ರಾಷ್ಟ್ರ ಪ್ರಶಸ್ತಿ ಪಡೆದ ತಿಥಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಈರೇಗೌಡ ಅವರು ಬಲೆ ಕೆಂಪಾ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.
ಬಲೆ ಕೆಂಪಾ ಚಿತ್ರದ ಪೋಸ್ಟ್ ಪ್ರೋಡಕ್ಷನ್ ನಲ್ಲಿ ತೊಡಗಿರುವ ಈರೇಗೊಡ್ ಅವರು ಮಂಡ್ಯ, ಬೆಂಗಳೂರು ಮತ್ತು ಮುಂಬೈನಲ್ಲಿ ಸುತ್ತು ಹಾಕುತ್ತಿದ್ದಾರೆ. ಇನ್ನು ಈರೇಗೌಡ ಅವರು ತಮ್ಮ ಚಿತ್ರಕ್ಕಾಗಿ ಬಾಲಿವುಡ್ ನಿರ್ಮಾಪಕರೊಬ್ಬರಿಗೆ ಗಾಳ ಹಾಕಿದ್ದು ಅವರು ಕನ್ನಡದಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರಂತೆ.
ನಿರ್ಮಾಪಕರು ನಿರ್ದೇಶಕರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಾರೆ. ನಿರ್ಮಾಪಕರು ಚಿತ್ರದ ಪ್ರಮೋಷನ್ ಗಾಗಿ ಭಾರೀ ಕಸರತ್ತು ನಡೆಸಲಿದ್ದು ಚಿತ್ರದ ಕೆಲಸಗಳು ಪೂರ್ಣಗೊಳ್ಳುವುದನ್ನೇ ಕಾಯುತ್ತಿದ್ದಾರೆ ಎಂಬುದನ್ನು ಈರೇಗೌಡ ಅವರ ಆಪ್ತರು ಹೇಳಿದ್ದಾರೆ.
ಬಲೆಕೆಂಪಾ ಚಿತ್ರಕ್ಕಾಗಿ ನಿರ್ದೇಶಕರು ಮಂಡ್ಯದವರನ್ನೇ ಆಯ್ಕೆ ಮಾಡಿಕೊಳ್ಳಲಿದ್ದು ಈ ಕಲಾವಿದರೆಲ್ಲಾ ಇದೇ ಮೊದಲ ಬಾರಿಗೆ ಕ್ಯಾಮರಾ ಮುಂದೆ ಅಭಿನಯಿಸುತ್ತಿದ್ದಾರಂತೆ. ಬಲೆಕೆಂಪಾ ಚಿತ್ರ ತಿಥಿ ಚಿತ್ರದಂತೆ ಇರುವುದಿಲ್ಲ. ಬದಲಿಗೆ ಚಿತ್ರದ ಮೇಕಿಂಗ್ ತಿಥಿಯಂತೆ ಇರಲಿದೆಯಂತೆ.