ಬೆಂಗಳೂರು: ಹಿರಿಯ ನಟ ರಾಮ್ ಕುಮಾರ್ ಪುತ್ರ ಧೀರೇನ್ ರಾಜ್ ಕುಮಾರ್ ಚೊಚ್ಚಲ ಅಭಿನಯದ ದಾರಿ ತಪ್ಪಿ ಮಗ ಸಿನಿಮಾ ಗಾಂಧಿ ನಗರದಲ್ಲಿ ಸಾಕಷ್ಚು ಸುದ್ದಿ ಮಾಡುತ್ತಿದೆ.
ಇತ್ತೀಚಿನ ಸುದ್ದಿ ಏನೆಂದರೇ ಧೀರೇನ್ ರಾಜ್ ಕುಮಾರ್ ಗೆ ನಾಯಕಿಯಾಗಿ ಮಾನ್ವಿತಾ ಕಾಮತ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
1975 ರಲ್ಲಿ ತೆರೆಕಂಡ ದಾರಿ ತಪ್ಪಿದ ಮಗ ಸಿನಿಮಾದಲ್ಲಿ ಧಿರೇನ್ ತಾತ ಡಾ.ರಾಜ್ ಕುಮಾರ್ ದ್ವಿಪಾತ್ರದಲ್ಲಿ ನಟಿಸಿದ್ದರು. ಜಯಣ್ಣ ಕಂಬೈನ್ಸ್ ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಹಲವು ಹೀರೋಯಿನ್ ಗಳ ಹೆಸರು ಕೇಳಿ ಬಂದಿತ್ತು,. ಆ ಪಾತ್ರಕ್ಕೆ ಮಾನ್ವಿತಾ ಸೂಕ್ತ ಎಂದು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಮಾನ್ವಿತಾ ಜೊತೆ ಕೆಲ ಸುತ್ತಿನ ಮಾತುಕತೆಗಳು ಮುಗಿದಿವೆ, ಇನ್ನೂ ಡಾಟೆಡ್ ಲೈನ್ ಮೇಲೆ ಸಹಿ ಮಾಡುವುದೊಂದೇ ಬಾಕಿ.
ಕೆಂಡ ಸಂಪಿಗೆ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿರುವ ಮಾನ್ವಿತಾ ನಾಗತಿಹಳ್ಳಿ ಚಂದ್ರಶೇಖರ್ ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮರಾಠಿ ಸಿನಿಮಾದಲ್ಲೂ ಮಾನ್ವಿತಾ ಅಭಿನಯಿಸುತ್ತಿದ್ದಾರೆ.