ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರ ಕುರುಕ್ಷೇತ್ರ ಅಕ್ಟೋಬರ್ 6ರಂದು ಸೆಟ್ಟೇರುತ್ತಿದೆ. ನಟ ದರ್ಶನ್, ಅರ್ಜುನ್ ಸರ್ಜಾ, ರವಿಚಂದ್ರನ್, ಅಂಬರೀಷ್, ಸೋನು ಸೂದ್, ಡ್ಯಾನಿಶ್ ಅಖ್ತರ್ ಸೈಫಿ, ನಿಖಿಲ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಹೈದರಾಬಾದ್ ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಸೇರಿದ್ದಾರೆ.
ಕಲಾ ನಿರ್ದೇಶಕ ಕಿರಣ್ ಕುಮಾರ್ ಅವರಿಂದ ಸೃಷ್ಟಿಸಲ್ಪಟ್ಟಿರುವ ಸೆಟ್ ಗಳನ್ನು ಮೆಜೆಸ್ಟಿಕ್ ನಿಂದ ಹೈದರೌಬಾದ್ ಗೆ ಕೊಂಡೊಯ್ಯಲಾಗಿದೆ, ಕೆಲವು ಕಲಾವಿದರ ಡೇಟ್ಸ್ ಹೊಂದಾಣಿಕೆ ಮತ್ತು ಹಿಂದಿನ ಕಮಿಂಟ್ ಮೆಂಟ್ ಗಳ ಕಾರಣದಿಂದಾಗಿ ಅವರ ಜಾಗಕ್ಕೆ ಬೇರೆ ನಟ ನಟಿಯರನ್ನು ತರಲಾಗಿದೆ. ಇತ್ತೀಚಿನ ಬೆಳವಣಿಗೆಯೆಂದರೇ ಕುರುಕ್ಷೇತ್ರದಲ್ಲಿ ದುರ್ಯೋಧನನ ಪತ್ನಿ ಭಾನುಮತಿ ಪಾತ್ರದಲ್ಲಿ ರೆಮ್ಯಾ ನಂಬೀಸನ್ ನಟಿಸಲಿದ್ದಾರೆ.
ರೆಜಿನಾ ಕಾಸ್ಸಂದ್ರ ಬದಲು ರೆಮ್ಯಾ ಬಂದಿದ್ದಾರೆ, ಅಕ್ಟೋಬರ್ ನಿಂದ ರೆಮ್ಯಾ ಸೆಟ್ ಗೆ ಬರಲಿದ್ದಾರೆ, ರೆಮ್ಯಾ ನಂಬೀಸನ್ ಕನ್ನಡದಲ್ಲಿ 2ನೇ ಸಿನಿಮಾವಾಗಿದೆ.
ಇನ್ನೂ ಕುಂತಿ ಪಾತ್ರದಲ್ಲಿ ನಟಿಸಬೇಕಿದ್ದ ಹಿರಿಯ ನಟಿ ಲಕ್ಷ್ಮಿ ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋ ತೀರ್ಪುಗಾರರಾಗಿರುವುದರಿಂದ ಕುರುಕ್ಷೇತ್ರದಲ್ಲಿ ನಟಿಸುತ್ತಿಲ್ಲ, ಲಕ್ಷ್ಮಿ ಬದಲಿಗೆ ಕುಂತಿ ಪಾತ್ರದಲ್ಲಿ ಭಾರತೀ ವಿಷ್ಣುವರ್ಧನ್ ಅಭಿನಯಿಸಿಲಿದ್ದಾರೆ. ನಿಖಿಲ್ ಕುಮಾರ್ ಗೆ ನಾಯಕಿಯಾಗಿ ಉತ್ತರೆ ಪಾತ್ರದಲ್ಲಿ ಅದಿತಿ ಆರ್ಯ ನಟಿಸಲಿದ್ದಾರೆ. ಸುಭದ್ರೆ ಪಾತ್ರದಲ್ಲಿ ಪವಿತ್ರಾ ಲೋಕೇಶ್ ಕಾಣಿಸಿಕೊಳ್ಳಲಿದ್ದಾರೆ,
ಸಿನಿಮಾವನ್ನು ನಾಗಣ್ಣ ನಿರ್ದೇಶಿಸುತ್ತಿದ್ದು, ಮುನಿರತ್ನ ನಿರ್ಮಾಪಕರಾಗಿದ್ದಾರೆ, ಆದರೆ ಸಿನಿಮಾ ಚಿತ್ರೀಕರಣ ಸರಾಗಾವಾಗಿ ನಡೆಯಲೆಂಬ ಕಾರಣಕ್ಕೆ ಜಯಶ್ರೀ ದೇವಿ ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದಾರೆ.
ಈ ಹಿಂದೆ ಸಾಕಷ್ಟು ಸಿನಿಮಾ ನಿರ್ಮಿಸಿ ಅನುಭವವಿರುವ, ಜಯಶ್ರೀ ದೇವಿ ಕುರುಕ್ಷೇತ್ರದ ಪಿಲ್ಲರ್ ಆಗಿದ್ದಾರೆ, ಎಲ್ಲರ ಈ ಪ್ರಯತ್ನದ ಫಲವಾಗಿ ಕುರುಕ್ಷೇತ್ರ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಮಟ್ಟದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂಬುದು ಚಿತ್ರತಂಡದ ಆಶಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics