ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಅ.16ರ CJPಯ ಪ್ರತಿಭಟನೆಗೆ ತಡೆ ನೀಡಲು ಹೈಕೋರ್ಟ್ ನಕಾರ!

ಅಕ್ಟೋಬರ್ 16 ರಂದು ಕನ್ನಾಟ್ ಪ್ಲೇಸ್‌ ಸೆಂಟ್ರಲ್ ಪಾರ್ಕ್‌ನಲ್ಲಿ ನಿಗದಿಯಾಗಿದ್ದ ಕಾಕ್ರೋಚ್ ಜನತಾ ಪಕ್ಷ (CJP) 'ಫ್ಲೈ ದಿ ಟ್ರೈಕ್ಲಾರ್' ಕಾರ್ಯಕ್ರಮಕ್ಕೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
abhijeet dipke
ಅಭಿಜಿತ್ ದೀಪ್ಕೆ
Updated on: 

ನವದೆಹಲಿ: ಅಕ್ಟೋಬರ್ 16 ರಂದು ಕನ್ನಾಟ್ ಪ್ಲೇಸ್‌ ಸೆಂಟ್ರಲ್ ಪಾರ್ಕ್‌ನಲ್ಲಿ ನಿಗದಿಯಾಗಿದ್ದ ಕಾಕ್ರೋಚ್ ಜನತಾ ಪಕ್ಷ (CJP) 'ಫ್ಲೈ ದಿ ಟ್ರೈಕ್ಲಾರ್' ಕಾರ್ಯಕ್ರಮಕ್ಕೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಅದರಂತೆ ನಾಳೆ ಸಂಜೆ 5 ಗಂಟೆಗೆ ಸಿಜೆಪಿಯ ತಿರಂಗಾ ಯಾತ್ರೆ ನಡೆಯಲಿದೆ. ನಿನ್ನೆ ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿಯ ಪ್ರತಿಭಟನೆಯ ವಿರುದ್ಧ ಅರ್ಜಿ ಸಲ್ಲಿಸಲಾಗಿತ್ತು. ನಾಳೆ ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆಯನ್ನು ನಿಯಂತ್ರಿಸಲು ಮತ್ತು ಹತೋಟಿಯಲ್ಲಿಡಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬ ದೆಹಲಿ ಪೊಲೀಸರ ಭರವಸೆಯನ್ನು ಕೋರ್ಟ್ ದಾಖಲಿಸಿಕೊಂಡಿದೆ.

ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ನಿತಿನ್ ವಾಸುದೇವ ಸಾಂಬ್ರೆ ಮತ್ತು ನ್ಯಾಯಮೂರ್ತಿ ಸಂಜಯ್ ಶರ್ಮಾ ಅವರಿದ್ದ ಪೀಠವು, ಕನ್ನಾಟ್ ಪ್ಲೇಸ್‌ನ ವ್ಯಾಪಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಪ್ರತಿಭಟನೆಗಳನ್ನು ಸುಪ್ರೀಂ ಕೋರ್ಟ್ ರೂಪಿಸಿರುವ ಅಸ್ತಿತ್ವದಲ್ಲಿರುವ ಕಾನೂನಿನ ಪ್ರಕಾರ ನಿಯಂತ್ರಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದರು. ಹಬ್ಬದ ಋತುವಿನಲ್ಲಿ ದೆಹಲಿಯ ಮಧ್ಯಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ಅಂಗಡಿಗಳನ್ನು ಮುಚ್ಚಿದರೆ ಆರ್ಥಿಕ ನಷ್ಟವಾಗುತ್ತದೆ. ವ್ಯಾಪಾರಿಗಳು ಮತ್ತು ಮಾರಾಟಗಾರರು "ಬೀದಿ ಪಾಲಾಗುತ್ತಾರೆ" ಎಂದು ಅರ್ಜಿದಾರರ ಪರ ಹಿರಿಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು, 'ಕಾಕ್ರೋಚ್ ಜನತಾ ಪಾರ್ಟಿ'ಯ (CJP) ಚಟುವಟಿಕೆಗಳನ್ನು ನಿಯಂತ್ರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದು ಅರ್ಜಿದಾರರ ಆತಂಕವನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಹೀಗಾಗಿ ಪ್ರಕರಣ ಮುಂದಿನ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿದರು.

abhijeet dipke
ಜ್ಞಾನೇಶ್ ಕುಮಾರ್ ರಕ್ಷಿಸಲು ತಮ್ಮದೇ ದೇಶವಾಸಿಗಳ ಮೇಲೆ ಮೋದಿ, ಶಾ ಯುದ್ಧ ಸಾರಿದ್ದಾರೆ: ಕೇಂದ್ರ ಸರ್ಕಾರದ ಮೇಲೆ ದಿಪ್ಕೆ ಆರೋಪ

ಆಮ್ ಆದ್ಮಿ ಪಕ್ಷವು ನಾಳೆ ಸಿಜೆಪಿಯ ಕಾರ್ಯಕ್ರಮವನ್ನು ಬೆಂಬಲಿಸಿದೆ. ನಾಳೆ ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ತ್ರಿವರ್ಣ ಧ್ವಜ ಮೆರವಣಿಗೆ ನಡೆಸುವುದಾಗಿ ಎಎಪಿ ನಾಯಕ ಮತ್ತು ದೆಹಲಿಯ ಮಾಜಿ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಆದ್ದರಿಂದ, ನಾವು ಇಂದು ನಮ್ಮ ಪ್ರತಿಭಟನೆಯನ್ನು ರದ್ದುಗೊಳಿಸಿ ನಾಳೆಯ ಸಿಜೆಪಿ ಕಾರ್ಯಕ್ರಮದೊಂದಿಗೆ ವಿಲೀನಗೊಳಿಸಿದ್ದೇವೆ. ತ್ರಿವರ್ಣ ಧ್ವಜ ಹಾರಿಸುವುದು ನಾಗರಿಕರ ಹಕ್ಕು ಮತ್ತು ಸವಲತ್ತು ಎಂದು ನಾವು ಎಲ್ಲರಿಗೂ ಹೇಳಿದ್ದೇವೆ. ಯಾವುದೇ ಸರ್ಕಾರ ಅಥವಾ ಪೊಲೀಸರು ದೇಶದ ಯುವಕರು ತ್ರಿವರ್ಣ ಧ್ವಜ ಹಾರಿಸುವುದನ್ನು ತಡೆಯಲು ಸಾಧ್ಯವಿಲ್ಲ.

ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಬಂಧನದ ವಿರುದ್ಧ ಪ್ರತಿಭಟಿಸುವ ಸಲುವಾಗಿ ಸಿಜೆಪಿ ಮುಖ್ಯಸ್ಥ ಅಭಿಜಿತ್ ದೀಪ್ಕೆ ನಿನ್ನೆ ಕರೆಯನ್ನು ನೀಡಿದರು. ತ್ರಿವರ್ಣ ಧ್ವಜವನ್ನು ಹೊತ್ತುಕೊಳ್ಳಲು ಜನರು ಸೇರಬೇಕೆಂದು ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com