ಅಯೋಗ್ಯ ಸಿನಿಮಾದಲ್ಲಿ ರಚಿತಾ ರಾಮ್, ಸತೀಶ್ ನೀನಾಸಂ 
ಸಿನಿಮಾ ಸುದ್ದಿ

ಪಕ್ಕದ್ಮನೆ ಹುಡುಗಿಯಿಂದ 'ಅಯೋಗ್ಯ' ಮಹೇಶ್ ಗೆ ಸ್ಪೂರ್ತಿ!

ಇದೇ ಶುಕ್ರವಾರ ಮಹೇಶ್ ಕುಮಾರ್ ನಿರ್ದೇಶನದ ಅಯೋಗ್ಯ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಕಥೆ...

ಇದೇ ಶುಕ್ರವಾರ ಮಹೇಶ್ ಕುಮಾರ್ ನಿರ್ದೇಶನದ ಅಯೋಗ್ಯ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಕೂಡ ಮಹೇಶ್ ಕುಮಾರ್ ಅವರೇ ಬರೆದಿದ್ದಾರೆ. ಮಂಡ್ಯ ಜಿಲ್ಲೆಯ ಮಾರಗೌಡನಹಳ್ಳಿಯ ಮಹೇಶ್ ಕುಮಾರ್ ಅಯೋಗ್ಯ ಸಿನಿಮಾಕ್ಕೆ ತನ್ನ ಪಕ್ಕದ ಮನೆಯ ನಂದಿನಿ ಮತ್ತು ಸ್ನೇಹಿತ ಶಿವೆಗೌಡರ ನೈಜಘಟನೆಯನ್ನು ಪ್ರೇರಣೆಯಾಗಿ ತೆಗೆದುಕೊಂಡಿದ್ದಾರೆ.

ಶಿವೆಗೌಡ ಮತ್ತು ನಂದಿನಿ  ಪಾತ್ರವನ್ನು ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ತೆರೆಯ ಮೇಲೆ ತಂದಿದ್ದಾರೆ. ಪಂಚಾಯತ್ ನ ರಾಜಕೀಯ ಕೂಡ ಇಲ್ಲಿ ಬರುತ್ತದೆ.

ಮಹೇಶ್ ಕುಮಾರ್ ಇದನ್ನು ಇಲ್ಲಿಯವರೆಗೆ ತಮ್ಮ ಸ್ನೇಹಿತ ಶಿವಗೌಡಗೆ ಹೇಳಲಿಲ್ಲವಂತೆ. ಚಿತ್ರ ಬಿಡುಗಡೆಯಾಗುವವರೆಗೆ ಗುಟ್ಟಾಗಿ ಇಡಬೇಕೆಂಬುದು ಅವರ ಉದ್ದೇಶ. ನನ್ನೂರಿನಲ್ಲಿ ನಂದಿನಿ ನನ್ನ ನೆರೆಮನೆಯವಳು. ವಿದ್ಯಾವಂತ ಹುಡುಗಿ. ಹಾಲು ಮಾರುತ್ತಿದ್ದಳು ಮತ್ತು ಕೃಷಿ ಮಾಡುತ್ತಿದ್ದಳು. ಪ್ರತಿದಿನ ಕಾಲೇಜಿಗೆ ಸೈಕಲ್ ಗೆ ಹೋಗುತ್ತಿದ್ದಳು. ಬೈಕ್ ಓಡಿಸುತ್ತಿದ್ದಳು. ಇವೆಲ್ಲಾ ನನ್ನ ಗಮನ ಸೆಳೆದು ಚಿತ್ರದಲ್ಲಿ ಆಕೆಯ ಪಾತ್ರವನ್ನು ತಂದಿದ್ದೇನೆ ಎನ್ನುತ್ತಾರೆ ಮಹೇಶ್.

ಶಿವೆಗೌಡ ಕೂಡ ಅದೇ ಗ್ರಾಮದವರು. ನಂದಿನಿಯ ಗಮನ ಸೆಳೆಯಲು ಯತ್ನಿಸುತ್ತಿದ್ದ. ಗ್ರಾಮ ಪಂಚಾಯತ್ ಸದಸ್ಯನಾಗುವುದು ಅವನ ಬಯಕೆಯಾಗಿತ್ತು. ಇವರಿಬ್ಬರ ಕಥೆಯೇ ಅಯೋಗ್ಯವಾಗಿದೆ.

ಚಿತ್ರವನ್ನು ತಮ್ಮ ಊರಿನ ಜನರೊಂದಿಗೆ ನೋಡಲು ನಿರ್ದೇಶಕರು ಯೋಚಿಸಿದ್ದಾರೆ. ಟಿ ಆರ್ ಚಂದ್ರಶೇಖರ್ ಅವರ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಡಿ ಚಿತ್ರ ತಯಾರಾಗಿದೆ. 266 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ರವಿಶಂಕರ್ ವಿಲನ್ ಪಾತ್ರದಲ್ಲಿ, ಸಾಧು ಕೋಕಿಲಾ, ಕುರಿ ಪ್ರತಾಪ್, ಶಿವರಾಜ್ ಕೆ ಆರ್ ಪೇಟೆ, ಗಿರಿ, ಸುಂದರ್ ರಾಜ್ ಮತ್ತು ಅರುಣಾ ಬಾಲರಾಜ್ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ಪ್ರೀತಿ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Coal mafia: ಜಾರ್ಖಂಡ್-ಪಶ್ಚಿಮ ಬಂಗಾಳದಲ್ಲಿ 40 ಕ್ಕೂ ಹೆಚ್ಚು ಸ್ಥಳಗಳ ಮೇಲೆ ED ದಾಳಿ, ತೀವ್ರ ಶೋಧ

LKG, UKG in Anganwadis: ರಾಜ್ಯದ 5000 ಅಂಗನವಾಡಿಗಳಲ್ಲಿ ನ.28ರಿಂದ ತರಗತಿಗಳು ಆರಂಭ..!

'7 ಕಿ.ಮೀ ಉದ್ದ, 25 ಮೀಟರ್ ಆಳ, 80 ರೂಮ್ ಗಳು': ಪಾತಾಳದಲ್ಲಿ 'ಹಮಾಸ್' ಲೋಕ ಪತ್ತೆ ಮಾಡಿದ ಇಸ್ರೇಲ್! Video

ಆಫೀಸ್ ರೋಮ್ಯಾನ್ಸ್ ಎಫೆಕ್ಟ್: 150 ಕೋಟಿ ರೂ. ಸಂಬಳದ ಉದ್ಯೋಗ ಕಳೆದುಕೊಂಡ ಲಾಯ್ಡ್ಸ್ ಮಾಜಿ ಸಿಇಒ John Neal!

ಅಯ್ಯಪ್ಪ ಸ್ವಾಮಿ ಕಠಿಣ ವ್ರತ: ಶಬರಿಮಲೆ ಉಪವಾಸ ಹೇಗೆ ಪ್ರಾರಂಭಿಸಬೇಕು? 41 ದಿನಗಳವರೆಗೆ ಬ್ರಹ್ಮಚರ್ಯ ಏಕೆ ಪಾಲಿಸಬೇಕು?

SCROLL FOR NEXT