ರಚಿತಾ ರಾಮ್ 
ಸಿನಿಮಾ ಸುದ್ದಿ

ರಚಿತಾ ರಾಮ್ ಈಗ 'ಮಂಡ್ಯ ಹುಡುಗಿ'

ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ನಟನೆಯ ಮಹೇಶ್ ಕುಮಾರ್ ನಿರ್ದೇಶನದ ಅಯೋಗ್ಯ ಚಿತ್ರದ ...

ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ನಟನೆಯ ಮಹೇಶ್ ಕುಮಾರ್ ನಿರ್ದೇಶನದ ಅಯೋಗ್ಯ ಚಿತ್ರದ ಬಹುತೇಕ ಶೂಟಿಂಗ್ ನಡೆದಿ ಮಂಡ್ಯದಲ್ಲಿ. ಚಿತ್ರದ ನಾಯಕಿ ರಚಿತಾ ರಾಮ್ ಮಂಡ್ಯದ ಜನತೆಯೊಂದಿಗೆ ಆಪ್ತವಾಗಿದ್ದಾರಂತೆ. ಎಷ್ಟರ ಮಟ್ಟಿಗೆ ಎಂದರೆ ಚಿತ್ರತಂಡದವರಿಗೆ ಒಂದು ಅಸಮಾನ್ಯ ಮನವಿಯನ್ನು ಮಾಡಿಕೊಂಡಿದ್ದಾರೆ. ಮಂಡ್ಯದ ಸುಜಾತಾ ಥಿಯೇಟರ್ ಹತ್ತಿರ ಚಿತ್ರೀಕರಣ ಮಾಡಿರುವುದರಿಂದ ಇಲ್ಲಿಯೇ ಚಿತ್ರವನ್ನು ಬಿಡುಗಡೆ ಮಾಡುವಂತೆ ನಿರ್ಮಾಪಕರಿಗೆ ರಚಿತಾ ರಾಮ್ ಮನವಿ ಮಾಡಿದ್ದಾರಂತೆ.

ಮಂಡ್ಯದ ಸ್ಥಳೀಯ ಜನರೊಂದಿಗೆ ಅಲ್ಲಿ ರಚಿತಾ ರಾಮ್ ಚಿತ್ರ ವೀಕ್ಷಿಸಲಿದ್ದಾರೆ.
ಚಿತ್ರೀಕರಣ ಒಂದು ಕಲಿಕೆಯ ಅನುಭವದಂತಿತ್ತು. ಅದು ಆರಂಭದಿಂದ ಕೊನೆಯವರೆಗೂ ಸಹ. ಸಾವಿರಾರು ಮಂದಿ ಚಿತ್ರೀಕರಣ ನೋಡಲು ಬರುತ್ತಿದ್ದರು, ಅವರೆಲ್ಲರೂ ಬಂದು ನಮ್ಮನ್ನು ಮಾತನಾಡಿಸುತ್ತಿದ್ದರು. ಸೆಲ್ಫಿ ತೆಗೆದುಕೊಂಡು ಅವರನ್ನು ಮಾತನಾಡಿಸಿದರೆ ಅವರಿಗೆ ಬಹಳ ಖುಷಿಯಾಗುತ್ತಿತ್ತು. ಮಂಡ್ಯದ ಜನ ಕಬ್ಬಿನ ಸಿಹಿಯಂತೆ ಒಳ್ಳೆಯ ಗುಣ ಹೊಂದಿದ್ದಾರೆ ಎನ್ನುತ್ತಾರೆ ರಚಿತಾ ರಾಮ್.

ಚಿತ್ರೋದ್ಯಮದಲ್ಲಿ 5 ವರ್ಷಗಳನ್ನು ಕಳೆದು ಇಲ್ಲಿನ ಜನರ ಪ್ರೀತಿ, ವಿಶ್ವಾಸ ಪಡೆದಿರುವುದಕ್ಕೆ ನನಗೆ ಅತೀವ ಸಂತಸವಾಗುತ್ತಿದೆ. ಮಂಡ್ಯ ಶೈಲಿಯಲ್ಲಿ ಮಾತನಾಡುವುದನ್ನು ಕೇಳಿ ಇನ್ನೂ ಹೆಚ್ಚು ಸಂತೋಷವಾಯಿತು. ಚಿತ್ರ ನಿರ್ದೇಶಕ ಮತ್ತು ನಟ ಸತೀಶ್ ನೀನಾಸಂ ಇಬ್ಬರೂ ಮಂಡ್ಯದವರಾಗಿರುವುದರಿಂದ ಭಾಷೆ ಕಲಿಯುವುದು ಇನ್ನೂ ಸುಲಭವಾಯಿತು. ಮಂಡ್ಯದ ಹಳ್ಳಿಯ ಸಾಂಪ್ರದಾಯಿಕ ಹೆಣ್ಣುಮಗಳ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಾಧ್ಯವಾಯಿತು ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!