ಪ್ರಮೋದಾ ದೇವಿ ಒಡೆಯರ್ 
ಸಿನಿಮಾ ಸುದ್ದಿ

ಒಡೆಯರ್ ಟೈಟಲ್ ಗೆ ಅಭ್ಯಂತರವಿಲ್ಲ; ಆದರೆ ರಾಜಮನೆತನದ ಬಗ್ಗೆ ಚಿತ್ರಿಸಬಾರದು: ಪ್ರಮೋದಾ ದೇವಿ

ಒಡೆಯರ್ ಚಿತ್ರದ ಟೈಟಲ್ ಗೆ ನಮ್ಮ ಅಭ್ಯಂತರವೇನು ಇಲ್ಲ ಎಂದು ರಾಜಮಾತೆ ಪ್ರಮೋದಾದೇವಿ ಸ್ಪಷ್ಟಪಡಿಸಿದ್ದಾರೆ,...

ಮೈಸೂರು:  ಒಡೆಯರ್ ಚಿತ್ರದ ಟೈಟಲ್ ಗೆ ನಮ್ಮ ಅಭ್ಯಂತರವೇನು ಇಲ್ಲ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ,
ಮೈಸೂರಿನಲ್ಲಿ ಆಯೋಜಿಸಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ 225ನೇ ಜನ್ಮದಿನಾಚರಣೆಯಲ್ಲಿ ಪ್ರಮೋದಾ ದೇವಿ ಪಾಲ್ಗೊಂಡಿದ್ದರು. ಈ ವೇಳೆ ಒಡೆಯರ್ ಟೈಟಲ್ ಬಗ್ಗೆ ಪ್ರತ್ರಿಕ್ರಿಯಿಸಿದ ಅವರು, ಸಿನಿಮಾಗೆ ಒಡೆಯರ್​ ಎಂದು ಹೆಸರು ಇಡಲು ನಮ್ಮ ಅಭ್ಯಂತರವಿಲ್ಲ. ಆದರೆ, ರಾಜ ಮನೆತನದ ಬಗ್ಗೆ ಏನಾದರೂ ಚಿತ್ರಿಸಿದರೆ ಖಂಡಿತ ಆಕ್ಷೇಪ ವ್ಯಕ್ತಪಡಿಸುತ್ತೇವೆ ಎಂದಿದ್ದಾರೆ.
ಒಡೆಯರ್​ ಹೆಸರು ನಮಗೆ ಬಳುವಳಿಯಾಗಿ ಬಂದಿದ್ದರೂ ಅದನ್ನು ತುಂಬ ಜನರು ಇಟ್ಟುಕೊಂಡಿದ್ದಾರೆ. ಹಾಗಾಗಿ ಚಲನಚಿತ್ರಕ್ಕೆ ಆ ಹೆಸರು ಇಡಬಹುದು. ಆದರೆ, ನಮ್ಮ ಮನೆತನಕ್ಕೆ ಸಂಬಂಧಪಟ್ಟಂತೆ ಏನಾದರೂ ಚಿತ್ರಣವಿದ್ದರೆ ಅದನ್ನು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.
ಟೈಟಲ್ ವಿವಾದ ನನ್ನ ಗಮನಕ್ಕೆ ಬಂದ ಮೇಲೆ ನಾನು ಈ ಸಂಬಂಧ ಪ್ರೊಡಕ್ಷನ್ ಹೌಸ್ ಗೆ ಪತ್ರ ಬರೆದಿದ್ದೆ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

IPL 2026: ಹೈದರಾಬಾದ್ ನೀಡಿದ 220 ರನ್ ಟಾರ್ಗೆಟ್ ಬೆನ್ನತ್ತಿ ಗೆದ್ದ ಪಂಜಾಬ್ ಕಿಂಗ್ಸ್!

SCROLL FOR NEXT