ಬೆಂಗಳೂರು: ಇನ್ನು ಮುಂದೆ ಡಬ್ಬಿಂಗ್ ಹೋರಾಟಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ನಟ ಜಗ್ಗೇಶ್ ಅವರು ಶನಿವಾರ ಹೇಳಿದ್ದಾರೆ.
ಡಬ್ಬಿಂಗ್ ವಿವಾದ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಡಬ್ಬಿಂಗ್ ವಿರೋಧಿಸಿದ್ದು ಕಲಾವಿದರು, ತಂತ್ರಜ್ಞರ ಒಳಿಗಾಗಿಯೇ ವಿನಃ ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾನ್ಯರೆ 36 ವರ್ಷ ಕನ್ನಡ ಚಿತ್ರರಂಗದ ಸಮಸ್ಯೆಗೆ ಸ್ಪಂದಿಸುವುದು ನನ್ನ ಕರ್ತವ್ಯ. ಉದ್ಯಮ ಕರೆದ ಡಬ್ಬಿಂಗ್ ವಿರುದ್ಧದ ಸಭೆಗೆ ನಾನು ಹೋಗಿದ್ದು ನಿಜ. ನಮ್ಮ ಅಕ್ರೋಶವೂ ನಿಜ. ಆದರೆ, ಅದಷ್ಟು ನಮ್ಮ ಕಲಾವಿದರು ತಂತ್ರಜ್ಞರಿಗಾಗಿ ಮಾತ್ರವೇ ವಿನಃ ಯಾವ ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ.
ಕನ್ನಡಿಗರು ಸರ್ವಸ್ವತಂತ್ರರು. ಇನ್ನು ಮುಂದೆ ನನಗೂ ಡಬ್ಬಿಂಗ್ ಗೂ ಯಾವುದೇ ಸಂಬಂಧವೂ ಇಲ್ಲ. ನಾನಾಯಿತು ನನ್ನ ಕಲಾಕರ್ತವ್ಯವಾಯಿತು. ನನ್ನ ಹಿಂದಿನ ನಡಾವಳಿಗೆ ನಿಮಗೆ ನೋವಾಗಿದ್ದರೆ, ಕ್ಷಮೆಯಿರಲಿ. ನಾನು ನಿಮ್ಮವನು. ವಯಸ್ಸಿನಲ್ಲಿ ಹಿರಿಯನಾದರೆ, ಸಹೋದರನು ಎಂಬು ಭಾವಿಸಿ ನಗು ಸಂತೋಷವಾಗಿ ಬಾಳಿ. ಶುಭ ಹಾರೈಕೆ ಕನ್ನಡದ ಮನಗಳಿಗೆ.
ನಾನು ಬದುಕಿನಲ್ಲಿ ಶ್ರಮದಿಂದ ಮುಂದೆ ಬಂದವರು. ಕನಸಿನಲ್ಲಿಯೂ ಯಾರಿಗೂ ಕೆಟ್ಟದು ಬಯಸಿಲ್ಲ. ಬಯಸುವುದೂ ಇಲ್ಲ. ರಾಯರ ಭಕ್ತರು ತಪ್ಪು ಮಾಡುವುದಿಲ್ಲ. ನನಗೆ ನನ್ನ ಕನ್ನಡ ಭಾಷೆ ಕನ್ನಡ ಜನರೇ ದೇವರು ಎಂದು ಭಾವಸಿ ಶ್ರದ್ಧೆಯಿಂದ ಯಾವ ತಪ್ಪು ಮಾಡದೆ ಬದುಕಿರುವೆ. ನನ್ನ ಮೇಲಿನ ಅಪಾರ್ಥ ಸರಿಪಡಿಸಲು ಈ ಬರಹ ಓದಿ ಭಿನ್ನಾಭಿಪ್ರಾಯ ಇದ್ದರೆ ಮರೆತುಬಿಡಿ, ವಿನಂತಿ ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics