'ಕಾಫಿತೋಟ' ಹುಡುಗಿಯ ಕೈ ಹಿಡಿದ ನಿರ್ದೇಶಕ ಪವನ್ ಒಡೆಯರ್ 
ಸಿನಿಮಾ ಸುದ್ದಿ

'ಕಾಫಿ ತೋಟ'ದ ಹುಡುಗಿ ಅಪೇಕ್ಷಾ ಕೈ ಹಿಡಿದ ನಿರ್ದೇಶಕ ಪವನ್ ಒಡೆಯರ್

ಸ್ಯಾಂಡಲ್ ವುಡ್ ನ ಪ್ರಮುಖ ನಿರ್ದೇಶಕ ಪವನ್ ಒಡೆಯರ್ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬಾಗಲಕೋಟೆ: ಸ್ಯಾಂಡಲ್ ವುಡ್ ನ ಪ್ರಮುಖ ನಿರ್ದೇಶಕ ಪವನ್ ಒಡೆಯರ್ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪವನ್‌ ಒಡೆಯರ್‌ ಹಾಗೂ ನಟಿ ಅಪೇಕ್ಷಾ ಪುರೋಹಿತ್ ಅವರನ್ನು ವಿವಾಹವಾಗಿದ್ದು ಬಾಗಲಕೋಟೆಯಲ್ಲಿ ಈ ವಿವಾಹ ಕಾರ್ಯಕ್ರಮ ನೆರವೇರಿದೆ. ಬಾಗಲಕೋಟೆ ವಿದ್ಯಾಗಿರಿಯಲ್ಲಿರುವ ಗೌರಿ ಶಂಕರ್ ಕಲ್ಯಾಣ ಮಂಟಪದಲ್ಲಿ ನವಜೋಡಿ ಹಸೆಮಣೆ ಏರಿದ್ದಾರೆ.
ನಿನ್ನೆ (ಭಾನುವಾರ) ಇಬ್ಬರ ಆರತಕ್ಷತೆ ಕಾರ್ಯಕ್ರಮವೂ ಸಹ ಇಲ್ಲಿಯೇ ನಡೆದಿತ್ತು. ವಿವಾಹವು ಬ್ರಾಹ್ಮಣ ಸಂಪ್ರದಾಯದಂತೆ ನಡೆದಿದ್ದು ಈ ತಿಂಗಳಲ್ಲಿ ಬೆಂಗಳೂರಿನಲ್ಲಿ ಸಿನಿಮಾ ರಂಗ ಗಣ್ಯರಿಗಾಗಿ ಇನ್ನೊಮ್ಮೆ ಆರತಕ್ಷತೆ ಏರ್ಪಡಿಸಲಾಗುತ್ತದೆ ಎಂದು ಮೂಲಗಳು ಹೇಳಿದೆ.
ಇಂದಿನ ವಿಒವಾಹ ಕಾರ್ಯಕ್ರಮಕ್ಕೆ ಸಹ ಪುನೀತ್‌ ರಾಜ್‌ಕುಮಾರ್‌  ಮತ್ತಿತರೆ ಚಿತ್ರನಟ, ನಟಿಯರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದರು.
`ರಣವಿಕ್ರಮ’, `ನಟರಾಜ ಸರ್ವಿಸ್’, `ಗೂಗ್ಲಿ’ ಹಾಗೂ `ಗೋವಿಂದಾಯ ನಮಃ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಪವನ್ ಒಡೆಯರ್ ಸಧ್ಯ  ಪುನೀತ್ ಅಭಿನಯದ `ನಟ ಸಾರ್ವಭೌಮ’ ಸಿನಿಮಾ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ.
 ಬಾಗಲಕೋಟೆಯ ಮೂಲದ ನಟಿ ಅಪೇಕ್ಷಾ ಸಹ  ಕನ್ನಡದ ಕಿರುತೆರೆಯಲ್ಲಿ ಅನೇಕ ಕಾರ್ಯಕ್ರಮ, ಧಾರಾವಹಿಗಳಲ್ಲಿ ಅಭಿನಯಿಸಿದ್ದಲ್ಲದೆ ಟಿಎನ್ ಸೀತಾರಾಮ್ ಅವರ `ಕಾಫೀ ತೋಟ’ ಚಿತ್ರದಲ್ಲಿ ಸಹ ನಟಿಸಿದ್ದಾರೆ.
ಬಾಗಲಕೋಟೆಯ  ಹರಿಪ್ರಿಯಾ ಹೋಟೆಲ್‍ನಲ್ಲಿ ಕಳೆದ ಡಿಸೆಂಬರ್ ನಲ್ಲಿ ಪವನ್ ಹಾಗೂ ಅಪೇಕ್ಷಾ ಅವರ ವಿವಾಹ ನಿಶ್ಚಿತಾರ್ಥ ನೆರವೇರಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ