ಬೆಂಗಳೂರು: ಇಂದು ಕಿರಿಕ್ ಪಾರ್ಟಿ ಹುಡುಗಿ ರಶ್ಮಿಕಾ ಮಂದಣ್ಣ ಅವರ ಹುಟ್ಟು ಹಬ್ಬ. ತೆಲುಗಿನಲ್ಲಿ ವಿಜಯ ದೇವರಕೊಂಡ ಜೊತೆ ಸಿನಿಮಾ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಆಗಮಿಸಿರುವ ರಶ್ಮಿಕಾ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರು ಮತ್ತು ಅಭಿಮಾನಿಗಳ ಜೊತೆ ಕಾಲ ಕಳೆಯಲು ನಿರ್ಧರಿಸಿದ್ದಾರೆ.
ಏಪ್ರಿಲ್ 6ರಿಂದ ರಶ್ಮಿಕಾ ಯಜಮಾನ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ, ಕಳೆದ ವರ್ಷ ಹಲವು ಉತ್ತಮ ನಿರ್ದಾರ ಕೈಗೊಂಡಿದ್ದಕ್ಕೆ ಆಕೆ ಸಂತಸ ವ್ಯಕ್ತ ಪಡಿಸಿದ್ದಾರೆ. 21 ನೇ ವಯಸ್ಸಿನಲ್ಲಿ ನಾನು ಉತ್ತಮ ನಿರ್ಧಾರ ಕೈಗೊಂಡಿದ್ದೇನೆ, ಒಬ್ಬ ಉತ್ತಮ ಮಾನವೀಯತೆ ಉಳ್ಳ ವ್ಯಕ್ತಿಯಾಗಿ ನಾನು ಬೆಳೆದಿದ್ದೇನೆ, ಜೊತೆಗೆ ನನ್ನ ವಯಸ್ಸಿಗಿಂತ ಆರೇಳು ವರ್ಷ ದೊಡ್ಡವಳಂತೆ ನನಗೆ ಅನ್ನಿಸುತ್ತಿದೆ, ಏಕೆಂದರೆ ಅಂಥ ನಿರ್ಧಾರಗಳನ್ನು ನಾನು ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಜೊತೆಗೆ ಇದು ಹಲವು ನಿರ್ಣಯಗಳನ್ನು ಕೈಗೊಳ್ಳುವ ಸಮಯವಾಗಿದೆ. ವೃತ್ತಿಯಲ್ಲಿ ಹಾಗೂ ವಯಕ್ತಿಕ ಬದುಕಿನಲ್ಲಿ ಮಾನಸಿಕ ಶಾಂತಿ ಬೇಕಾಗಿದೆ, ತುಂಬಾ ಒತ್ತಡ ತೆಗೆದುಕತೊಳ್ಳಲು ನಾನು ಬಯಸುವುದಿಲ್ಲ, ನನ್ನ ಆರೋಗ್ಯವನ್ನು ಹಾಳು ಮಾಡಿಕೊಳ್ಳಲು ನಾನು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ರಶ್ಮಿಕಾ ಅವರ ಅಭಿಮಾನಿಗಳ ಸಂಖ್ಯೆಯಲ್ಲಿ ಏರಿದೆ. ಪ್ರತಿಯೊಂದು ಸಿನಿಮಾದಲ್ಲಿ ನನ್ನ ಅಭಿಮಾನಿಗಳು ತೋರುವ ಪ್ರೀತಿಗೆ ನಾನು ಆಬಾರಿಯಾಗಿದ್ದೇನೆ. ತಮ್ಮ ಅಬಿಮಾನಿಗಳು ಟ್ವೀಟ್ ಮಾಡುವ ಮೂಲಕ ನನಗೆ ಧೈರ್ಯ ತುಂಬುತ್ತಾರೆ. ಅವರ ಪ್ರತಿಯೊಂದು ಪೋಸ್ಟ್ ಅನ್ನು ನಾನು ನೋಡುತ್ತೇನೆ, ಆದರೆ ಸೆಟ್ ನಲ್ಲಿರುವಾಗ ನಾನು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಯಾವತ್ತೂ ನಾನು ಏಕಾಂಗಿ ಎಂದು ಅನ್ನಿಸಿಲ್ಲ, ಅಭಿಮಾನಿಗಳಲ್ಲದೇ, ಅವರ ಬೆಂಬಲವಿಲ್ಲದೇ ನಾನಿಲ್ಲ,ಮುಂದಿನ ದಿನಗಳಲ್ಲಿ ನಾನು ಅವರಿಗೆ ಕೆಲವನ್ನು ವಾಪಾಸ್ ನೀಡುತ್ತೇನೆ. ಅವರು ನನ್ನ ಬಗ್ಗೆ ಹೆಮ್ಮೆ ಪಡುವಂತೆ ಮಾಡುತ್ತೇನೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics