ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದ್ದು ಇನ್ನು ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ.
ಇದೊಂದು ಕ್ಯಾಬರೆ ಡ್ಯಾನ್ಸ್ ಆಗಿದ್ದು ಇದರಲ್ಲಿ ಟಾಲಿವುಡ್ ನಟಿ ತಮನ್ನಾ ಭಾಟಿಯಾ ಯಶ್ ಜೊತೆ ಹೆಜ್ಜೆ ಹಾಕಲಿದ್ದಾರೆ. ಈ ಹಾಡಿನಲ್ಲಿ ಯಶ್ ಜೊತೆ ಹೆಜ್ಜೆ ಹಾಕಲು ನಾಲ್ವರು ಜನಪ್ರಿಯ ನಟಿಯರ ಹೆಸರು ಕೇಳಿ ಬಂದಿತ್ತು. ತಮನ್ನಾ, ಕಾಜಲ್ ಅಗರ್ವಾಲ್, ಲಕ್ಷ್ಮೀ ರೈ ಮತ್ತು ನೂರಾ ಫತೇಹಿ ಹೆಸರು ಕೇಳಿಬಂದಿತ್ತು. ಇದಗೀ ನಾಲ್ವರಲ್ಲಿ ತಮನ್ನಾ ಫೈನಲ್ ಆಗಿದ್ದಾರೆ.
ಸದ್ಯದಲ್ಲೇ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದ್ದು ತಮನ್ನಾ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಮೂರು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಇದಕ್ಕಾಗಿ ವಿಶೇಷ ಸೆಟ್ ಹಾಕಲಾಗಿದ್ದು ಜಾನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ.
ಇನ್ನು ಪರೋಪಕಾರಿ ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು, ಕಣ್ಣು ಕತ್ತಿಯ ಅಂಚು... ಹಾಡನ್ನು ಈ ಚಿತ್ರಕ್ಕಾಗಿ ರೀಮಿಕ್ಸ್ ಮಾಡಲಾಗುತ್ತಿದ್ದು ಈ ಹಾಡಿಗೆ ತಮನ್ನಾ ಹೆಜ್ಜೆ ಹಾಕುತ್ತಿದ್ದಾರೆ.
ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಬಹುತೇಕ ಮುಗಿದಿದ್ದು ಸೆಪ್ಟೆಂಬರ್ ಕೊನೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಚಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics