ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಅನಂತು ಎದುರಾಗಿ ನುಸ್ರತ್ ಆಗಲಿರುವ ಲತಾ ಹೆಗ್ಡೆ

ರಾಜ್ ಕುಟುಂಬದ ಕುಡಿ ವಿನಯ್ ರಾಜ್​ಕುಮಾರ್ ಅಭಿನಯದ ಮೂರನೇ ಚಿತ್ರವಾಗಿ ಮೂಡಿಬರಲಿರುವ ‘ಅನಂತು ವರ್ಸಸ್ ನುಸ್ರತ್’ಚಿತ್ರದ ನಾಯಕಿಯಾಗಿ ಲತಾ ಹೆಗ್ಡೆ ಆಯ್ಕೆ ಅಂತಿಮವಾಗಿದ್ದು, ಚಿತ್ರದ ನುಸ್ರತ್ ಪಾತ್ರದಲ್ಲೇ ಲತಾ ಹೆಗ್ಡೆ ಅಭಿನಯಿಸುವುದು ಖಾತರಿಯಾಗಿದೆ.

ಬೆಂಗಳೂರು: ರಾಜ್ ಕುಟುಂಬದ ಕುಡಿ ವಿನಯ್ ರಾಜ್​ಕುಮಾರ್ ಅಭಿನಯದ ಮೂರನೇ ಚಿತ್ರವಾಗಿ ಮೂಡಿಬರಲಿರುವ ‘ಅನಂತು ವರ್ಸಸ್ ನುಸ್ರತ್’ಚಿತ್ರದ ನಾಯಕಿಯಾಗಿ ಲತಾ ಹೆಗ್ಡೆ ಆಯ್ಕೆ ಅಂತಿಮವಾಗಿದ್ದು, ಚಿತ್ರದ ನುಸ್ರತ್  ಪಾತ್ರದಲ್ಲೇ ಲತಾ ಹೆಗ್ಡೆ ಅಭಿನಯಿಸುವುದು ಖಾತರಿಯಾಗಿದೆ.
ಈ ಹಿಂದೆ ವಿನಯ್ ರಾಜ್ ಕುಮಾರ್ ಚಿತ್ರದಲ್ಲಿ ಲತಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತಾದರೂ ಯಾವ ಪಾತ್ರ ಎಂಬುದು ಖಚಿತವಾಗಿರಲಿಲ್ಲ. ಇದೀಗ ಚಿತ್ರತಂಡ ಇತ್ತೀಚೆಗೆ ನಡೆಸಿದ  ಫೋಟೋಶೂಟ್ ಈ ಬಗೆಗಿನ ವಿವರ ನೀಡಿದ್ದು, ಲತಾ ಹೆಗ್ಡೆ ನುಸ್ರತ್ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಖಚಿತವಾಗಿದೆ.

ನಗರದ ಕಾಟನ್ ಪೇಟೆಯಲ್ಲಿರುವ ಹಜರತ್ ತವಾಕಲ್ ಮಸ್ತಾನ್ ದರ್ಗಾದಲ್ಲಿ ನಟಿ ಲತಾ ಹೆಗ್ಡೆಗೆ ನುಸ್ರತ್ ಪಾತ್ರದ ವೇಷಭೂಷಣ ಧರಿಸಿ ಫೋಟೋ ಶೂಟ್ ಮಾಡಲಾಯಿತು. ಹೀಗಾಗಿ ರೊಮ್ಯಾಂಟಿಕ್ ಕಾಮಿಡಿಯಾಗಿರುವ  ಅನಂತು ವರ್ಸಸ್ ನುಸ್ರತ್ ನಲ್ಲಿ ಲತಾ ಹೆಗ್ಡೆ ನುಸ್ರತ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟಿ ಲತಾ ಹೆಗ್ಡೆ ಚಿತ್ರದಲ್ಲಿನ ಪಾತ್ರದ ಕುರಿತು ನಾನು ಹೆಚ್ಚೇನೂ ಹೇಳಲು ಸಾಧ್ಯವಿಲ್ಲ. ಆದರೆ ನಾನು ಈ  ಚಿತ್ರಕ್ಕೆ ಓಕೆ ಎಂದಿದ್ದು ಮಾತ್ರ ಈ ಪಾತ್ರಕ್ಕಾಗಿಯೇ ಎಂದು ಹೇಳಿದ್ದಾರೆ.

ಇನ್ನು ಚಿತ್ರಕ್ಕಾಗಿ ತಾವು ಹಿಜಬ್ ಧರಿಸುವ ವಿಧಾನವನ್ನು ಕಲಿಯುತ್ತಿದ್ದೇನೆ. ಇನ್ನು ಇಲ್ಲಿನ ಜನ ತುಂಬಾ ನೆರವು ನೀಡಿದರು. ಹಿಜಬ್ ಧರಿಸುವ ವಿಧಾನವನ್ನು ಹೇಳಿಕೊಡುವುದು ಮಾತ್ರವಲ್ಲದೇ ಪ್ರೋತ್ಸೋಹ ನೀಡುತ್ತಿದ್ದರು ಎಂದು  ಹೇಳಿದ್ದಾರೆ.

ಚಿತ್ರಕ್ಕೂ ಧರ್ಮಗಳಿಗೂ ಯಾವುದೇ ಸಂಬಂಧವಿಲ್ಲ. ಆದರೆ ಚಿತ್ರದಲ್ಲಿ ಪಾತ್ರಗಳು ಮಾತ್ರ ಅನ್ಯಕೋಮಿನವರದ್ದಾಗಿರುತ್ತದೆ ಎಂದು ಚಿತ್ರದ ನಿರ್ದೇಶಕ ಸುಧೀರ್ ಶಾನ್ ಬೋಗ್ ಹೇಳಿದ್ದಾರೆ.

ಅನಂತು ವರ್ಸಸ್ ನುಸ್ರತ್ ಚಿತ್ರವನ್ನು ಮಾಣಿಕ್ಯ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಅಕ್ಟೋಬರ್ ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣವಿದ್ದು, ಸುನದ್  ಗೌತಮ್ ಸಂಗೀತ ಸಂಯೋಜಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

SCROLL FOR NEXT