'ಟೆಸ್ಲಾ'ದಲ್ಲಿ ಶೃತಿ ಹರಿಹರನ್
ಬೆಂಗಳೂರು: 'ಲೂಸಿಯಾ' ಚಿತ್ರದಿಂದ ಸ್ಯಾಂಡಲ್ ವುಡ್ ಚಿತ್ರ ಪಯಣ ಪ್ರಾರಂಭಿಸಿದ ಶೃತಿ ಹರಿಹರನ್, ಚಿತ್ರಕಥೆ ಆಯ್ಕೆಯಲ್ಲಿ ಯಾವಾಗಲೂ ಚ್ಯೂಸಿಯಾಗಿರುತ್ತಾರೆ. ಬಹುತೇಕ ಬಾರಿ ಅವರು ತಮ್ಮ ಆಯ್ಕೆಯಲ್ಲಿ ಯಶಸ್ಸು ಕಂಡಿದ್ದಾರೆ. ಇದೀಗ ಅವರ ಗಮನ ಸೆಳೆದ ಇತ್ತೀಚಿನ ಸ್ಕ್ರಿಪ್ಟ್ ಬರಲಿರುವ ಚಿತ್ರ 'ಟೆಸ್ಲಾ'.
ವಿನೋದ್ ಜೆ ರಾಜ್ ನಿರ್ದೇಶನ ಈ ಚಿತ್ರಕ್ಕೆ ಇರುವ ಕಾರಣ ಶೃತಿ ಇದರಲ್ಲಿ ಆಸಕ್ತಿ ತಾಳಲು ಇನ್ನೊಂದು ಕಾರಣ ದೊರಕಿದೆ, ಈಗ ಶೃತಿ ಯ ಹೊಸ ಬ್ಯಾನರ್ ;ಕಲಾತ್ಮಿಕಾ' ದಲ್ಲಿ . ಕಿರುಚಿತ್ರ, 'ದಿ ಲಾಸ್ಟ್ ಕನ್ನಡಿಗ',ತಯಾರಾಗಿ ಯಶಸ್ವಿ ಯಾಗಿತ್ತು. ಈಗ ಎಲ್ಲಾ ಯೋಜನೆಯಂತೆ ನಡೆದಲ್ಲಿ, 'ಟೆಸ್ಲಾ'. ಶೃತಿ ಸ್ವಂತ ಬ್ಯಾನರ್ ಅಡಿಯಲ್ಲಿ ಬರುವ ಮೊದಲ ಕಲಾತ್ಮಕ ಚಿತ್ರ ಎನಿಸಿಲಿದೆ.
ಚಿತ್ರದ ಫಸ್ಟ್ ಲುಕ್ ನ್ನು ನಿರ್ಮಾಪಕರು ರಿಲೀಸ್ ಮಾಡಿದ್ದು ಚಿತ್ರದಲ್ಲಿ ಏಳು ವಿಭಿನ್ನ ಫೇಸ್ ಗಳಲ್ಲಿ ನಟಿ ಕಾಣಿಸಲಿದ್ದಾರೆ, ಮುಂಬರುವ ದಿನದಲ್ಲಿ ಅವುಗಳನ್ನು ಒಂದೊಂದಾಗಿ ಬಿಡುಗಡೆ ಮಾಡಲು ಯೋಚಿಸಿದ್ದೇವೆ ಎಂದು ನಿರ್ಮಾಪಕರು ಹೇಳಿದರು. ಇದೀಗ, ಚಿತ್ರ ತಯಾರಕರು ಟೀಸರ್ ತಯಾರಿಯಲ್ಲಿ ನಿರತರಾಗಿದ್ದಾರೆ
ಶೃತಿ, ಈ ಚಿತ್ರ ಪ್ರಾರಂಭವಾಗಿರುವುದರ ಬಗ್ಗೆ ತಮ್ಮ ಉತ್ಸಾಹವನ್ನು ಸಾಮಾಜಿಕ ತಾಣಗಳಲ್ಲಿ ವ್ಯಕ್ತಪಡಿಸಿದರು.
"ಚಿತ್ರದಲ್ಲಿ ಪ್ರಮುಖ ಪಾತ್ರ ಸ್ತ್ರೀ (ಟೆಸ್ಲಾ) ಆಗಿದ್ದು, ಇದೊಂದು ವೈಜ್ಞಾನಿಕ ಕಾದಂಬರಿ ಥ್ರಿಲ್ಲರ್ ನಿರೂಪಣೆ ಹೊಂದಿದೆ.ಇದೆಲ್ಲಕ್ಕೂ ಬಹು ಮುಖ್ಯವಾಗಿ, ಅದು ಕನ್ನಡ ಚಲನಚಿತ್ರವಾಗಿದೆ."
ಶೃತಿ ಹರಿಹರನ್ ತನ್ನ ಸ್ವಂತ ಬ್ಯಾನರ್ ನಲ್ಲಿ ಮಾದುತ್ತಿರುವ ಮೊದಲ ವೈಜ್ಞಾನಿಕ ಥ್ರಿಲ್ಲರ್ ಹೇಗಿರುತ್ತದೆ ಎನ್ನುವುದನ್ನು ನೋಡಲು ಚಿತ್ರ ಬಿಡುಗಡೆಯವರೆಗೆ ಕಾಯಬೇಕು. ಏತನ್ಮಧ್ಯೆ, ಶೃತಿ ಅಭಿನಯದ ಬಿಜೋಯ್ ನಂಬಿಯಾರ್ ನಿರ್ದೇಶನದ 'ತಾರಕ್' ಇದೇ ಶುಕ್ರವಾರ ಬಿಡುಗಡೆಗೆ ಸಿದ್ದವಾಗಿದೆ.