ನವದೆಹಲಿ: ಕಣ್ ಸನ್ನೆ ಮೂಲಕ ದೇಶದ ಯುವಜನರಲ್ಲಿ ಸಂಚಲನ ಮುಡಿಸಿದ್ದ ಕೇರಳದ ಯುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಸುಪ್ರೀಂ ಕೋರ್ಟ್ ನಿಂದ ದೊಡ್ಡ ರಿಲೀಫ್ ಸಿಕ್ಕಿದೆ.
ಓರು ಅದರ್ ಲವ್ ಚಿತ್ರದಲ್ಲಿ ನಟಿಸಿರುವ ಮಲಯಾಳಂ ನಟಿ ಪ್ರಿಯಾ ಆ ಚಿತ್ರದ ಹಾಡೊಂದರಲ್ಲಿ ಕಣ್ಣು ಮಿಟುಕಿಸುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು ಈ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.
ಈ "ಕಣ್ ಸನ್ನೆ" ಕುರಿತಂತೆ ತೆಲಂಗಾಣ ಪೋಲೀಸರಲ್ಲಿ ದೂರು ದಾಖಲಾಗಿದ್ದು ಸುಪ್ರೀಂ ಕೋರ್ಟ್ ಇದರ ವಿಚಾರಣೆ ನಡೆಸಿದೆ. ಇದೀಗ ನ್ಯಾಯಾಲಯ ನಟಿ ಪ್ರಿಯಾ ವಾರಿಯರ್ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ವಜಾ ಗೊಳಿಸಿದ್ದಲ್ಲದೆ ದೂರು ದಾಖಲಿಸಿದವರನ್ನೂ ತರಾಟೆಗೆ ತೆಗೆದುಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಪ್ರಕರಣದ ವಿಚಾರಣೆ ನಡೆಸಿ ತೆಲಂಗಾಣ ಸರ್ಕಾರ ಹಾಕಿದ್ದ ಎಫ್ಐಆರ್ ರದ್ದು ಗೊಳಿಸಿರುವುದಲ್ಲದೆ ವೀಡಿಯೊಗೆ ಸಂಬಂಧಿಸಿದಂತೆ ನಟಿ ಮತ್ತು ನಿರ್ದೇಶಕರ ವಿರುದ್ಧ ಮುಂದಿನ ದಿನಗಳಲ್ಲಿ ಯಾವುದೇ ಎಫ್ಐಆರ್ ನೋಂದಾಯಿಸದಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿರುವ ಪ್ರಿಯಾ ಓರು ಅದರ್ ಲವ್ ಚಿತ್ರದ "ಮಾಣಿಕ್ಯ ಮಲಯಾಯ ಪೂವಿ" ಹಾಡಿಗೆ ಅಭಿನಯಿಸಿದ್ದರು.ಇದರಲ್ಲಿ ಅವರು ಮಾಡಿರುವ ಕಣ್ ಸನ್ನೆಯು "ಆಕ್ರಮಣಕಾರಿ" ಮತ್ತು "ಒಂದು ನಿರ್ದಿಷ್ಟ ಸಮುದಾಯದ ಧಾರ್ಮಿಕ ಮನೋಭಾವವನ್ನು ನೋಯಿಸುವಂತಿದೆ" ಎಂದು ಆರೋಪಿಸಿ ತೆಲಂಗಾಣ ಸರ್ಕಾರ ದೂರು ದಾಖಲಿಸಿದ್ದಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos