ದಂಡುಪಾಳ್ಯ ಗ್ಯಾಂಗ್ ಲೀಡರ್ ಆದ ಸುಮನ್ ರಂಗನಾಥನ್ 
ಸಿನಿಮಾ ಸುದ್ದಿ

ದಂಡುಪಾಳ್ಯ ಗ್ಯಾಂಗ್ ಲೀಡರ್ 'ಸುಂದ್ರಿ' ಪಾತ್ರದಲ್ಲಿ ಸುಮನ್ ರಂಗನಾಥನ್

ಮೈನಾ, ನೀರ್ ದೋಸೆ ಸೇರಿ ಅನೇಕ ಚಿತ್ರಗಳಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪ್ರಸಿದ್ದ ನಟಿ ಸುಮನ್ ರಂಗನಾಥನ್ ಅವರಿಗೆ ತಮ್ಮ ಚಿತ್ರದಲ್ಲಿ....

ಬೆಂಗಳೂರು: ಮೈನಾ, ನೀರ್ ದೋಸೆ ಸೇರಿ ಅನೇಕ ಚಿತ್ರಗಳಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪ್ರಸಿದ್ದ ನಟಿ ಸುಮನ್ ರಂಗನಾಥನ್ ಅವರಿಗೆ ತಮ್ಮ ಚಿತ್ರದಲ್ಲಿ ಸಹ ಗಟ್ಟಿ ನೆಲೆಯ ಪಾತ್ರಗಳನ್ನು ನೀಡಲಾಗುತ್ತದೆ ಎಂದು ದಂಡುಪಾಳ್ಯ -4 ಚಿತ್ರದ ನಿರ್ಮಾಪಕರು ಹೇಳಿದ್ದಾರೆ.
ನಟಿ ಸುಮನ್ ರಂಗನಾಥನ್ ಇದಾಗಲೇ ’ಕವಲು ದಾರಿ’, ’ಡಬಲ್ ಇಂಜಿನ್’ ಎನ್ನುವ ಎರಡು ಕನ್ನಡ ಚಿತ್ರಗಲಲ್ಲಿ ನಟಿಸಿದ್ದು ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಅಲ್ಲದೆ ನಟಿ, ವಿಜಯ್ ಪ್ರಸಾದ್ ಅವರ ನಿರ್ದೇಶನದ ’ಲೇಡೀಸ್ ಟೈಲರ್’ ಚಿತ್ರದಲ್ಲಿ ಅಭಿನಯಿಸಲು ಎದುರು ನೋಡುತ್ತಿದ್ದು ಪ್ರಸ್ತುತ ದಂಡುಪಾಳ್ಯ -4 ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ವೆಂಕಟ್ ನಿರ್ಮಾಣದ ಈ ಚಿತ್ರಕ್ಕೂ ನಿಜ ದಂಡುಪಾಳ್ಯ ಗ್ಯಾಂಗ್ ನ ಕಥೆಗೂ ಸಂಬಂಧವಿಲ್ಲ. ಚಿತ್ರತಂಡವು ಹೊಸ ಬಗೆಯ ಕಥೆಯನ್ನು ನೀಡಲು ಪ್ರಯತ್ನ ನಡೆಸಿದೆ. ದಂಡುಪಾಳ್ಯ ಗ್ಯಾಂಗ್ ತಾವು ಜೈಲಿನಿಂದ ತಪ್ಪಿಸಿಕೊಳ್ಳಲು ಬಳಸುವ ವಿವಿಧ ತಂತ್ರಗಳ ಸುತ್ತ ಕಥೆ ಹೆಣೆಯಲಾಗಿದೆ.
ದಂಡುಪಾಳ್ಯ ಗ್ಯಾಂಗ್ ನ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಸುಮನ್ ಸೆಟ್ ನಲ್ಲಿದ್ದಾಗಿನ ಚಿತ್ರಗಳು ಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ.
ಮೂವತ್ತು ಭಾಗ ಚಿತ್ರೀಕರಣ ಪೂರ್ಣಗೊಂಡಿರುವ ದಂಡುಪಾಳ್ಯ ಸರಣಿಯ ಈ ಚಿತ್ರದಲ್ಲಿ ಸುಮನ್ ಅವರು ಇದೇ ಮೊದಲ ಬಾರಿಗೆ ದರೋಡೆಕೋರರ ಗ್ಯಾಂಗ್ ಒಂದರ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. "ಏಳು ಜನರ ಗ್ಯಾಂಗ್ ಲೀಡರ್ ಆಗಿ ನಾನು ಕಾಣಿಸಿಕೊಳ್ಳುತ್ತಿದೇನೆ. ಇದು ನನಗೆ ಸಂತಸ ತಂದಿದೆ"  ನಟಿ ಹೇಳಿದರು.
ಕನಕಪುರದ ಹೊರವಲಯದಲ್ಲಿ ಚಿತ್ರೀಕರಣ ಕಾರ್ಯ ನಡೆಯುತ್ತಿದ್ದು ಚಿತ್ರದ ಮುಖ್ಯ ಭಾಗದಲ್ಲಿ ಚಿತ್ರದ ಪ್ರತಿಯೊಬ್ಬರೂ ತಮ್ಮ ಪಾತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.  "ನಟರು ಮತ್ತು ತಂತ್ರಜ್ಞರು ದಿನ-ರಾತ್ರಿ ಕೆಲಸ ಮಾಡುತ್ತಿದ್ದಾರೆ." ನಟಿ ಹೇಳಿದ್ದಾರೆ.
ಚಿತ್ರವು ನೈಜ ಕಥೆಯನ್ನು ಆಧರಿಸಿದೆ ಎನ್ನುವ ಸುಮನ್ "ನಲವತ್ತು ಮಂದಿಯ ದಂಡುಪಾಳ್ಯ ಗ್ಯಾಂಗ್ ನ ಪ್ರಮುಖ ಎಂಟು ಮಂದಿ ಜೈಲು ಪಾಲಾಗಿರುತ್ತಾರೆ. ಚಿತ್ರವು ಗ್ಯಾಂಗ್ ನ ಏಳು ಜನರ ಮೇಲೆ ಕೇಂದ್ರೀಕೃತವಾಗಿದೆ.
"ಇದೊಂದು ಸವಾಲೊಡ್ಡುವ ಪಾತ್ರವಾಗಿದೆ, ಜತೆಗೆ ಆಸಕ್ತಿದಾಯಕವಾಗಿದೆ.ನಾನು ಈ ಚಿತ್ರಕ್ಕಾಗಿ 35 ದಿನಗಳ ಸುದೀರ್ಘ ಕಾಲ ತೊಡಗಿಸಿಕೊಂಡಿದ್ದೇನೆ." ನಟಿ ನುಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT