ಧ್ವಜ ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ಚುನಾವಣೆಯ ಹೊಸ್ತಿಲಲ್ಲಿ ನಾಳೆ 3 ರಾಜಕೀಯ ವಿಷಯ ಆಧಾರಿತ ಚಿತ್ರಗಳು ತೆರೆಗೆ

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು ಚುನಾವಣೆಯ ಬಿಸಿ ಕನ್ನಡ ...

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು ಚುನಾವಣೆಯ ಬಿಸಿ ಕನ್ನಡ ಸಿನಿಮಾವರೆಗೆ ಹಬ್ಬಿದೆ ಎಂದು ಹೇಳಬಹುದು. ನಾಳೆ ಶುಕ್ರವಾರ ರಾಜಕೀಯಕ್ಕೆ ಸಂಬಂಧಪಟ್ಟ ಮೂರು ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆಯಾಗುತ್ತಿವೆ.

ನಾಳೆ ಅಂದರೆ ಏಪ್ರಿಲ್ 27ರಂದು ನಂಜೇಗೌಡ ನಿರ್ದೇಶನದ ಹೆಬ್ಬೆಟ್ಟು ರಾಮಕ್ಕ, ಅಶೋಕ್ ಕಶ್ಯಪ್ ನಿರ್ದೇಶನದ ಧ್ವಜ ಮತ್ತು ಟಿ.ಎಸ್.ನಾಗಾಭರಣ ನಿರ್ದೇಶನದ ಕಾನೂರಾಯಣ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇವೆಲ್ಲವೂ ರಾಜಕೀಯಕ್ಕೆ ಸಂಬಂಧಪಟ್ಟ ಚಿತ್ರಗಳು.

ಇದು ಕೇವಲ ಕಾಕತಾಳೀಯವಷ್ಟೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಚುನಾವಣೆ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಬಿಡುಗಡೆಯಾಗುತ್ತಿದೆ ಎನ್ನುತ್ತಾರೆ. ತಾರಾ ಅನುರಾಧ ಅಭಿನಯದ ಹೆಬ್ಬೆಟ್ಟು ರಾಮಕ್ಕ ಚಿತ್ರಕ್ಕೆ ಕಳೆದ ಸಾಲಿನ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಸಿಕ್ಕಿದೆ. ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಬಗ್ಗೆ ಇರುವ ಚಿತ್ರವಿದು. ಕಾನೂರಾಯಣ ಹಳ್ಳಿ ರಾಜಕೀಯದ ಬಗ್ಗೆ ಕಥೆ ಒಳಗೊಂಡಿದ್ದರೆ, ಧ್ವಜ ರಾಜಕೀಯ ಕಾರ್ಯಕರ್ತರೊಬ್ಬರ ಕೊಲೆಗೆ ಸಂಬಂಧಪಟ್ಟದ್ದಾಗಿದೆ.

ಇದಕ್ಕೂ ಮುಂಚೆ ಕನ್ನಡದಲ್ಲಿ ಮತದಾನ, ಬರ, ಅಂತ, ಗೋಲಿಬಾರ್ ಮತ್ತು ಅವಸ್ಥೆ ಮೊದಲಾದ ರಾಜಕೀಯಕ್ಕೆ ಸಂಬಂಧಪಟ್ಟ ಚಿತ್ರಗಳು ಬಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!

ರಾಮ ಮಂದಿರ ದೇಣಿಗೆ ಕಳ್ಳತನ: ಚಂಪತ್ ರಾಯ್, ಅನಿಲ್ ಮಿಶ್ರಾಗೆ ಉತ್ತರಪ್ರದೇಶ SIT ಕ್ಲೀನ್ ಚಿಟ್!

PM CARES ನಿಧಿ ವಿವರ ಬಹಿರಂಗ; ದೇಣಿಗೆಗಳಲ್ಲಿ ತೀವ್ರ ಕುಸಿತ ವಿದೇಶಿ ದೇಣಿಗಗಳ ಬಗ್ಗೆ ಕೇಂದ್ರ ಹೇಳಿದ್ದೇನು?

India vs Sri Lanka: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್; ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್!

ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶ ರದ್ದು: KPSC ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಮರುನೇಮಕಕ್ಕೆ ಹೈಕೋರ್ಟ್ ಸೂಚನೆ