ಮಗಳ ಪುಟ್ಟ ಹಸ್ತದೊಂದಿಗೆ ಯಶ್ ಕೈ ಬೆರಳು 
ಸಿನಿಮಾ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಮುದ್ದಿನ ಮಗಳ ಪುಟ್ಟ ಹಸ್ತ: ವೈರಲ್

ಮನದಾಸೆಯಂತೆ ಜನಿಸಿದ ಮುದ್ದಿನ ಮಗಳ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ತನ್ನ ಮುದ್ದಿನ ಮಗಳ ಪುಟ್ಟಹಸ್ತದೊಂದಿಗೆ ಯಶ್ ಕೈ ಬೆರಳಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು: ಮನದಾಸೆಯಂತೆ ಜನಿಸಿದ ಮುದ್ದಿನ ಮಗಳ ಬಗ್ಗೆ ರಾಕಿಂಗ್ ಸ್ಟಾರ್ ಯಶ್  ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ತನ್ನ ಮುದ್ದಿನ ಮಗಳ ಪುಟ್ಟಹಸ್ತದೊಂದಿಗೆ  ಯಶ್ ಕೈ ಬೆರಳಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

“ನನ್ನ ಬೆರಳುಗಳನ್ನು ಬಿಗಿಹಿಡಿದು ತಂದೆತನದೆಡೆಗೆ ದಾರಿ ತೋರಿಸಿದ ನನ್ನ ದೇವತೆಯ ಪುಟ್ಟಹಸ್ತ! ಯಾರನ್ನಾದರೂ ಕನಿಷ್ಠ ನೋಡದೆಯೇ ಪ್ರೀತಿಸುವುದು ಒಂದು ಅದ್ಭುತ ಭಾವ. ಇನ್ನು ಅವಳನ್ನು ಕಣ್ತುಂಬಿಕೊಂಡ ಮೇಲಂತೂ ಅವಳೊಂದಿಗೆ ನನ್ನ ಪ್ರೀತಿ ನೂರ್ಮಡಿಯಾಗಿದೆ” ಎಂದು ಫೇಸ್ ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ನಟಿ ರಾಧಿಕ ಪಂಡಿತ್ ಅವರು ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಪ್ರೀತಿಯ ಮಗಳೊಂದಿಗೆ ಯಶ್ ಕಾಣಿಸಿಕೊಂಡಿರುವ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಮಗಳನ್ನು ಒಂದೇ ನೋಟದೊಂದಿಗೆ ಸೂಕ್ಷ್ಮವಾಗಿ ಗಮನಿಸುತ್ತಿರುವ ಫೋಟೋ ಕಂಡ ಅಭಿಮಾನಿಗಳು ಸಂತಸಗೊಂಡು ಶುಭ ಕೋರಿದ್ದಾರೆ.
ಅಂದಹಾಗೇ ಯಶ್ ತಮಗೆ ಹೆಣ್ಣು ಮಗು ಬೇಕೆಂದು ಇಷ್ಟ ಪಟ್ಟಿದ್ದ ಸಂಗತಿ ಈಗಾಗಲೇ ತಿಳಿದಿದೆ. ಮುದ್ದಿನ ಮಗಳ ಜನನದ ಸುದ್ದಿ ಕೇಳಿದ ಯಶ್ ಕಣ್ಣಲ್ಲಿ ಆನಂದಭಾಷ್ಪ ತುಂಬಿತ್ತು ಎಂದು ವೈದ್ಯರು ತಿಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್