ರಕ್ಷಿತ್ ಶೆಟ್ಟಿ 
ಸಿನಿಮಾ ಸುದ್ದಿ

'ನೋ ಪಾರ್ಕಿಂಗ್' ವಲಯದಲ್ಲಿ ಸ್ಯಾಂಡಲ್ ವುಡ್ ಖ್ಯಾತ ನಟನ ಕಾರು; ಟೆಕ್ಕಿ ನಿವಾಸಿಯಿಂದ ದೂರು

ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಜೆ ಪಿ ನಗರದ 6ನೇ ಹಂತದ 28ನೇ ಎ ಮುಖ್ಯರಸ್ತೆಯಲ್ಲಿ ...

ಬೆಂಗಳೂರು: ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಜೆ ಪಿ ನಗರದ 6ನೇ ಹಂತದ 28ನೇ ಎ ಮುಖ್ಯರಸ್ತೆಯಲ್ಲಿ ನೋ ಪಾರ್ಕಿಂಗ್ ವಲಯದಲ್ಲಿ ಆಡಿ ಕಾರನ್ನು ನಿಲುಗಡೆ ಮಾಡಿದ್ದು ಇದೀಗ ಸುದ್ದಿಗೆ ಮತ್ತು ವಿವಾದಕ್ಕೆ ಗ್ರಾಸವಾಗಿದೆ.

ಕಳೆದೆರಡು ದಿನಗಳಿಂದ ನೋ ಪಾರ್ಕಿಂಗ್ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಲಾಗಿದೆ ಎಂದು ಅಲ್ಲಿನ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟಕ್ಕೂ ಈ ಕಾರು ಖ್ಯಾತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ.

ಜೆ ಪಿ ನಗರದ ನಿವಾಸಿಯಾಗಿರುವ ಧನಂಜಯ್ ಪದ್ಮನಾಭಾಚಾರ್ ಈ ಬಗ್ಗೆ ನಗರ ಸಂಚಾರ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರಿನ ದಾಖಲಾತಿ ಸಂಖ್ಯೆಯನ್ನು ಪರಿಶೀಲಿಸಿದಾಗ ಅದು ನಟ ರಕ್ಷಿತ್ ಶೆಟ್ಟಿಗೆ ಸೇರಿದ ಕಾರು ಎಂದು ತಿಳಿದುಬಂದಿದ್ದು ಇದು ನಿಮ್ಮ ಕಾರೇ ಎಂದು ರಕ್ಷಿತ್ ಶೆಟ್ಟಿಯವರಲ್ಲಿ ಧನಂಜಯ್ ಪ್ರಶ್ನೆ ಕೇಳಿ ಟ್ವೀಟ್ ಮಾಡಿದ್ದಾರೆ.

ಕಾರನ್ನು ಕಳೆದೆರಡು ದಿನಗಳಿಂದ ನೋ ಪಾರ್ಕಿಂಗ್ ಪ್ರದೇಶದಲ್ಲಿ ಪಾರ್ಕಿಂಗ್ ಮಾಡಲಾಗಿದೆ. ರಸ್ತೆಯ ಮೂಲೆಯಲ್ಲಿ ಈ ರೀತಿ ನೋ ಪಾರ್ಕಿಂಗ್ ವಲಯದಲ್ಲಿ ಕಾರು ನಿಲ್ಲಿಸಿದರೆ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು ಭದ್ರತಾ ಸಿಬ್ಬಂದಿ ಹಲವು ಬಾರಿ ಕಾರಿನ ಚಾಲಕರಿಗೆ ಸಲಹೆ ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಯಾವಾಗೆಲ್ಲ ಈ ಕಾರು ಈ ಪ್ರದೇಶಕ್ಕೆ ಬರುತ್ತದೋ ಇಲ್ಲಿ ನಿಲ್ಲಿಸಿ ಹೋಗುತ್ತಾರೆ. ನೀತಿ, ನಿಯಮವೆಂಬುದು ಕೇವಲ ಸಾಮಾನ್ಯ ಜನರಿಗೆ ಮಾತ್ರ ಇರುವುದೇ, ಸ್ಯಾಂಡಲ್ ವುಡ್ ಹೀರೋಗಳಿಗೆ ಬೇರೆ ನಿಯಮವಿದೆಯೇ ಎಂದು ವೃತ್ತಿಯಲ್ಲಿ ಟೆಕ್ಕಿಯಾಗಿರುವ ಧನಂಜಯ್ ಟ್ವೀಟ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಇದು ಅಪಘಾತವಾಗುವ ಅಪಾಯಕಾರಿ ಸ್ಥಳವಾಗಿರುವುದರಿಂದ ಇಲ್ಲಿ ಕಳೆದ ಮೂರು ವರ್ಷಗಳಿಂದ ನೋ ಪಾರ್ಕಿಂಗ್ ವಲಯ ಎಂದು ಬೋರ್ಡ್ ಹಾಕಲಾಗಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿಯವರ ಮ್ಯಾನೇಜರ್ ನ್ನು ಕೇಳಿದರೆ, ಆ ಕಾರನ್ನು ರಕ್ಷಿತ್ ಶೆಟ್ಟಿಯವರು ತಮ್ಮ ಸ್ನೇಹಿತನೊಬ್ಬನಿಗೆ ನೀಡಿದ್ದಾರೆ, ಈಗ ಅವರ ಬಳಿ ಅದು ಇಲ್ಲ ಎಂದಿದ್ದಾರೆ. ಆದರೆ ಅವರು ಹೇಳಿರುವ ಸ್ನೇಹಿತ ಸಂಪರ್ಕಕ್ಕೆ ಸಿಗಲಿಲ್ಲ.

ತಾವು ಸದ್ಯದಲ್ಲಿಯೇ ಕಾರನ್ನು ಅಲ್ಲಿಂದ ತೆಗೆಯಲಿದ್ದೇವೆ. ಹಲವು ದಿನಗಳವರೆಗೆ ನೋ ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದರೆ ಕಾನೂನು ಕ್ರಮವಾಗಿ ಅದನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ಜೆಪಿ ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT