ಯೋಗರಾಜ್ ಭಟ್ 
ಸಿನಿಮಾ ಸುದ್ದಿ

ಮತ್ತೊಮ್ಮೆ ಗಾಳಿಪಟ ಹಾರಿಸಲು ಮುಂದಾದ ಯೋಗರಾಜ್ ಭಟ್!

2008ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಗಾಳಿಪಟ ಸರಣಿ ಚಿತ್ರವನ್ನು ನಿರ್ದೇಶಿಸಲು ಯೋಗರಾಜ್ ಭಟ್ ಮುಂದಾಗಿದ್ದು ಗಣೇಶ್, ರಾಜೇಶ್ ಹಾಗೂ ದಿಗಂತ್ ಅಭಿನಯಿಸಿದ್ದು...

2008ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಗಾಳಿಪಟ ಸರಣಿ ಚಿತ್ರವನ್ನು ನಿರ್ದೇಶಿಸಲು ಯೋಗರಾಜ್ ಭಟ್ ಮುಂದಾಗಿದ್ದು ಗಣೇಶ್, ರಾಜೇಶ್ ಹಾಗೂ ದಿಗಂತ್ ಅಭಿನಯಿಸಿದ್ದು ಈ ಬಾರಿ ಶರಣ್, ಪವನ್ ಕುಮಾರ್ ಮತ್ತು ರಿಶಿ ಗಾಳಿಪಟ 2 ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ. 
ಗಾಳಿಪಟ ಆವೃತ್ತಿ ಚಿತ್ರ ನಿರ್ಮಿಸುವುದಕ್ಕೆ ನಿರ್ಮಾಪಕ ಮಹೇಶ್ ದನನ್ನಾವರ್ ಅವರು ಯೋಗರಾಜ್ ಭಟ್ ಬೆನ್ನು ಬಿದ್ದಿದ್ದು ಶರಣ್, ಪವನ್ ಕುಮಾರ್ ಹಾಗೂ ರಿಶಿ ಆಯ್ಕೆಗೆ ಮಹೇಶ್ ಅವರು ಸಲಹೆ ನೀಡಿದ್ದಾರೆ ಎಂದು ಯೋಗರಾಜ್ ಭಟ್ ಹೇಳಿದ್ದಾರೆ. 
ಮಹೇಶ್ ಗುಜರಾತಿನ ಬಾಕ್ಲ್ ಬಸ್ಟರ್ ಸು ಥಾಯು ಚಿತ್ರವನ್ನು ನಿರ್ಮಿಸಿದ್ದರು. ಮಹೇಶ್ ಮೂಲತಃ ಕನ್ನಡಿಗರು. ಬೆಳಗಾಂ ಮೂಲದವರು. ಸ್ವಂತ ಕ್ರಿಕೆಟ್ ತಂಡವನ್ನು ಹೊಂದಿರುವ ಅವರಿಗೆ ಹೀರೋ ಆಗುವ ಎಲ್ಲಾ ಕ್ಲಾಲಿಟಿ ಇದೆ. ಆದರೆ ಅವರು ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಯೋಗರಾಜ್ ಭಟ್ ತಿಳಿಸಿದ್ದಾರೆ. 
ಗಾಳಿಪಟ 2 ಚಿತ್ರ ಸಿಕ್ವೇಲ್ ಚಿತ್ರವಲ್ಲ. ಚಿತ್ರ ವಿಭಿನ್ನ ಕಥೆಯನ್ನು ಹೊಂದಿರುತ್ತದೆ. ಚಿತ್ರದಲ್ಲಿ ನಾಲ್ವರು ಚೀನಿಯರು ಅಥವಾ ಕೊರಿಯನ್ ನಟಿಯರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೂಟಿಂಗ್ ಬೆಂಗಳೂರು ಮತ್ತು ವಿದೇಶದಲ್ಲಿ ನಡೆಯಲಿದೆ. 
2019ರ ಮಾರ್ಚ್ 15 ರಿಂದ ಏಪ್ರಿಲ್ 15ರವರೆಗೆ ಬೆಂಗಳೂರಿನಲ್ಲಿ ಹಾಗೂ ಮೇ 15ರಿಂದ ಜೂನ್ 15ರವರೆಗೆ ಎರಡನೇ ಹಂತದ ಚಿತ್ರೀಕರಣ ಲಂಡನ್ ನಲ್ಲಿ ನಡೆಯಲಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?