ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ಹೈದ್ರಾಬಾದ್ ನಲ್ಲಿ 'ಅಯೋಗ್ಯ' ಚಿತ್ರ ಪ್ರದರ್ಶನಕ್ಕೆ ಸಂಕಷ್ಟ!

ಅಯೋಗ್ಯ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಬ್ಲಾಕ್ ಬುಸ್ಟರ್ ಎಂಬ ಪ್ರಶಂಸೆಗೂ ಪಾತ್ರವಾಗಿದೆ. ಆದರೆ. ಹೈದಾರಾಬಾದಿನಲ್ಲಿ ಚಿತ್ರ ಪ್ರದರ್ಶನಕ್ಕೆ ಹೋರಾಟ ಎದುರಾಗಿದೆ.

ಇತ್ತೀಚಿಗೆ ತೆರೆಕಂಡ ಮಹೇಶ್ ಕುಮಾರ್ ನಿರ್ದೇಶನದ ನೀನಾಸಾಂ ಸತೀಶ್ ಹಾಗೂ ರಚಿತಾ ರಾಮ್ ಅಭಿಯನದ  ಅಯೋಗ್ಯ ಚಿತ್ರ  ರಾಜ್ಯಾದ್ಯಂತ  ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಬ್ಲಾಕ್ ಬುಸ್ಟರ್ ಎಂಬ ಪ್ರಶಂಸೆಗೂ ಪಾತ್ರವಾಗಿದೆ. ಆದರೆ. ಹೈದಾರಾಬಾದಿನಲ್ಲಿ  ಚಿತ್ರ ಪ್ರದರ್ಶನಕ್ಕೆ ಹೋರಾಟ ಎದುರಾಗಿದೆ.

ಇತ್ತೀಚಿಗೆ ತೆರೆಕಂಡ ತೆಲುಗು, ಮತ್ತು ತಮಿಳು ಚಿತ್ರಗಳು ಹೈದಾರಾಬಾದಿನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿವೆ ಆದರೆ ಹಂಚಿಕೆದಾರರು ಕನ್ನಡ ಚಿತ್ರ ಬಿಡುಗಡೆಗೆ  ಆಸಕ್ತಿ ತೋರುತ್ತಿಲ್ಲ. ಅಲ್ಲಿನ ಮಲ್ಟಿಪ್ಲೆಕ್ಸ್ ಗಳಾಗಲೀ ಅಥವಾ  ಚಿತ್ರಮಂದಿರಗಳಾಗಲೀ ಒಂದು ಬಾರಿಯೂ ಆಯೋಗ್ಯ ಪ್ರದರ್ಶನಕ್ಕೆ  ಅವಕಾಶ ನೀಡುತ್ತಿಲ್ಲ ಎಂದು  ಹೊರ ರಾಜ್ಯಗಳಲ್ಲಿ ಚಿತ್ರ ಬಿಡುಗಡೆಯ ಹಕ್ಕು ತೆಗೆದುಕೊಂಡಿರುವ  ಹಂಚಿಕೆದಾರ ಯಶಸ್ ನಾಗ್ ಹೇಳುತ್ತಿದ್ದಾರೆ ಎಂದು  ಮಹೇಶ್ ಕುಮಾರ್ ಹೇಳಿದ್ದಾರೆ.

ಒಂದು ವೇಳೆ ತೆಲುಗು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬರದಿದ್ದರೆ ಮಾತ್ರ ಕನ್ನಡ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಈ ವಿಚಾರದಲ್ಲಿ  ಹೈದ್ರಾಬಾದ್ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಾ ಏನನ್ನೂ ಹೇಳುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತೆಲುಗು ಚಿತ್ರಗಳನ್ನು ಕರ್ನಾಟಕದಲ್ಲಿ ಅದ್ದೂರಿಯಾಗಿ  ಬಿಡುಗಡೆ ಆಗುವುದಲ್ಲದೇ, ಬೃಹತ್ ಪ್ರಮಾಣದಲ್ಲಿ ಗಳಿಕೆ ಮಾಡುತ್ತವೆ. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಿ ಪರ್ಯಾಯ ಮಾರ್ಗದ ಬಗ್ಗೆ ನೆರವು ಪಡೆಯಲಾಗುವುದು ಎಂದು ಮಹೇಶ್ ಕುಮಾರ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಇದೆಲ್ಲಾ ನನ್ ಮೇಲೆ ಪರಿಣಾಮ ಬೀರೊಲ್ಲ': ನ್ಯಾಯಾಲಯದಲ್ಲಿ CJI ಮೇಲೆ ಶೂ ಎಸೆದ ವಕೀಲ; Gavai ಪ್ರತಿಕ್ರಿಯೆ

Frances New PM Resigns: ಕ್ಯಾಬಿನೆಟ್ ರಚನೆ ಬೆನ್ನಲ್ಲೆ ಫ್ರಾನ್ಸ್‌ನ ನೂತನ ಪ್ರಧಾನಿ ರಾಜೀನಾಮೆ! ಕಾರಣವೇನು?

ಗಾಜಾದ ಅಂತಿಮ ಭರವಸೆ: ಈಜಿಪ್ಟ್‌ನಲ್ಲಿ ನಡೆಯುವ ಮಾತುಕತೆಗಳು ಯುದ್ಧ ನಿಲ್ಲಿಸಬಹುದೇ? (ಜಾಗತಿಕ ಜಗಲಿ)

ಮತ್ತೊಂದು ಪೈಶಾಚಿಕ ಕೃತ್ಯ: MBBS ವಿದ್ಯಾರ್ಥಿನಿಗೆ ಡ್ರಗ್ಸ್ ನೀಡಿ ಅತ್ಯಾಚಾರ, Video ರೆಕಾರ್ಡ್!

ಸಮಾಜದಲ್ಲಿ ಜ್ಞಾನದ ಬೆಳಕನ್ನು ಬೆಳಗಿಸುವವರು ಬ್ರಾಹ್ಮಣರು: ದೆಹಲಿ ಸಿಎಂ ರೇಖಾ ಗುಪ್ತಾ

SCROLL FOR NEXT