ಬೆಂಗಳೂರು: ಸ್ಯಾಂಡಲ್ವುಡ್ ನ ಗೋಲ್ಡನ್ ಸ್ಟಾರ್ ನಟ ಗಣೇಶ್ ಅವರ ಅನುಮತಿ ಇಲ್ಲದೆ ಫೋಟೋ ಬಳಸಿಕೊಂಡಿದ್ದ ಅಗರಬತ್ತಿ ಸಂಸ್ಥೆಯೊಂದಕ್ಕೆ ಸಿಟಿ ಸಿವಿಲ್ ಕೋರ್ಟ್ ಬರೋಬ್ಬರಿ 75 ಲಕ್ಷ ರುಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದೆ.
10 ವರ್ಷಗಳ ಕಾಲ ನಡೆದ ವಿಚಾರಣೆಗೆ ಇಂದು ತೆರೆ ಬಿದ್ದಿದ್ದು ಗಣೇಶ್ ಗೆ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.
ಮೋಕ್ಷ್ ಅಗರಬತ್ತಿ ಕಂಪನಿ ಚೆಲುವಿನ ಚಿತ್ತಾರ ಚಿತ್ರದ ತಮ್ಮ ಪೋಸ್ಟರ್ ಬಳಿಸಿಕೊಂಡಿದೆ ಎಂದು ಆರೋಪಿಸಿ 2008ರಲ್ಲಿ ಗಣೇಶ್ ಕೋರ್ಟ್ ಮೆಟ್ಟಿಲೇರಿದ್ದರು. ಜಾಹೀರಾತು ರೂಪದಲ್ಲಿ ಗಣೇಶ್ ಫೋಟೋ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ನಟ ಗಣೇಶ್ ಗೆ ಪರಿಹಾರವಾಗಿ 75 ಲಕ್ಷ ರುಪಾಯಿ ನೀಡುವಂತೆ ಮೋಕ್ಷ್ ಕಂಪನಿಗೆ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.
ಈ ವಿಚಾರವಾಗಿ ನಿರ್ದೇಶಕರಾದ ಎಸ್. ನಾರಾಯಣ್ ಹಾಗೂ ಗಣೇಶ್ ಮಧ್ಯೆ ವಿವಾದಕ್ಕೂ ಕಾರಣವಾಗಿತ್ತು. ಈ ಸಂಬಂಧ ಎಸ್ ನಾರಾಯಣ್ ಕೋರ್ಟ್ ನ ವಿಚಾರಣೆ ವೇಳೆ ಹಾಜರಾಗಿ ಹೇಳಿಕೆ ಸಹ ದಾಖಲಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos