ಸ್ಯಾಂಡಲ್ವುಡ್ ನಟಿ ಶ್ರಾವ್ಯ ರಾವ್ ಅಭಿನಯದ ಎರಡು ಚಿತ್ರಗಳು ಇದೇ ವಾರ ತೆರೆ ಕಾಣುತ್ತಿದ್ದು ಈ ಬಗ್ಗೆ ನಟಿ ಖುಷಿಯಲ್ಲಿದ್ದಾರೆ.
ಎರಡು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಾನು ಅಭಿನಯಿಸಿದ್ದೇನೆ. ಎರಡು ಚಿತ್ರಗಳನ್ನು ಅಭಿಮಾನಿಗಳು ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ. ಎರಡು ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ಡಬಲ್ ಖುಷಿ ತಂದಿದೆ ಎಂದು ನಟಿ ಹೇಳಿದ್ದಾರೆ.
ರಾಜೇಂದ್ರ ಕಾರಂತ್ ನಿರ್ದೇಶನದ ನಂಜುಂಡಿ ಕಲ್ಯಾಣ ಮತ್ತು ಶ್ರಾವ್ಯ ರಾವ್ ತಂದೆ ಓಂ ಪ್ರಕಾಶ್ ರಾವ್ ನಿರ್ದೇಶನದ ಹುಚ್ಚ 2. ಹುಚ್ಚ 2 ಚಿತ್ರ ಒಂದು ಸಾಹಸ ಪ್ರದಾನ ಚಿತ್ರವಾಗಿದ್ದರೆ ನಂಜುಂಡಿ ಕಲ್ಯಾಣ ಚಿತ್ರ ರೊಮ್ಯಾಂಟಿಕ್ ಕಾಮಿಡಿ ಎಂದು ಹೇಳಿದರು.
ಎರಡು ಚಿತ್ರಗಳಲ್ಲಿ ಪರಿಪೂರ್ಣ ನಟನೆಯನ್ನು ಮಾಡಿದ್ದೇನೆ. ಎರಡು ಚಿತ್ರಗಳಲ್ಲಿನ ಪಾತ್ರಗಳೂ ಸಹ ವಿಭಿನ್ನವಾಗಿದ್ದು ಅಭಿಮಾನಿಗಳು ನನ್ನ ಪಾತ್ರವನ್ನು ಇಷ್ಟಪಡುತ್ತಾರೆ ಎಂದು ಹೇಳಿದ್ದಾರೆ.