ಫರ್ಹಾನ್ ಅಖ್ತರ್ 
ಸಿನಿಮಾ ಸುದ್ದಿ

'ದಿಲ್ ಚಾಹ್ತಾ ಹೈ' ಸಿನಿಮಾದ ಮುಂದುವರಿದ ಭಾಗವಿಲ್ಲ: ಪರ್ಹಾನ್ ಅಖ್ತರ್

ದಿಲ್ ಚಾಹ್ತಾ ಹೈ ಸಿನಿಮಾ ಬಿಡುಗಡೆಯಾದ 16 ವರ್ಷಗಳ ನಂತರ ನಿರ್ದೇಶಕ ಪರ್ಹಾನ್ ಖಾನ್ ಅದರ ನೆನಪುಗಳನ್ನು ಸ್ಮರಿಸಿದ್ದಾರೆ, ಹಾಗೆಯೇ ದಿಲ್ ಚಾಹ್ತಾ ...

ನವದೆಹಲಿ: ದಿಲ್ ಚಾಹ್ತಾ ಹೈ ಸಿನಿಮಾ ಬಿಡುಗಡೆಯಾದ 16 ವರ್ಷಗಳ ನಂತರ ನಿರ್ದೇಶಕ ಪರ್ಹಾನ್ ಖಾನ್ ಅದರ ನೆನಪುಗಳನ್ನು ಸ್ಮರಿಸಿದ್ದಾರೆ, ಹಾಗೆಯೇ ದಿಲ್ ಚಾಹ್ತಾ ಹೈ ಸಿನಿಮಾದ ಮುಂದುವರಿದ ಭಾಗ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಲಕ್ನೋ ಸೆಂಟ್ರಲ್ ಸಿನಿಮಾದ ಪ್ರಮೋಷನ್ ನಲ್ಲಿ ಭಾಗವಹಿಸಿದ್ದ ಬಾಗ್ ಮಿಲ್ಕಾ ಬಾಗ್ ನಟ ದಿಲ್ ಚಾಹ್ತಾ ಹೈ ಸಿನಿಮಾದಲ್ಲಿ ಕೆಲಸ ಮಾಡುವ ವೇಳೆಯ ಹಲವು ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಆದರೆ ದಿಲ್ ಚಾಹ್ತಾ ಹೈ ಚಿತ್ರದ ಮುಂದುವರಿದ ಭಾಗದ ಸಿನಿಮಾ ಮಾಡುವುದಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದಾರೆ. ಮೊದಲ ಭಾಗದ ಸಿನಿಮಾ ಉತ್ತಮವಾಗಿ ಮೂಡಿ ಬಂದಿದೆ.  ಅಭಿಮಾನಿಗಳು ಆ ಸಿನಿಮಾವನ್ನು ಅತಿ ಹೆಚ್ಚು ಪ್ರೀತಿಸಿದ್ದಾರೆ. ಅದರ ಅರ್ಥ 2ನೇ ಭಾಗದ ಸಿನಿಮಾ ಮಾಡಬೇಕು ಎಂದಲ್ಲ, ಅವರ ಅವಶ್ಯಕತೆಯೂ ಇಲ್ಲ ಎಂದು ತಿಳಿಸಿದ್ದಾರೆ.
2001 ರಲ್ಲಿ ಬಿಡುಗಡೆಯಾದ ದಿಲ್ ಚಾಹ್ತಾ ಹೈ ಸಿನಿಮಾ ನಂತರ ಪರ್ಹಾನ್ ಖಾನ್ ಮನೆ ಮನೆ ಮಾತಾಗಿ ಜನಪ್ರಿಯತೆ ಪಡೆದರು. ಅಮೀರ್ ಖಾನ್, ಸೈಫ್ ಅಲಿ ಖಾನ್ ಮತ್ತು ಅಕ್ಷಯ್ ಖನ್ನಾ ಪ್ರೀತಿ ಜಿಂಟಾ ಮತ್ತು ಸೋನಾಲಿ ಕುಲಕರ್ಣಿ ನಟಿಸಿದ್ದ ಸಿನಿಮಾ ಬಾಕ್ಸ್ ಆಫೀಸ್ ಲೂಟಿ ಮಾಡಿತ್ತು. 
ಕಳೆದ ಆರು ವರ್ಷಗಳಿಂದ ತಮ್ಮ ಸಿನಿಮಾ ವೃತ್ತಿ ಬಗ್ಗೆ ಫರ್ಹಾನ್ ತಮ್ಮ ಗಮನ ಕೇಂದ್ರೀಕರಿಸಿದ್ದರು. ಲಕ್ನೋ ಸೆಂಟ್ರಲ್ ನಾಳೆ ರಿಲೀಸ್ ಅಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ