ಸಿನಿಮಾ ಸುದ್ದಿ

ರಾಜಕೀಯದಲ್ಲಿ ಪ್ರೀತಿ ಇರುವುದಿಲ್ಲ: ಅಶೋಕ್ ಕಶ್ಯಪ್

Sumana Upadhyaya

ರಾಜ್ಯ ವಿಧಾನಸಭೆ ಚುನಾವಣೆಯ ದಿನ ಸಮೀಪಿಸುತ್ತಿದ್ದಂತೆ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಛಾಯಾಗ್ರಾಹಕ ಮತ್ತು ನಿರ್ದೇಶಕ ಅಶೋಕ್ ಕಶ್ಯಪ್ ಕೂಡ ಚುನಾವಣೆಯ ಈ ಹೊಸ್ತಿಲಿನಲ್ಲಿ ಧ್ವಜ ಎಂಬ ರಾಜಕೀಯ ಥ್ರಿಲ್ಲರ್ ಚಿತ್ರದ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಈ ಸಮಯದಲ್ಲಿ ಬಿಡುಗಡೆಯಾಗುವುದಕ್ಕೆ ಚಿತ್ರದಲ್ಲಿನ ಕಲಾವಿದರು ಕಾರಣ ಅವರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಇದನ್ನು ಉದ್ದೇಶಪೂರ್ವಕ ಎಂದು ಕರೆದರೂ ಅಡ್ಡಿಯಿಲ್ಲ. ಆದರೆ ಈ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿರುವುದು ಒಂದು ಒಳ್ಳೆಯ ಉದ್ದೇಶದಿಂದ ಎನ್ನುತ್ತಾರೆ ಅಶೋಕ್ ಕಶ್ಯಪ್.

ಧ್ವಜ ಚಿತ್ರ ತಮಿಳಿನ ಕೋಡಿ ಚಿತ್ರದ ರಿಮೇಕ್ ಆಗಿದೆ. ಅಧಿಕಾರ ಮತ್ತು ಸಾಮಾನ್ಯ ಮನುಷ್ಯನ ನಡುವಿಗೆ ಸಂಬಂಧಿಸಿದ ಕಥೆ ಧ್ವಜವಾಗಿದೆ. ಚುನಾವಣೆ ಸಂದರ್ಭದಲ್ಲಿ ಸಾಮಾನ್ಯ ಮನುಷ್ಯನ ಸ್ಥಿತಿಗತಿಯನ್ನು ಈ ಚಿತ್ರ ಒಳಗೊಂಡಿದೆ ಎಂದರು ಅಶೋಕ್ ಕಶ್ಯಪ್.

ಪ್ರಿಯಾಮಣಿ ಮತ್ತು ಹೊಸ ಕಲಾವಿದ ರವಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು ಇದೊಂದು ಪ್ರೀತಿ, ಪ್ರೇಮದ ಚಿತ್ರ ಕೂಡ ಆಗಿದೆ. ಇಬ್ಬರು ರಾಜಕೀಯ ನಾಯಕ ನಾಯಕಿ ನಡುವಿನ ಪ್ರೀತಿಯ ಕುರಿತು ಕೂಡ ಕಥೆಯಿದೆ. ಇದರಲ್ಲಿ ರಾಜಕೀಯದಲ್ಲಿ ಪ್ರೀತಿ ಇರುವುದಿಲ್ಲ ಎಂಬ ಸಂದೇಶ ಇದರಲ್ಲಿದೆ.

ಮಹಿಳಾ ರಾಜಕಾರಣಿಯಾಗಿ ಪ್ರಿಯಾಮಣಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎಂದು ಅಶೋಕ್ ಕಶ್ಯಪ್ ಹೇಳುತ್ತಾರೆ. ನಾಯಕ ರವಿ ಸಿನಿಮಾ ಕ್ಷೇತ್ರಕ್ಕೆ ಬರಲು ಉತ್ಸಾಹ ಹೊಂದಿದ್ದರಿಂದ ಈ ಪಾತ್ರಕ್ಕೆ ಅವರೇ ಸೂಕ್ತವೆನಿಸಿತು ಎಂದರು.

ಧ್ವಜ ಚಿತ್ರ ಅಶೋಕ್ ಕಶ್ಯಪ್ ಅವರ ನಾಲ್ಕನೇ ನಿರ್ದೇಶನದ ಚಿತ್ರವಾಗಿದೆ. ಛಾಯಾಗ್ರಾಹಕರಾಗಿ 50 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

SCROLL FOR NEXT