ಗಣೇಶ್ 
ಸಿನಿಮಾ ಸುದ್ದಿ

ಹೆಚ್ಚಿದ ಬೇಡಿಕೆಯೊಂದಿಗೆ ಅಟ್ಲಾಂಟಿಕ್ ದಾಟಿದ ಭಟ್ರು 'ಮುಗುಳು ನಗೆ'

ಯೋಗರಾಜ್ ಭಟ್ ನಿರ್ದೇಶನದಲ್ಲಿ ಗಣೇಶ್ ಅಭಿನಯದ ಮುಗುಳು ನಗೆ ತೆರೆ ಕಂಡು ಮೂರನೇ ವಾರವೂ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ...

ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದಲ್ಲಿ ಗಣೇಶ್ ಅಭಿನಯದ ಮುಗುಳು ನಗೆ ತೆರೆ ಕಂಡು ಮೂರನೇ ವಾರವೂ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ರಾಜ್ಯದ ಹಲವು ಥಿಯೇಟರ್ ಗಳಲ್ಲಿ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ. 
ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಅಮೆರಿಕಾದ 50 ಥಿಯೇಟರ್ ಗಳಲ್ಲಿ ಬಿಡುಗಡೆಗೊಳ್ಳುತ್ತಿದೆ ನಂತರ, ಸಿಂಗಾಪುರ, ಆಸ್ಟ್ರೇಲಿಯಾ ಮತ್ತು ಮಧ್ಯ ಪೂರ್ವ ದೇಶಗಳಲ್ಲೂ ತೆರೆ ಕಾಣಲಿದೆ.
ಗಣೇಶ್ ಮತ್ತು ಯೋಗರಾಜ್ ಭಟ್ ತಂಡ ಅಮೆರಿಕಾಗೆ ತೆರಳಲು ಪ್ಲಾನ್ ಮಾಡುತ್ತಿದೆ, ಈ ಸಂಬಂಧ ನಿರ್ದೇಶಕ ಯೋಗರಾಜ್ ಭಟ್ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ,  ಬೆಂಗಳೂರಿನಲ್ಲಿ ಭಾರೀ ಮಳೆಯ ನಡುವೆಯೂ ಮುಗುಳು ನಗೆ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವುದು ಸಂತಸ ತಂದಿದೆ. ಈಗ ಮಳೆ ಕಡಿಮೆಯಾಗಿ ಸೂರ್ಯ ವಾಪಸ್ ಬಂದಿದ್ದಾನೆ, ಮತ್ತಷ್ಟು ಪ್ರೇಕ್ಷಕರು ನಗೆಯೊಂದಿಗೆ ಥಿಯೇಟರ್ ಗಳಿಗೆ ಬರುತ್ತಿದ್ದಾರೆ, ಅವರಿಗೆಲ್ಲಾ ನನ್ನ ಧನ್ಯವಾದ ಎಂದು ಹೇಳಿದ್ದಾರೆ. ಇದರ ಜೊತೆಗೆ ವಿದೇಶದಲ್ಲಿಯೂ ಪ್ರೇಕ್ಷಕರು ಟಿಕೆಟ್ ಬುಕ್ ಮಾಡಿ ಮುಗುಳುನಗೆಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲಿನ ಬೇಡಿಕೆಯಿಂದಾಗಿ ವಿತರಕರು ಎಷ್ಟು ಸಾಧ್ಯವೋ ಅಷ್ಟು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಈ ದೊಡ್ಡ ಸಂತೋಷದೊಂದಿಗೆ ಭಟ್ರು ಮುಂದಿನ ಸ್ಕ್ರಿಪ್ಟ್ ಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ, ನಾನು .ಯಾವಾಗಲೂ ಪ್ರೇಕ್ಷಕರಿಗೆ ಹತ್ತಿರವಾಗುವ ಹಾಗೂ ಅವರು ಇಷ್ಟ ಪಡುವ ಕಥೆಗಳ ಬಗ್ಗೆ ಗಮನ ಹರಿಸುತ್ತೇನೆ. ಪ್ರೇಕ್ಷಕರು ನಿರ್ದೇಶಕರುಗಳಿಗೆ ಪುನರ್ಜನ್ಮ ನೀಡುತ್ತಾರೆ. ಅದು ಮುಗುಳು ನಗೆ ರೀತಿಯಲ್ಲಿ ಮರು ಜನ್ಮ ನೀಡುತ್ತಾರೆ, ಪ್ರತಿಯೊಂದು ಸಿನಿಮಾವೂ ನಿರ್ದೇಶಕರ ಮಗುವಾಗಿರುತ್ತದೆ. ನಂತರ ಅದು ಶಾಲೆಗೆ ಹೋಗುತ್ತದೆ ಎಂದು ಹೇಳಿದ್ದಾರೆ.
ಮಹಾಭಾರತದ ನಿರ್ದೇಶನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಾಜೆಕ್ಟ್ ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ,. ಮೂರು ದೊಡ್ಡ ಬಂಡವಾಳ ಹೂಡಿಕೆದಾರರು ಒಟ್ಟಿಗೆ ಬರಲಿದ್ದಾರೆ, ಈ ಕಥೆಯನ್ನು ಕೇವಲ ಒಂದೇ ರಾತ್ರಿ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಸುದೀಪ್ ಗಾಗಿ ಉತ್ತಮ ಕಥೆ ಬರೆಯಲು ಕಾಯುತ್ತಿದ್ದೇನೆ
ನಟ ಸುದೀಪ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುತ್ತಿದ್ದು, ಅವರಿಗಾಗಿ ಉತ್ತಮ ಕಥೆ ಬರೆಯಲು ಕಾಯುತ್ತಿದ್ದೇನೆ. ನಾನು ಈಗಾಗಲೇ ನನ್ನ ಎರಡು ಮೂರು ಕಥೆಗಳನ್ನು ಸುದೀಪ್ ಜೊತೆ ಹಂಚಿಕೊಂಡಿದ್ದೇನೆ, ಆದರೆ ಅದಕ್ಕಿಂತಲೂ ಉತ್ತ ಕಥೆ ನಾನು ಬರೆಯುತ್ತೇನೆ ಎಂಬ ನಂಬಿಕೆಯಿದೆ. ಅದು ಸುದೀಪ್ ಗೆ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಶಾಂತಿ ನಿವಾಸ, ಮೈ ಆಟೋಗ್ರಾಪ್ ಮತ್ತು ಸ್ವಾತಿ ಮುತ್ತು ನಂತ ಸಿನಿಮಾ ನಿರ್ದೇಶಿಸರುವ ಸುದೀಪ್ ಅವರಿಗೆ ಅದರಂಥದ್ದೆ ಸಿನಿಮಾ ನೀಡಬೇಕೆಂದು ನಾನು ಚಿಂತಿಸಿದ್ದೇನೆ. ಸುದೀಪ್ ಜೊತೆ ಕೆಲಸ ಮಾಡಲು ನಾನು ಕುತೂಹಲದಿಂದ ಕಾಯುತ್ತಿದ್ದೇನೆ, ಮತ್ತೊಂದು ಸುತ್ತಿನ ಮಾತುಕತೆ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT