ಸಿನಿಮಾ ಸುದ್ದಿ

'ನಾನ್ನಕು ಪ್ರೇಮತೋ' ತಂದೆಯನ್ನು ಕಳೆದುಕೊಂಡ ಜೂನಿಯರ್ ಎನ್‍ಟಿಆರ್

Vishwanath S
ಹೈದರಾಬಾದ್: ತೆಲುಗಿನ ಸ್ಟಾರ್ ನಟ ಜೂನಿಯರ್ ಎನ್‍ಟಿಆರ್ ತಂದೆ ನಂದಮೂರಿ ಹರಿಕೃಷ್ಣ ಅವರು ರಸ್ತೆ ಅಪಘಾತವೊಂದರಲ್ಲಿ ದುರ್ಮರಣ ಹೊಂದಿದ್ದಾರೆ. 
ಜೂನಿಯರ್ ಎನ್‍ಟಿಆರ್ ತೆಲುಗಿನಲ್ಲಿ ಸಾಕಷ್ಟು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಆದಿ, ಸಿಂಹಾದ್ರಿ, ಬೃಂದಾವನಂ, ನಾನ್ನಕು ಪ್ರೇಮತೋ, ಜನತಾ ಗ್ಯಾರೇಜ್ ಮತ್ತು ಜೈ ಲವಕುಶ ಚಿತ್ರಗಳು ಅವರಿಗೆ ಸ್ಟಾರ್ ಪಟ್ಟ ತಂದು ಕೊಟ್ಟ ಚಿತ್ರಗಳು. 
ಜೂನಿಯರ್ ಎನ್‍ಟಿಆರ್ ತಾಯಿ ಶಾಲಿನಿ ನಂದಮೂರಿ ಅವರು ಮೂಲತಃ ಕರ್ನಾಟಕದ ಕುಂದಾಪುರದವರು. ಶಾಲಿನಿ ಅವರು ಚಿಕ್ಕವರಿದ್ದಾಗಲೇ ಅವರ ಕುಟುಂಬ ಹೈದರಾಬಾದ್ ಗೆ ಹೋಗಿ ನೆಲಿಸಿದ್ದರು. ನಂದಮೂರಿ ಹರಿಕೃಷ್ಣ ಅವರು ಶಾಲಿನಿ ಅವರನ್ನು ಎರಡನೇ ಮದುವೆ ಮಾಡಿಕೊಂಡಿದ್ದರು. 
2017ನೇ ಸಾಲಿನ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ತೆಲುಗಿನ ಖ್ಯಾತ ನಟ ಜೂನಿಯರ್ ಎನ್‌ಟಿಆರ್‌ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದರು. 
ವೇದಿಕೆ ಮೇಲಿದ್ದ ಜೂನಿಯರ್ ಎನ್‌ಟಿಆರ್‌ ಮೈಕ್ ಹಿಡಿದು ತಮ್ಮ ತಾಯಿ ಕನ್ನಡದವರು, ಅವರ ಹುಟ್ಟುರು ಕುಂದಾಪುರ. ತಾತ(ಎನ್‌ಟಿಆರ್‌) ಕುಟುಂಬದ ಹಾಗೆಯೇ ಅಮ್ಮನದ್ದು ದೊಡ್ಡ ಕುಟುಂಬ ಆಗಾ ನಾನೂ ಅಲ್ಲಿಗೆ ಹೋಗಿ ಬರುತ್ತೇನೆ. ಕನ್ನಡ, ಕರ್ನಾಟಕ ನನ್ನ ಬದುಕಲ್ಲಿ ಗೊತ್ತಿಲ್ಲದಂತೆ ಬೆಸೆದುಕೊಂಡಿದೆ ಅಂತ ಭಾವುಕರಾದರು. 
ಜೂನಿಯರ್ ಎನ್‌ಟಿಆರ್‌ ಶುದ್ಧ ಕನ್ನಡದಲ್ಲಿ ಮಾತನಾಡುತ್ತಿದ್ದಂತೆ ಅಲ್ಲಿ ನೆರದಿದ್ದ ಕನ್ನಡಿಗರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ತಕ್ಷಣವೇ ಚಕ್ರವ್ಯೂಹ ಚಿತ್ರದ ಗೆಳೆಯ ಗೆಳೆಯ ಹಾಡು ಹೇಳಿ ರಂಜಿಸಿದರು.
SCROLL FOR NEXT