ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್'ವುಡ್'ನ ನಟ ಹಾಗೂ ನಿರ್ದೇಶಕ ಎ.ಆರ್. ಬಾಬು ಅವರು ಮಂಗಳವಾರ ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದಾಗಿ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ಬಾಬು ಅವರು ಕೆಲ ದಿನಗಳ ಹಿಂದಷ್ಟೇ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ನಿರ್ದೇಶಕ ಪ್ರೇಮ್ ಸೇರಿದಂತೆ ಹಲವರಿಗೆ ಗುರುವಾಗಿದ್ದ ಬಾಬು ಅವರು, ಹಲೋ ಯಮ, ಚಮ್ಕಾಯಿಸಿ ಚಿಂದಿ ಉಡಾಯ್ಸಿ, ಸಪ್ನೋಂಕಿ ರಾಣಿ ಸೇರಿದಂತೆ ಹಲವು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು.
ಚರಣ್ ರಾಜ್, ಚಾರುಲತಾ ಹಾಗೂ ಧೀರೇಂದ್ರ ಗೋಪಾಲ್ ಮುಖ್ಯಭೂಮಿಕೆಯಲ್ಲಿ 1998ರಲ್ಲಿ ತೆರೆ ಕಂಡಿದ್ದ ಚೋರ್ ಗುರು ಚಾಂಡಾಲ್ ಶಿಷ್ಯ ಬಾಬು ಅವರ ಮೊದಲ ಚಿತ್ರವಾಗಿತ್ತು.