ಶ್ರೀರೆಡ್ಡಿ, ಪವನ್ ಕಲ್ಯಾಣ್ 
ಸಿನಿಮಾ ಸುದ್ದಿ

ಪವನ್‌ ಕಲ್ಯಾಣ್ ಅವರನ್ನು ನಿಂದಿಸಿದ ಶ್ರೀರೆಡ್ಡಿ; ಅಭಿಮಾನಿಗಳ ಟ್ರೋಲ್ ಗೆ ಗುರಿಯಾದ ನಟಿ

ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಇದಕ್ಕೆ ಪವನ್ ಅಭಿಮಾನಿಗಳು ಶ್ರೀರೆಡ್ಡಿಯನ್ನು ಟ್ರೋಲ್ ಮಾಡುತ್ತಿದ್ದಾರೆ...

ಟಾಲಿವುಡ್ ನಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ದನಿ ಎತ್ತಿರುವ ನಟಿ ಶ್ರೀರೆಡ್ಡಿ ಇತ್ತೀಚೆಗಷ್ಟೇ ಫಿಲ್ಮಂ ಚೇಬರ್ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಇದೀ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಇದಕ್ಕೆ ಪವನ್ ಅಭಿಮಾನಿಗಳು ಶ್ರೀರೆಡ್ಡಿಯನ್ನು ಟ್ರೋಲ್ ಮಾಡುತ್ತಿದ್ದಾರೆ. 
ಈ ವಿಷಯದಲ್ಲಿ ತಮ್ಮ ನೆರವಿಗೆ ಪವನ್ ಕಲ್ಯಾಣ್ ಅವರು ಬರಬೇಕು ಎಂದು ಶ್ರೀರೆಡ್ಡಿ ಕೇಳಿಕೊಂಡಿದ್ದರು. ಆದರೆ ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿದ ಪವನ್ ಕಲ್ಯಾಣ್ ಮೌನಕ್ಕೆ ಶರಣಾಗಿದ್ದರು. ಅಲ್ಲದೆ ತಮಗೆ ಅನ್ಯಾಯವಾಗಿದ್ದರೆ ಪೊಲೀಸ್ ಠಾಣೆಗೆ ಹೋಗಬೇಕು ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಬಂದರೆ ಪ್ರಯೋಜನವಿಲ್ಲ ಎಂದು ಹೇಳಿದ್ದರು. 
ಪವನ್ ಕಲ್ಯಾಣ್ ಅವರ ಈ ಹೇಳಿಕೆಯಿಂದ ಕೆರಳಿದ ಶ್ರೀರೆಡ್ಡಿ ಪವನ್ ಕಲ್ಯಾಣ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಅಲ್ಲದೆ ಅವರ ಮಧ್ಯದ ಬೆರಳು ತೋರಿಸಿ ಪವನ್ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದರು. 
ಅಲ್ಲದೆ ಪವನ್ ರನ್ನು ಅಣ್ಣಾ ಅಂತ ಕರೆದಿದ್ದಕ್ಕೆ ನನ್ನ ಚಪ್ಪಲಿ ತಗೊಂಡು ನಾನೇ ಹೊಡ್ಕೋಬೇಕು ಎಂದು ಹೇಳುತ್ತಾ ಶ್ರೀರೆಡ್ಡಿ ಸ್ವತಃ ತಮ್ಮ ಕಾಲಲ್ಲಿದ್ದ ಚಪ್ಪಲಿಯನ್ನು ತೆಗೆದುಕೊಂಡು ಕೆನ್ನೆಗೆ ಹೊಡೆದುಕೊಂಡರು. ಮೂರು ಜನ ಹೆಣ್ಣುಮಕ್ಕಳನ್ನು ಮದುವೆಯಾಗಿ ಮೋಸ ಮಾಡಿರುವ ಅವನಿಗೆ ಮಹಿಳೆಯರ ಮೇಲೆ ಒಂಚೂರು ಕರುಣೆ ಇಲ್ಲ. ಪವನ್ ರಿಂದಲೇ ಮಹಿಳಾ ಜಾತಿಗೆ ಅವಮಾನ ಎಂದು ಹೇಳಿದ್ದರು. 
ಶ್ರೀರೆಡ್ಡಿಯ ಈ ವರ್ತನೆ ವಿರುದ್ಧ ಪವನ್ ಕಲ್ಯಾಣ್ ಅಭಿಮಾನಿಗಳನ್ನು ಕೆರಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶ್ರೀರೆಡ್ಡಿ ಕುರಿಂತತೆ ಕಟು ಟೀಕೆಗಳನ್ನು ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT