ಭಗತ್ ಸಿಂಗ್ ನೇಣಿಗೇರಿದ ಸ್ಥಳ ಈಗ ಹೀಗಿದೆ ನೋಡಿ ಎಂದ ರಾಜಮೌಳಿ! 
ಸಿನಿಮಾ ಸುದ್ದಿ

ಭಗತ್ ಸಿಂಗ್ ನೇಣಿಗೇರಿದ ಸ್ಥಳ ಈಗ ಹೀಗಿದೆ ನೋಡಿ ಎಂದ ರಾಜಮೌಳಿ!

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ಟ್ವೀಟ್ ಮಾಡಿರುವ ಒಂದು ಫೋಟೋ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ಟ್ವೀಟ್ ಮಾಡಿರುವ ಒಂದು ಫೋಟೋ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ರಾಜಮೌಳಿ ಪಾಕಿಸ್ತಾನದ ಲಾಹೋರ್ ನಲ್ಲಿರುವ ಶಾದ್ಮನ್ ಚೌಕದ ಫೋಟೋವನ್ನು ಟ್ವಿಟ್ ಮಾಡಿದ್ದಾರೆ. ಇದೇ ಸ್ಥಳದಲ್ಲಿ ಭಾರತದ ಕ್ರಾಂತಿಕಾರಿ ಹೋರಾಟಗಾರ  ಭಗತ್ ಸಿಂಗ್ ಅವರನ್ನು ಬ್ರಿಟೀಷರು ಗಲ್ಲಿಗೇರಿಸಿದ್ದರೆಂದು ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.
ಅಂತರಾಷ್ಟ್ರೀಯ ಚಿತ್ರ ಪ್ರದರ್ಶನಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ್ದ ರಾಜಮೌಳಿ ಅಲ್ಲಿನ ಕರಾಚಿ, ಲಾಹೋರ್, ಇಸ್ಲಾಮಾಬಾದ್ ಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಲಾಹೋರ್ ನಗರದ ಈ ಚೌಕದೊಡನೆ ಭಾರತದ ನಂಟನ್ನು ಕುರಿತಂತೆ ಅವರು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇಂದು  ಆ ಸ್ಥಳದ ಮಹತ್ವ ಸಾರುವ ಯಾವ ಕುರುಹುಗಳೂ ಅಲ್ಲಿಲ್ಲ ಎಂದೂ ಅವರು ಹೇಳಿದ್ದಾರೆ. 
ಪಾಕಿಸ್ತಾನದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಜಮೌಳಿ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!

ಕೇವಲ 4 ಚಿತ್ರ ಮಾಡಿದ ನಟನಿಗೆ 'ಸರ್' ಅಂತೀರಲ್ಲ ಶಿವಣ್ಣ; ಸೆಂಚೂರಿ ಸ್ಟಾರ್ ವಿರುದ್ಧ ಕನ್ನಡಿಗರ ಬೇಸರ, Video!

ಸಿಎಂ ವಿಜಯ್ ಯು- ಟರ್ನ್: ಮತ್ತೊಂದು ಮಹತ್ವದ ಆದೇಶ ಹಿಂಪಡೆದ ತಮಿಳುನಾಡು ಸರ್ಕಾರ!

'ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಒಂದೇ ಒಂದು ಕಲ್ಲು ಇಡೋಕೂ ಬಿಡಲ್ಲ': ತಮಿಳುನಾಡು ಸಚಿವ ಆನಂದ್ ಕ್ಯಾತೆ

ಫುಟ್‌ಪಾತ್‌ ಮೇಲೆ ಮತ್ತೆ ಅಂಗಡಿ ಹಾಕಿದ್ರೆ ಸಾಮಗ್ರಿಗಳನ್ನ ಜಪ್ತಿ ಮಾಡಿ, ದುಪ್ಪಟ್ಟು ದಂಡ ವಿಧಿಸಿ: ಕೃಷ್ಣ ಬೈರೇಗೌಡ ಖಡಕ್ ಸೂಚನೆ