ಧ್ವನಿ ರಾಜೇಶ್ 
ಸಿನಿಮಾ ಸುದ್ದಿ

'ಬಿಯಾಂಡ್ ದಿ ಕ್ಲೌಡ್ಸ್' ಜೊತೆ ಸ್ಯಾಂಡಲ್ ವುಡ್ ನಂಟು; ಅಂತರಾಷ್ಟ್ರೀಯ ಚಿತ್ರದಲ್ಲಿ ಕನ್ನಡದ ಬಾಲನಟಿ

ಬಾಲಿವುಡ್ ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದ ’ಬಿಯಾಂಡ್ ದಿ ಕ್ಲೌಡ್’ ಕನ್ನಡದ ನಂಟು ಹೊಂದಿದೆ.

ಬೆಂಗಳೂರು: ಬಾಲಿವುಡ್ ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದ ’ಬಿಯಾಂಡ್ ದಿ ಕ್ಲೌಡ್’ ಕನ್ನಡದ ನಂಟು ಹೊಂದಿದೆ. ಇರಾನ್ ಮೂಲದ ಮಜೀದ್ ಮಜೀದಿ ನಿರ್ದೇಶನದ ಈ ಚಿತ್ರದಲ್ಲಿ ಕನ್ನಡದ ಬಾಲ ನಟಿ ಧ್ವನಿ ರಾಜೇಶ್ ಅಭಿನಯಿಸಿದ್ದಾರೆ. 
ಖ್ಯಾತ ನಟ ರಾಜೇಶ್ ಅನಟರಂಗ ಅವರ ಮಗಳಾದ ಧ್ವನಿಈ ಚಿತ್ರಕ್ಕೆ ಆಯ್ಕೆಗೊಂಡಿದ್ದು ಸಹ ಕೇವಲ ಆಕಸ್ಮಿಕ. 11 ವರ್ಷದ, 7ನೇ ತರಗತಿ ವಿದ್ಯಾರ್ಥಿನಿ  ಧ್ವನಿ ಚಿತ್ರೀಕರಣದಲ್ಲಿ ತೊಡಗಿದ್ದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
"ನನಗೆ ನಟನೆಯ ಬಗ್ಗೆ ಯಾವ ಆಸಕ್ತಿಯೂ ಇರಲಿಲ್ಲ, ನಾನು ದೊಡ್ಡವಳಾದ ಮೇಲೆ ಏನಾಗಬೇಕು ಎಂದು ಯಾರಾದರೂ ಕೇಳಿದರೆ ಫ್ಯಾಷನ್ ಡಿಸೈನರ್ ಎಂದು ಹೇಳುತ್ತಿದ್ದೆ. ನನ್ನ ತಂದೆ ರಾಜೇಶ್ ಒಮ್ಮೆ ನನ್ನ ಬಳಿ ಬಂದು ನೀನು ಸಿನಿಮಾದಲ್ಲಿ ನಟಿಸುತ್ತಿಯೆ ಎಂದು ಕೇಳಲು ನಾನು ತಾವ ಚಿತ್ರ, ಕಥೆ ಹೇಗಿರಲಿದೆ ಎನ್ನುವುದನ್ನೂ ಕೇಳದೆ ಒಮ್ಮೆಗೇ ಒಪ್ಪಿಕೊಂಡಿದ್ದೆ" ಧ್ವನಿ ಹೇಳಿದರು.
ಕಳೆದ ವಾರ ಚಿತ್ರವು ದೇಶವ್ಯಾಪಿ ಬಿಡುಗಡೆಯಾಗಿದ್ದು ಬಾಲ ನಟಿ ಧ್ವನಿ ಮಲ್ಟಿಪ್ಲೆಕ್ಸ್ ನಲ್ಲಿ ಚಿತ್ರ ವೀಕ್ಷಿಸಿದ್ದಾರೆ."ಚಿತ್ರದಲ್ಲಿನ ನನ್ನ ಅಭಿನಯ ನನಗೆ ಖುಷಿ ಕೊಟ್ಟಿದೆ. ಚಿತ್ರ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಾಣಬೇಕೆಂದು ನನ್ನ ಬಯಕೆ"
"ಇದು ನನ್ನ ಮೊದಲ ಅನುಭವ, ಮೊದ ಮೊದಲು ನನಗೆ ಅಭಿನಯ ಕಠಿಣವಾಗಿ ತೋರಿತ್ತು. ಆದರೆ ಚಿತ್ರೀಕರಣ ಸಾಗಿದಂತೆಲ್ಲಾ ನಟನೆ ನನಗೆ ಸಹಜವಾಗಿ ತೋರಿಬಂದಿದೆ" ಅವರು ಹೇಳಿದ್ದಾರೆ.
ಚಿತ್ರದಲ್ಲಿ ಧ್ವನಿ ತಾಯಿ ಇಲ್ಲದ ಸ್ಲಂ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದಾಳೆ. ಚಿತ್ರದ ಬಹುಭಾಗವನ್ನು ಆವರಿಸಿರುವ ಇವರು ಇಶಾನ್ ಖತಾರ್ ಹಾಗೂ ಶಾರದಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ."ಇಡೀ ಚಿತ್ರತಂಡ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತಿತ್ತು. ನನ್ನ ಮೊದಲ ಚಿತ್ರದ ಬಗ್ಗೆ ನನಗೆ ಸಾಕಷ್ಟು ನಿರೀಕ್ಷೆ ಇತ್ತು. ಚಿತ್ರ ನೋಡಿದ ಬಳಿಕ ನಾನು ಸಂತಸಗೊಂಡಿದ್ದೇನೆ" ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಕ್ಕಳ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಧ್ವನಿ ನಿರ್ಧರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT