ಸಿನಿಮಾ ಸುದ್ದಿ

ಕಾಗೆ ಬಂಗಾರ ಕೈಬಿಟ್ಟ ಸೂರಿ: ಡಿಮಾನಿಟೈಸೇಶನ್ ಕಾರಣ ಎಂದ ನಿರ್ದೇಶಕ

Shilpa D
ಬೆಂಗಳೂರು: ಸೂರಿ ನಿರ್ದೇಶಿಸಿ ಶಿವರಾಜ್ ಕುಮಾರ್ ನಟಿಸಿದ್ದ ಟಗರು ಸಿನಿಮಾ ಬಿಡುಗಡೆಯಾಗಿ ಅದ್ಬುತ ಯಶಸ್ಸು ಪಡೆಯುತ್ತಿದೆ, ಹೀಗಾಗಿ ಸೂರಿ ಮುಂದಿನ  ಪ್ರಾಜೆಕ್ಟ್ ಗಾಗಿ ಕಾಯುತ್ತಿದ್ದಾರೆ.
ಕೆಂಡಸಂಪಿಗೆ ಸಿನಿಮಾ ಮುಂದುವರಿದ ಭಾಗವಾದ ಕಾಗೆ ಬಂಗಾರ ಜೊತೆ ಸೂರಿ ಬರುತ್ತಾರೆ ಎಂದು ಅವರ ಅಭಿಮಾನಿಗಳು ನಿರೀಕ್ಷಿಸಿದ್ದರು, ಟಗರು ನಂತರ ಕಾಗೆ ಬಂಗಾರ ಪ್ರಾಜೆಕ್ಟ್ ಕೈಗೊಳ್ಳಲು ಸೂರಿ ಕೂಡ ನಿರ್ಧರಿಸಿದ್ದರು. ಆದರೆ ತುಂಬಾ ಯೋಚಿಸಿದ ನಂತರ ಪ್ರಾಜೆಕ್ಟ್ ಕೈ ಬಿಡಲು ನಿರ್ಧರಿಸಿರುವ ನಿರ್ದೇಶಕ ಸೂರಿ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. ಅನಿವಾರ್ಯ. ಕಾರಣಾಂತರಗಳಿಂದ ನಾನು ಕಾಗೆ ಬಂಗಾರ ಪ್ರಾಜೆಕ್ಟ್ ಮಾಡುತ್ತಿಲ್ಲ ಇದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.
ಆದರೆ ಸೂರಿ ಎರಡು ಹೊಸ ಸಿನಿಮಾಗಳ ನಿರ್ದೇಶನ ಬರುತ್ತಿದ್ದಾರೆ, ನಿರ್ಮಾಪಕ ಗೋವಿಂದ್ ಅವರ ಜೊತೆ ಮುಂದಿನ ಸಿನಿಮಾ ಮಾಡುತ್ತಿದ್ದು, ಅಜಯ್ ಪಿಕ್ಚರ್ಸ್ ಮತ್ತು ಪರಿಮಳಾ ಫ್ಯಾಕ್ಟರಿ ಸಹಯೋಗದಲ್ಲಿ ಸಿನಿಮಾ ನಿರ್ಮಾಣ ವಾಗುತ್ತಿದೆ ಎಂದು ಹೇಳಿದ್ದಾರೆ.
ಡಿವೈಎಸ್ ಪಿ ಎಸ್ ಕೆ ಉಮೇಶ್ ಅವರು ಬರೆದಿರುವ ಕತೆಗೆ ಸೂರಿ ನಿರ್ದೇಶನ ಮಾಜುತ್ತಿದ್ದಾರೆ, ಎರಡು ಪ್ರಾಜೆಕ್ಟ್ ಗಳ ಮೇಲೆ ಈಗಾಗಲೇ ಸೂರಿ ಕೆಲಸ ಆರಂಭಿಸಿದ್ದಾರೆ, ಮುಂದಿನ ಆರು ತಿಂಗಳಲ್ಲಿ ಎರಡು ಪ್ರಾಜೆಕ್ಟ್ ಶೂಟಿಂಗ್ ಆರಂಭವಾಗಲಿದೆ. ತಮ್ಮ ಮುಂದಿನ 2 ಸಿನಿಮಾಗಳಲ್ಲೂ ಟಗರು ವಿನಲ್ಲಿ ಡಾಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಧನಂಜಯ್ ಅವರರು ನಟಿಸುತ್ತಿದ್ದಾರೆ, 
ಕಾಗೆ ಬಂಗಾರ ಪ್ರಾಜೆಕ್ಟ್ ಕೈ ಬಿಡಲು ಡಿ ಮಾನಿಟೈಸೇಶನ್ ಕಾರಣ ಎಂದು ಸೂರಿ ಹೇಳಿದ್ದಾರೆ. 2015 ರಲ್ಲಿ ತೆರೆ ಕಂಡ ಕೆಂಡಸಂಪಿಗೆ 2ನೇ ಭಾಗವಾಗಿ ಕಾಗೆ ಬಂಗಾರ ತಯಾರಾಬೇಕಿತ್ತು,  ಚಿತ್ರದ ಕೊನೆಯಲ್ಲಿ  40 ಕೋಟಿ ರು ಹಣವನ್ನು ಬಾವಿಗೆ ಸುರಿಯಲಾಗುತ್ತದೆ. ಆದರೆ ಆ ವಿಷಯ ಈಗ ಅಪ್ರಸ್ತುತ ಎನ್ನಿಸುತ್ತದೆ. ದುರಾದೃಷ್ಠವಶಾತ್ ವೀಕ್ಷಕರ ಗಮನವನ್ನು ಪುನಾರವರ್ತಿಸಲು ನನ್ನಿಂದ ಸಾಧ್ಯವಿಲ್ಲ, ಹಾಗಾಗಿ ನಾನು ಈ ಪ್ರಾಜೆಕ್ಟ್ ಕೈಬಿಟ್ಟಿದ್ದಾಗಿ ಹೇಳಿದ್ದಾರೆ.
SCROLL FOR NEXT