ಬೆಂಗಳೂರು: ಸ್ಯಾಂಡಲ್ವುಡ್ನ ರಾಕಿಂಗ್ ಜೋಡಿ ಯಶ್ ರಾಧಿಕಾ, ಕಳೆದ ತಿಂಗಳು ತಮ್ಮ ಮನೆಗೆ ಪುಟ್ಟ ಅತಿಥಿಯನ್ನು ಬರ ಮಾಡಿಕೊಳ್ಳುತ್ತಿರುವ ವಿಷಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
ಇದೀಗ ಇದರ ಬೆನ್ನಲ್ಲೇ ರಾಧಿಕಾ ಯಶ್ರೊಂದಿಗೆ ಫೋಸ್ ನೀಡಿರುವ ಫೋಟೋವೊಂದನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
2016ರ ಆಗಸ್ಟ್ 12 ಕ್ಕೆ ಸರಿಯಾಗಿ ಎರಡು ವರ್ಷಗಳ ಹಿಂದೆ ಈ ಜೋಡಿ ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಇದೀಗ ಎಂಗೇಜ್ಮೆಂಟ್ ಆಗಿ ಎರಡು ವರ್ಷಗಳಾಗುತ್ತಿರುವ ಖುಷಿಯಲ್ಲಿ ರಾಧಿಕಾ ಈ ಫೋಟೋ ಶೇರ್ ಮಾಡಿಕೊಳ್ಳುತ್ತಿರುವುದಾಗಿ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.ತಾಯಿಯಾಗುವ ಖುಷಿಯಲ್ಲಿರುವ ರಾಧಿಕಾ ತಮ್ಮ ಈ ಪೋಸ್ಟ್ನಲ್ಲಿ 'ಬೇಬಿ ಬಂಪ್' ಬಗ್ಗೆಯೂ ಬರೆದುಕೊಂಡಿದ್ದಾರೆ.