಲ, ಇದೊಂದು ದೊಡ್ಡ ಅನುಭವ ಎಂದು ಹೇಳಿದ್ದಾರೆ. ಇದರ ನಡುವೆಯೇ ನಾನು ಎರಡು ಮೂರು ಸಿನಿಮಾ ಮಾಡಿದೆ, ಆದರೆ ಭರ್ಜರಿ ಸಿನಿಮಾಗೆ ನಾನು ಹೆಚ್ಚಿನ ಆದ್ಯತೆ ನೀಡಿದೆ. ಚಿತ್ರತಂಡ ನನಗೆ ಹೊಂದಾಣಿಕೆಯಾಗುವ  ಡೇಟ್ಸ್ ನೀಡಿತ್ತು,
ನನ್ನ ಗುಳಿಕೆನ್ನೆಯೇ ನನ್ನ ಅದೃಷ್ಟ,  ಎಂದು ಹೇಳಿದ ಅವರು ನನ್ನ ಕುಟುಂಬದಲ್ಲಿ ನನ್ನ ಬಿಟ್ಟು ಯಾರಿಗೂ ಡಿಂಪಲ್ ಇಲ್ಲ, ನಾನು ನಗುವ ಮುನ್ನವೇ ನನ್ನ ಕೆನ್ನೆಯ ಮೇಲೆ ಗುಳಿ ಮೂಡುತ್ತದೆ, ಭರ್ಜರಿ ಸಿನಿಮಾ ಕಥೆ ನನ್ನ ಗುಳಿಕೆನ್ನೆಯದ್ದೇ ಆಗಿದೆ. ಈ ಗುಳಿಕೆನ್ನೆ ಆಧರಿಸಿ ಬುಲ್ ಬುಲ್ ಸಿನಿಮಾದಲ್ಲಿ  ಕವಿರಾಜ್ ಒಂದು ಹಾಡಿತ್ತು. ಭರ್ಜರಿಯಲ್ಲಿ ಕೂಡ ಡಿಂಪಲ್ ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹೀಗಾಗಿ ಸ್ಯಾಂಡಲ್ ವುಡ್ ನಲ್ಲಿ ನನಗೆ ಡಿಂಪಲ್ ಕ್ವೀನ್ ಎಂಬ ಟೈಟಲ್ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ದೊಡ್ಡ ದೊಡ್ಡ ಸ್ಟಾರ್ ನಟರುಗಳ ಜೊತೆ ಅಭಿನಯಿಸಿದ ನಿಮದೆ ಅಪ್ ಕಮಿಂಗ್ ಹೀರೋಗಳ ಜೊತೆ ನಟಿಸಲು ಕಷ್ಟವಾಗಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ರಚಿತಾ, ಯಾರೊಬ್ಬರು ಸ್ಟಾರ್ ಅಲ್ಲ, ಅದು ಎಲ್ಲವು ಅವರು ಗಳಿಸಿದ್ದು, ನಾನು ನನ್ನ ವೃತ್ತಿಯನ್ನು ಸ್ಟಾರ್ ಜೊತೆ ಆರಂಭಿಸಿರಬಹುದು ಆದರೆ  ನಾನು ಸ್ಟಾರ್ ಎಂದು ಯಾವತ್ತೂ ಭಾವಿಸಿಲ್ಲ, ಜನರು ನನ್ನನ್ನು ಆ ಮಟ್ಟಿಗೆ ಹೋಲಿಸಿದಾಗ ನನಗೆ ತುಂಬಾ ಮುಜುಗರವಾಗುತ್ತದೆ ಎಂದು ತಿಳಿಸಿದ್ದಾರೆ.
ನಾನು ಈ ವರೆಗೂ 8 ಸಿನಿಮಾ ಮಾಡಿದ್ದೇನೆ, ಈಗಲೂ ನಾನು ಇಂಡಸ್ಟ್ರಿಗೆ ನ್ಯೂ ಕಮರ್ ಎಲ್ಲರ ಜೊತೆಯಲ್ಲಿ ನಟಿಸಲು ನಾನು ಸಿದ್ಧ, ಆದರೆ ಕಥೆ ಪ್ರೊಡಕ್ಷನ್ ಹೌಸ್ ಮತ್ತು ನಿರ್ದೇಶಕರು ಉತ್ತಮವಾಗಿರಬೇಕು ಎಂದು ತಿಳಿಸಿದ್ದಾರೆ.,
ನನ್ನ ಮುಂದಿನ ಸಿನಿಮಾ ಅಯೋಗ್ಯದಲ್ಲಿ ನೀನಾಸಂ ಸತೀಶ್ ಜೊತೆ ನಟಿಸುತ್ತಿದ್ದೇನೆ. ಮಹೇಶ್ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದೊಂದು ಉತ್ತಮ ಕಥೆಯ ಸಿನಿಮಾ ಎಂದು ನನಗನಿಸುತ್ತದೆ ಎಂದು ಹೇಳಿದ್ದಾರೆ. ಪ್ರತಿಯೊಬ್ಬರು ಬದಲಾವಣೆ ಬಯಸುವ ಹಾಗೆ ನಾನು ಬಯಸುತ್ತೇನೆ, ಆದರೆ ಕನ್ನಡ ಇಂಡಸ್ಟ್ರಿ ನನಗೆ ಅಪಾರವಾದದ್ದನ್ನು ನೀಡಿದೆ, ಇಲ್ಲಿಯೂ ಬಹುತೇಕ ರಾಜಕೀಯವಿರಬಹುದು, ಆದರೆ ಯಾವುದು ನನ್ನ ಗಮನಕ್ಕೆ ಬಂದಿಲ್ಲ, ನಾನು ಉತ್ತಮ ನಟಿ ಎಂದು ಸಿನಿಮಾ ರಂಗ ಭಾವಿಸಿದೆ. ನನ್ನ ತಟ್ಟೆಯಲ್ಲಿರುವುದನ್ನು ಮಾತ್ರ ನಾನು ತಿನ್ನಲು ಬಯಸುತ್ತೇನೆ, ಈ ರಂಗದಲ್ಲಿ ನಾನು ಬೆಳೆಯಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ನಾನು ಮತ್ತು ಧ್ರುವ ಸರ್ಜಾ ಕ್ಲೋಸ್ ಫ್ರೆಂಡ್ಸ್, ಎಂದು ಹೇಳಿರುವ ರಚಿತಾ, ಮೊದಲು ನಾವಿಬ್ಬರೂ ಉತ್ತರ ದಕ್ಷಿಣದಂತಿದ್ದೆವು, ಸ್ಲೋವೆನಿಯಾದಲ್ಲಿ  ನಾವಿಬ್ಬರೂ ಉತ್ತಮ ಸ್ನೇಹಿತರಾದೆವು, ಹೊರಗಿನಿಂದ ನೋಡಲು ಧ್ರುವ ಸ್ಟ್ರಾಂಗ್ ಎನಿಸುತ್ತಾರೆ, ಆದರೆ ಬಹಳ ಮೃದು ಮನಸಿನ ವ್ಯಕ್ತಿತ್ವ. ನಿರ್ದೇಶಕ ಚೇತನ್ ಬಹಳ ತಾಳ್ಮೆಯ ವ್ಯಕ್ತಿ, ಸೆಟ್ ನಲ್ಲಿ ಸುಮಾರು 150 ಮಂದಿಯನ್ನು ಏಕ ಕಾಲದಲ್ಲಿ ನಿಭಾಯಿಸುತ್ತಿದ್ದರು. 
ಸಾಮಾನ್ಯವಾಗಿ ನಾಯಕಿ ನಟಿಯರು ಮತ್ತೊಬ್ಬ ನಾಯಕಿ ಜೊತೆ ಸ್ಕ್ರೀನ್ ಹಂಚಿಕೊಳ್ಳಲು ಇಷ್ಠಪಡುವುದಿಲ್ಲ. ಆದರೆ ಭರ್ಜರಿಯಲ್ಲಿ ರಚಿತಾ ಹರಿಪ್ರಿಯ ಮತ್ತು ವೈಶಾಲಿ ಜೊತೆ ನಟಿಸಿದ್ದಾರೆ, ಸ್ಕ್ರಿಪ್ಟ್ ಗೆ ಬೇಕಾಗಿರುವುದನ್ನು ನಿರ್ಧರಿಸಲು ನಾನು ಯಾರು, ನಿರ್ದೇಶಕರ ಇಚ್ಚೆಗೆ ವಿರುದ್ಧವಾಗಿ ನಾನು ನಿಲ್ಲವುದಿಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT