ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ಸೀಜರ್ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ವಿನಯ್ ಕೃಷ್ಣ ತುಂಬಾ ಕೌತುಕರಾಗಿದ್ದಾರೆ. ಈ ವಾರ ಸೀಜರ್ ಚಿತ್ರ ಬಿಡುಗಡೆಯಾಗುತ್ತಿದ್ದರೂ ಚಿತ್ರಕ್ಕೆ ಸರಿಯಾದ ಪ್ರಚಾರ ಸಿಗುತ್ತಿಲ್ಲ ಎಂಬ ಬೇಸರ ಕೂಡ ವಿನಯ್ ಕೃಷ್ಣಗಿದೆ. ಚಿರಂಜೀವಿ ಸರ್ಜಾ ನಾಯಕನಾಗಿ ಅಭಿನಯಿಸಿರುವ ಚಿತ್ರದಲ್ಲಿ ರವಿಚಂದ್ರನ್ ಮತ್ತು ಪ್ರಕಾಶ್ ರಾಜ್ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಪಾರುಲ್ ಯಾದವ್ ನಾಯಕಿಯಾಗಿ ಅಭಿನಯಿಸಿದ್ದಾರೆ.
ಚಿತ್ರದ ಬಗ್ಗೆ ಚಿರಂಜೀವಿ ಸರ್ಜಾ ಮಾತ್ರ ಪ್ರಚಾರ ಮಾಡುತ್ತಿದ್ದು ಈ ಬಗ್ಗೆ ನಿರ್ದೇಶಕರು ಹೀಗೆ ಹೇಳುತ್ತಾರೆ. ಇದನ್ನು ನಾನು ದುರದೃಷ್ಟ ಎಂದು ಕರೆಯಬೇಕೊ, ಬೇಡವೇ ಎಂದು ಗೊತ್ತಾಗುತ್ತಿಲ್ಲ. ರವಿಚಂದ್ರನ್ ಮತ್ತು ಪ್ರಕಾಶ್ ರಾಜ್ ತಮ್ಮತಮ್ಮ ಕೆಲಸಗಳಲ್ಲಿ ಬ್ಯುಸಿ ಎಂದು ಕೇಳಲ್ಪಟ್ಟೆ. ಅವರಿಗೆ ನಾನು ತೊಂದರೆ ನೀಡುವುದು ತಪ್ಪಾಗುತ್ತದೆ. ಪಾರುಲ್ ಯಾದವ್ ಗೆ ಹಣ ನೀಡುವ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಾಗಿವೆ ಎಂದು ಮಾಧ್ಯಮದಿಂದ ತಿಳಿದುಕೊಂಡೆ. ಹೀಗಾಗಿ ಅವರು ಸಿನಿಮಾ ಪ್ರಚಾರಕ್ಕೆ ಬರುತ್ತಿಲ್ಲ ಎಂದರು ವಿನಯ್ ಕೃಷ್ಣ.
ಸ್ಟಾರ್ ಪ್ರಚಾರದ ಕೊರತೆ ಮಧ್ಯೆಯೂ ಚಿತ್ರ ಗೆಲ್ಲುವ ವಿಶ್ವಾಸ ವಿನಯ್ ಕೃಷ್ಣಗಿದೆ. ಸೀಜರ್ ಚಿತ್ರ ತಯಾರಿಸಲು ಮೂರು ವರ್ಷ ಹಿಡಿಯಿತಂತೆ.ಇದೀಗ ನಿರ್ಮಾಪಕ ತ್ರಿವಿಕ್ರಮ ಸಪಲಾಯ ನಾಲ್ಕೂ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಯೋಜಿಸಿದ್ದಾರಂತೆ. ಚಂದನ್ ಶೆಟ್ಟಿ ಸಂಗೀತ ಮತ್ತು ಅಂಜಿ ಮತ್ತು ರಾಜೇಶ್ ಕಟ ಅವರ ಛಾಯಾಗ್ರಹಣವಿದೆ.