ಧೀರೆನ್ ರಾಜ್ ಕುಮಾರ್ 
ಸಿನಿಮಾ ಸುದ್ದಿ

ಹಾರರ್ ಚಿತ್ರಗಳೆಂದರೆ ನನಗೆ ಪಂಚಪ್ರಾಣ: ಧೀರೆನ್ ರಾಜ್ ಕುಮಾರ್

ವರನಟ ರಾಜ್ ಕುಮಾರ್ ಅವರ ಕುಟುಂಬದ ಇನ್ನೊಂದು ಕೊಂಡಿ ಧೀರೆನ್ ರಾಜ್ ಕುಮಾರ್ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುವ ಕಾಲ ಕಡೆಗೂ ಸನ್ನಿಹಿತವಾಗಿದೆ. ನಟ ರಾಮ್ ಕುಮಾರ್....

ಬೆಂಗಳೂರು: ವರನಟ ರಾಜ್ ಕುಮಾರ್ ಅವರ ಕುಟುಂಬದ ಇನ್ನೊಂದು ಕೊಂಡಿ ಧೀರೆನ್ ರಾಜ್ ಕುಮಾರ್ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುವ ಕಾಲ ಕಡೆಗೂ ಸನ್ನಿಹಿತವಾಗಿದೆ. ನಟ ರಾಮ್ ಕುಮಾರ್ ಹಾಗೂ ಪೂರ್ಣಿಮಾ ಅವರ ಪುತ್ರ ದೀರೆನ್ ನಾಯಕನಾಗಿರುವ "ದಾರಿ ತಪ್ಪಿದ ಮಗ" ಚಿತ್ರದ ಮಹೂರ್ತ ನೆರವೇರಿದೆ.
ಧೀರೆನ್ ರಾಜ್ ಕುಮಾರ್
ಜಯಣ್ಣ ಕಂಬೈನ್ಸ್ ನಿರ್ಮಾಣದ ಅನಿಲ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ "ದಾರಿ ತಪ್ಪಿದ ಮಗ" ಚಿತ್ರದ ಮಹೂರ್ತ ಶುಕ್ರವಾರ ನೆರವೇರಿದೆ. ಡ್ಸೆಂಬರ್ ಅಥವಾ ಜನವರಿಯಲ್ಲಿ ಚಿತ್ರದ ಚಿತ್ರೀಕರಣ  ಪ್ರಾರಂಭವಾಗುವ ನಿರೀಕ್ಷೆ ಇದೆ.
ಈ ಸಂದರ್ಭ ಪತ್ರಿಕೆಯು ಧೀರೆನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿಸಿದೆ.ಆಗ ನಟ ತಾನು ಈ ಚಿತ್ರಕ್ಕಾಗಿ ನಡೆಸಿದ್ದ ತಯಾರಿ ಜತೆಗೆ ತನ್ನ ಅಜ್ಜ, ವರನಟ ಡಾ. ರಾಜ್ ಅಭಿನಯದ ತಮ್ಮಿಷ್ಟದ ಸಿನೆಮಾ ಹಾಗೆ ವಿವಿಧ ವಿಚಾರದ ಕುರಿತು ಮಾತನಾಡಿದರು.
"ನನ್ನ ನಿರೀಕ್ಷೆ ಸಫಲವಾಗಿದೆ, ಕಡೆಗೂ ಉತ್ತಮ ಕಥೆ, ನಿರ್ದೇಶಕರ ಚಿತ್ರವೊಂದರ ಮೂಲಕ ನಾನು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲಿದ್ದೇನೆ. ಅಲ್ಲದೆ ಹೆಸರಾಂತ ನಿರ್ಮಾಣ ಸಂಸ್ಥೆ ನನ್ನ ಚೊಚ್ಚಲ ಚಿತ್ರ ನಿರ್ಮಾಣ ಮಾಡುತ್ತಿರುವುದು ನನಗೆ ಅತ್ಯಂತ ಖುಷಿ ತಂದಿದೆ.
"ಚಿತ್ರದ ಕಥೆಗೆ ಈ ಶೀರ್ಷಿಕೆ ಸೂಕ್ತವಾಗಿದೆ, ಡಾ. ರಾಜ್ ಅವರ ಚಿತ್ರದ ಶೀರ್ಷಿಕೆ ಇರುವ ಚಿತ್ರದಲ್ಲಿ ನಾನು ಅಭಿನಯಿಸುತ್ತಿರುವುದು ಕಾಕತಾಳೀಯವಾಗಿದೆ ಎಂದು ಧೀರೆನ್ ಹೇಳುತ್ತಾರೆ.
"ರಾಜಣ್ಣ ಅವರ ವಂಶದ ಕುಡಿ ಎಂಬ ಕಾರಣಕ್ಕೆ ನನ್ನ ಚಿತ್ರದ ಕುರಿತಂತೆ ಸಾಕಷ್ಟು ನಿರೀಕ್ಷೆಗಳಿದೆ, ನನಗೆ ಈ ಕುರಿತಂತೆ ತುಸು ಒತ್ತಡವೂ ಇದೆ. ಆದಈಇದೇ ಸಮಯದಲ್ಲಿ ನಾನು ವಿಶ್ವಾಸ ಹೊಂದಿದ್ದೇನೆ. ಅಂತಿಮವಾಗಿ ನಾನು ತೆರೆ ಮೇಲೆ ನನ್ನನ್ನು ಹೇಗೆ ಬಿಂಬಿಸಿಕೊಳ್ಳುವೆನೋ ಅದೇ ಮುಖ್ಯ ಹೊರತು ತಾರಾ ಕುಟುಂಬದ ಕುಡಿ ಎನ್ನುವುದಲ್ಲ" ನಟ ಹೇಳಿದ್ದಾರೆ.
"ನನ್ನ ಚಿತ್ರಕ್ಕೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುಅ ನಿರೀಕ್ಷೆ ಇದೆ" ಎನ್ನುವ ಧೀರೆನ್ ಗೆ ಮುಂದಿನ ದಿನಗಳಲ್ಲಿ ಹಾರರ್ ಚಿತ್ರಗಳಲ್ಲಿ ಕಾಣಿಸಿಕೊಲ್ಳುವ ಬಯಕೆ. "ನನಗೆ ಹಾರರ್ ಚಿತ್ರಗಳೆಂದರೆ ಬಲು ಇಷ್ಟ, ಪ್ರೇಕ್ಷಕರನ್ನು ಕುರ್ಚಿಗಳ ತುದಿಯಲ್ಲೇ ಅಂಟಿಕೊಳ್ಳುವಂತೆ ಮಾಡುವ ಭಯಾನಕ ಕಥೆಗಳಲ್ಲಿ ನಾನು ಪಾತ್ರ ವಹಿಸಬೇಕು" ಅವರು ಹೇಳಿದ್ದಾರೆ.
ಧೀರೆನ್ ಅವರಿಗೆ ಈ ಚಿತ್ರದಲ್ಲಿ ಮಾನ್ವಿತಾ ಹರೀಶ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಇಷ್ಟವಾದ ಅಣ್ಣಾವ್ರ ಚಿತ್ರ
"ನನ್ನ ಅಜ್ಜ ರಾಜ್ ಕುಮಾರ ವರ ಬಂಗಾರದ ಪಂಜರ, ಗಂಧದ ಗುಡಿ, ಬಂಗಾರದ ಮನುಷ್ಯ, ಸಂಪತ್ತಿಗೆ ಸವಾಲ್, ಇವೆಲ್ಲವೂ ನನ್ನಿಷ್ಟದ ಚಿತ್ರಗಳು" ನಟ ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT