ಬೆಂಗಳೂರು: ನಟ ಪ್ರಜ್ವಲ್ ದೇವರಾಜ್ ನಿದ್ರಿಸುತ್ತಿದ್ದಾರೆ! ಇದೇನೆಂದು ಅಚ್ಚರಿಯಾದರೆ ಇಲ್ಲಿ ಕೇಳಿ, ನಟ ತನ್ನ ಮುಂದಿನ ಚಿತ್ರದಲ್ಲಿ ನಿದ್ರಾರೋಗದಿಂದ ಬಳಲುವ ಪಾತ್ರಧಾರಿಯಾಗಿ ಅಭಿನಯಿಸುತ್ತಿದ್ದಾರೆ!
ನಿರ್ದೇಶಕ ಜದೇಶ್ ಕುಮಾರ್ ನಿರ್ದೇಶನ ದ ಈ ಚಿತ್ರದಲ್ಲಿ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಕಥೆಯಾಧಾರಿತ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಪ್ರಸ್ತುತ ಇನ್ಸ್ ಪೆಕ್ಟರ್ ವಿಕ್ರಮ್, ಲೈಫ್ ಜತೆ ಒಂದ್ ಸೆಲ್ಫ್ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಪ್ರಜ್ವಲ್ ಅರ್ಜುನ್ ಗೌಡ ದಲ್ಲಿ ಸಹ ತಮ್ಮ ಪ್ರತಿಭೆಯನ್ನು ಪ್ರಜ್ವಲ್ ಧಾರೆ ಎರೆದಿದ್ದಾರೆ..
ರಾಜಹಂಸದ ಬಳಿಕ ನಿರ್ದೇಶಕ ಜದೇಶ್ ಅವರಿಗೆ ಇದು ಎರಡನೇ ಚಿತ್ರವಾದರೆ ನಿರ್ಮಾಪಕ ಗುರು ದೇಶಪಾಂಡೆ ಪಾಲಿಗೆ ಇದು ಮೊಟ್ಟ ಮೊದಲ ಪ್ರಯತ್ಬವಾಗಿದೆ.
ಜದೇಶ್ ಅವರು ವಿಭಿನ್ನ ಕತೆಯೊಂದಿಗೆ ಬಂದಿದ್ದಾರೆ. ಕಥೆ ಹೇಳಲು ಬಂದಾಗಲೇ ಅವರಲ್ಲಿ ಆತ್ಮವಿಶ್ವಾಸವಿತ್ತು. ಇದು ಅಪರೂಪವಾಗಿದ್ದು ಇದುವೇ ನನ್ನ ಗಮನ ಸೇಳೆದಿತ್ತು. ಚಿತ್ರದ ನಾಯಕನಿಗೆ ನಿದ್ರಿಸುವ ಖಾಯಿಲೆ ಇರುತ್ತದೆ, ಎಲ್ಲರೂ ಎಂಟು ಗಂಟ್ ಮಲಗಿದರೆ ಈ ನಾಯಕ ನಟ ದಿನದಲ್ಲಿ 14 ಗಂಟೆಗಳ ಕಾಲ ನಿದ್ರೆ ಮಾಡುತ್ತಾನೆ ಇದನ್ನು ಆತನಿಂದ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ತನ್ನ ಈ ಸಮಸ್ಯೆಯನ್ನು ದೂರವಾಗಿಸಲು ನಡೆಸುವ ಪ್ರಯತ್ನ, ಸಮಸ್ಯೆಯನ್ನು ಗುಟ್ಟಾಗಿರಿಸಿಕೊಂಡೇ ಸಾಧಿಸುವ ಪ್ರೀತಿಯ ಕಥೆ ಈ ಚಿತ್ರದಲ್ಲಿದೆ" ನಟ ಪ್ರಜ್ವಲ್ ನುಡಿದರು.
"ಇದು ನನ್ನ ಪಾಲಿಗೂ ಹೊಸ ಪ್ರಯೋಗವಾಗಿದ್ದು ಇದಕ್ಕಾಗಿ ನಾನು ಸಹ ಸಾಕಷ್ಟು ಕುತೂಹಲ ಹೊಂದಿದ್ದೇನೆ
ರಾಮು ಪ್ರೊಡಕ್ಶ್ಃಅನ್ ನಿರ್ಮಾಣದ ಲಕ್ಕಿ ಶಂಕರ್ ನಿರ್ದೇಶನದ ಅರ್ಜುನ್ ಗೌಡ ಕುರಿತಂತೆ ಸಹ ನಟ ಮಾತನಾಡಿದ್ದಾರೆ. ನನ್ನನ್ನು ವಿಭಿನ್ನ ರಿತಿಯಲ್ಲಿ ತೆರೆ ಮೇಲೆ ತೋರಿಸುವುಅಕ್ಕೆ ನಿರ್ದೇಶಕರಿಗೆ ನಾನು ಅಭಿನಂದಿಸುತ್ತೇನ್. ಇನ್ಸ್ ಪೆಕ್ಟರ್ ವಿಕ್ರಮ್ ಸಹ ಚೆನ್ನಾಗಿ ಮೂಡಿ ಬರುತ್ತಿದೆಈ ಚಿತ್ರದಲ್ಲಿ ಪ್ಯಾಂಟಮ್ ಕ್ಯಮಾರ ಬಳಸಿ ಸಾವಿರ ಫ್ರೇಮ್ ಗಳಲ್ಲಿ ಫೈಟ್ ದೃಶ್ಯಗಳನ್ನು ತೋರಿಸಲಾಗಿದೆ. ಈ ಎರಡೂ ಚಿತ್ರಗಳು ನನ್ನ ಪಾಲಿನ ಸಾಕಷ್ಟು ಉತ್ತಮ ಚಿತ್ರಗಳಾಗಲಿದೆ. ಇದರ ಬಿಡುಗಡೆಗಾಗಿ ನಾನು ಕಾಯುವವನಿದ್ದೇನೆ ಎಂದು ನಟ ಪ್ರಜ್ವಲ್ ಹೇಳಿದ್ದಾರೆ