ಲಂಡನ್ : ಬ್ರಿಟಿಷ್ ಕಿರುತೆರೆ ಚಿತ್ರ ದಿ ಬಾಯ್ ವಿಥ್ ದಿ ಟಾಪ್ ನಾಟ್ ನಲ್ಲಿನ ಅಭಿನಯಕ್ಕಾಗಿ ಭಾಪ್ತಾ ಅವಾರ್ಡ್ ಗೆ ಬಾಲಿವುಡ್ ಹೆಸರಾಂತ ನಟ ಅನುಪಮ್ ಖೇರ್ ನಾಮನಿರ್ದೇಶನಗೊಂಡಿದ್ದಾರೆ. ಇಂದು ಈ ವಿಷಯವನ್ನು ಪ್ರಕಟಿಸಲಾಗಿದೆ.
ಅನುಪಮ್ ಖೇರ್ ಪಾಶ್ಚಿಮಾತ್ಯದ ಸಿನಿಮಾಗಳಲ್ಲಿ ಆಗಾಗ್ಗೇ ಅಭಿನಯಿಸುತ್ತಾರೆ. ಇತ್ತೀಚಿಗೆ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶಿತಗೊಂಡಿದ್ದ ದಿ ಬಿಗ್ ಶಾಕ್ ಸಿನಿಮಾನದಲ್ಲಿನ ಅವರ ಪೋಷಕ ಪಾತ್ರಗೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.
ದೀಪ್ತಿ ನಾವೆಲ್ ಹಾಗೂ ಸಚಾ ದಾವಾ ಕೂಡಾ ದಿ ಬಾಯ್ ವಿಥ್ ದಿ ಟಾಪ್ ನಾಟ್ ಚಿತ್ರದಲ್ಲಿ ಅಭಿನಯಿಸಿದ್ದು, ಬ್ರಿಟಿಷ್ ಪತ್ರಕರ್ತ ಸತ್ ನಾಮ್ ಸಂಗೇರಾ ಕುರಿತಾದ ಭಾವನಾತ್ಮಕ , ಮಾನವೀಯ ಕಥೆಯ ಹಂದರವುಳ್ಳ ಕಿರುಚಿತ್ರವಾಗಿದೆ.
Thank you @BAFTA for the nomination. I feel honoured and humbled.