ಸಿನಿಮಾ ಸುದ್ದಿ

'ಅಯೋಗ್ಯ' ಚಿತ್ರದಲ್ಲಿ ಮಂಡ್ಯ ಶೈಲಿಯ ಹಾಡಿಗೆ ಸತೀಶ್ ಹೆಜ್ಜೆ

Sumana Upadhyaya

ಮಹೇಶ್ ಕುಮಾರ್ ಚೊಚ್ಚಲ ನಿರ್ದೇಶನದ ಅಯೋಗ್ಯ ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದ್ದು ಸತೀಶ್ ನೀನಾಸಂ ಅವರ ಪರಿಚಯದ ಹಾಡಿನ ಚಿತ್ರೀಕರಣವೊಂದು ಬಾಕಿ ಉಳಿದಿದೆ.

ಹಾಡಿನ ಚಿತ್ರೀಕರಣಕ್ಕೆ ಸುಮಾರು 35 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಮಂಡ್ಯ ಶೈಲಿಯಲ್ಲಿ ಹಾಡಿನ ಶೂಟಿಂಗ್ ಮಾಡಲಾಗುತ್ತಿದೆ. ಮಂಡ್ಯದ ಹಳ್ಳಿಗೆಲ್ಲ ಇವನೇ ಒಳ್ಳೆ ಲೀಡರ್ ಎಂಬ ಹಾಡಿಗೆ ಸತೀಶ್ 90 ಮಂದಿ ನೃತ್ಯಗಾರರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.

ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು, ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಮುರಳಿ ಮಾಸ್ಟರ್ ಕೊರಿಯೊಗ್ರಫಿ ಒದಗಿಸಿದ್ದಾರೆ. ಟಿಆರ್ ಚಂದ್ರಶೇಖರ್ ನಿರ್ಮಾಣದ ಅಯೋಗ್ಯದಲ್ಲಿ ಸತೀಶ್ ಗೆ ರಚಿತಾ ರಾಮ್ ಜೋಡಿಯಾಗಿ ಅಭಿನಯಿಸಿದ್ದಾರೆ.

SCROLL FOR NEXT