ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿ ಅದರೊಟ್ಟಿಗೆ 777 ಚಾರ್ಲಿ ಶೂಟಿಂಗ್ ನಲ್ಲಿ ಕೂಡ ಭಾಗಿಯಾಗುತ್ತಿದ್ದಾರೆ. ಪರಮ್ವಾ ಸ್ಟುಡಿಯೊಸ್ ಮತ್ತು ಪುಷ್ಕರ್ ಸಿನಿಮಾಸ್ ಜಂಟಿಯಾಗಿ ಈ ಚಿತ್ರ ನಿರ್ಮಿಸುತ್ತಿದ್ದು ಇದನ್ನು ಕಿರಣ್ ರಾಜ್ ನಿರ್ದೇಶನ ಮಾಡುತ್ತಿದ್ದಾರೆ.
ಜೂನ್ ಮೊದಲ ವಾರದಲ್ಲಿ ಮೊದಲ ಶೆಡ್ಯೂಲ್ ಶೂಟಿಂಗ್ ಆರಂಭವಾಗಲಿದೆ. ಈ ಮಧ್ಯೆ ಚಿತ್ರಕ್ಕೆ ತಯಾರಿ ಜೋರಾಗಿ ನಡೆಯುತ್ತಿದೆ. ಮನುಷ್ಯ ಮತ್ತು ನಾಯಿ ನಡುವಿನ ಸಂಬಂಧದ ಬಗ್ಗೆ ಚಿತ್ರದಲ್ಲಿ ವಿವರಿಸಲಾಗುತ್ತಿದ್ದು ಚಿತ್ರದ ವಿವಿಧ ಭಾಗಗಳಲ್ಲಿ ಮೂವರು ಚಾರ್ಲಿಗಳು ರಕ್ಷಿತ್ ಅವರ ಜೊತೆಗೂಡಲಿದ್ದಾರೆ. ನಾಯಿಗೆ ಈಗಾಗಲೇ ತರಬೇತಿ ನೀಡಲಾಗುತ್ತಿದೆ.
24/7 ಗಂಟೆಗಳ ಕಾಲ 2 ಲ್ಯಾಬ್ರೊಡಾರ್ ನಾಯಿಗಳಿಗೆ ತರಬೇತುದಾರ ಬಿ.ಸಿ.ಪ್ರಮೋದ್ ತರಬೇತಿ ನೀಡುತ್ತಿದ್ದಾರೆ. ಲ್ಯಾಬ್ರೊಡಾರ್ ನಾಯಿಗಳಿಗೆ ತರಬೇತಿ ನೀಡುತ್ತಿರುವ ಕೆಲವು ಫೋಟೋಗಳು ಸಿಟಿ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ. ಚಾರ್ಲಿ ನಾಯಿ ಪ್ರತಿದಿನ 10 ನಿಮಿಷ ಟ್ರೆಡ್ ಮಿಲ್ ನಲ್ಲಿ ನಡೆಯುತ್ತಾ ತರಬೇತಿ ತೆಗೆದುಕೊಳ್ಳುತ್ತದೆ.
ಬೌಲ್ ಗಳನ್ನು ಹೆಕ್ಕುವುದು, ಹೆಲ್ಮೆಟ್ ಗಳನ್ನು ಹೆಕ್ಕುವುದು, ಹೆಚ್ಚಿನ ಆಹಾರ ಕೇಳುವುದು, ಟಿವಿ ವೀಕ್ಷಣೆ ಇತ್ಯಾದಿಗಳನ್ನು ಮಾಡುತ್ತಿರುತ್ತದೆ ಎನ್ನುತ್ತಾರೆ ಪ್ರಮೋದ್. ತರಬೇತುದಾರ ಬಿ.ಸಿ.ಪ್ರಮೋದ್ ತಮ್ಮ ಅತಿ ಹೆಚ್ಚಿನ ವೇತನದ ಐಟಿ ಉದ್ಯೋಗವನ್ನು ತೊರೆದು ತಮ್ಮ ಸಂಪೂರ್ಣ ವೇಳೆಯನ್ನು ನಾಯಿಗಳ ತರಬೇತಿಗೆ ಮೀಸಲಿಟ್ಟಿದ್ದಾರೆ. ನನಗೆ ಬಾಲ್ಯದಿಂದಲೂ ನಾಯಿಗಳ ಸಾಕಾಣಿಕೆ, ಅವುಗಳಿಗೆ ಪ್ರೀತಿ ತೋರಿಸುವುದೆಂದರೆ ಆಸಕ್ತಿ ವಿಷಯ ಎನ್ನುತ್ತಾರೆ.
ತರಬೇತಿ ನೀಡುತ್ತಿರುವ ಪ್ರಮೋದ್
ಚಿತ್ರದಲ್ಲಿ ನಾಯಿ ತರಬೇತಿಗೆ ಬಂಡವಾಳ ಹೂಡುವುದು ಅನಿವಾರ್ಯವಾಗಿದೆ ಎಂದು ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳುತ್ತಾರೆ. ಚಿತ್ರದಲ್ಲಿ ರಕ್ಷಿತ್ ಮತ್ತು ಚಾರ್ಲಿ ನಡುವಿನ ಬಾಂಧವ್ಯ ಗಟ್ಟಿಯಾದದ್ದು. ಒಂದು ವರ್ಷದ ಚಾರ್ಲಿ ಚಿತ್ರದಲ್ಲಿ ಒಂದೇ ಪಾತ್ರ ನಿಭಾಯಿಸಬೇಕಾಗುತ್ತದೆ. ಹೀಗಾಗಿ ತರಬೇತಿ ಇಲ್ಲದೆ ಬಳಸಿಕೊಳ್ಳಲು ಸಾಧ್ಯವಿಲ್ಲ. ನಮಗೆ ಪ್ರಮೋದ್ ಅವರಂತಹ ತರಬೇತುದಾರರು ಸಿಕ್ಕಿದ್ದು ಅದೃಷ್ಟ ಎನ್ನುತ್ತಾರೆ.